ಕಾಂಗ್ರೆಸ್, ಬಿಜೆಪಿ, ಟಿಎಂಸಿ ಪಕ್ಷಗಳಿಗೆ ಈ ಎಲೆಕ್ಷನ್ ಬಹಳ ಮುಖ್ಯ
ಇಂಡಿಯಾ ಕೂಟ ರಚನೆ ಬಳಿಕ ಎದುರಾಗಿರುವ ಮೊದಲ ಚುನಾವಣೆ
6 ರಾಜ್ಯಗಳಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಅಗ್ನಿ ಪರೀಕ್ಷೆ
ದೇಶದ 6 ರಾಜ್ಯದಲ್ಲಿ ಇಂದು ಮಹತ್ವದ ಉಪಚುನಾವಣೆ ನಡೆಯುತ್ತಿದೆ. 6 ರಾಜ್ಯದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದೆ. ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಇಂಡಿಯಾ ಕೂಟ ರಚಿಸಿಕೊಂಡ ಬಳಿಕ ಎದುರಾಗಿರುವ ಮೊದಲ ಚುನಾವಣೆ ಇದಾಗಿದೆ. 6 ರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಮತದಾನ ನಡೆಯುತ್ತಿರೋ 6 ರಾಜ್ಯಗಳಲ್ಲಿ ಇಂಡಿಯಾ ಕೂಟದ ಮಿತ್ರಪಕ್ಷಗಳಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಈ 6 ರಾಜ್ಯಗಳಲ್ಲಿ ವಿರೋಧಪಕ್ಷಗಳು ಹೆಚ್ಚಿನ ಸೀಟುಗಳನ್ನ ಗೆದ್ದುಕೊಂಡ್ರೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಡಳಿತ ಪಕ್ಷದ ಪರ ಜನಾಭಿಮತ ಎಷ್ಟಿದೆ ಅನ್ನೋದು ಈ ಉಪಚುನಾವಣೆಯಿಂದ ನಿರ್ಧಾರವಾಗುತ್ತಿದೆ.
ಇದನ್ನೂ ಓದಿ: ಉದಯನಿಧಿ ‘ಸನಾತನ’ ವಿವಾದದಿಂದ ಇಂಡಿಯಾ ಕೂಟದಲ್ಲೇ ಮಹಾ ಬಿರುಕು?; ಕ್ಷಮೆಯಾಚಿಸಲು ಒತ್ತಡ
ಎಲ್ಲೆಲ್ಲಿ ಉಪಚುನಾವಣಾ ಸಮರ
ಉತ್ತರಪ್ರದೇಶ- ಘೋಸಿ
ಪಶ್ಚಿಮ ಬಂಗಾಳ- ಧೂಪಗುರಿ
ಕೇರಳ- ಪುತ್ತುಪ್ಪಲ್ಲಿ
ಉತ್ತರಾಖಂಡ- ಬಾಗೇಶ್ವರ
ಜಾರ್ಖಂಡ್- ಡುಮ್ರಿ
ತ್ರಿಪುರ – ಬೊಕ್ಸಾನಗರ ಮತ್ತು ಧನಪುರ್
6 ರಾಜ್ಯದ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಅಕಾಲಿಕ ನಿಧನ ಹಾಗೂ ಪಕ್ಷಾಂತರದ ಕಾರಣಗಳಿಂದ ಉಪಚುನಾವಣೆ ಎದುರಾಗಿದೆ. ಇಂದು ಸಂಜೆವರೆಗೂ ಮತದಾನ ನಡೆಯಲಿದ್ದು ಸೆಪ್ಟೆಂಬರ್ 8 ರಂದು ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಉಪಚುನಾವಣೆ 6 ರಾಜ್ಯದಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲವಾದ್ರೂ ಕಾಂಗ್ರೆಸ್, ಬಿಜೆಪಿ, ಟಿಎಂಸಿ ಪಕ್ಷಗಳಿಗೆ ಈ ಎಲೆಕ್ಷನ್ ರಿಸಲ್ಟ್ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ