newsfirstkannada.com

ಗ್ರಾಹಕರ ಸೋಗಿನಲ್ಲಿ ಬಂದ್ರು, 4 ಲಕ್ಷ ಸೀರೆ ಕದ್ರು! ಖತರ್ನಾಕ್​ ಕಳ್ಳಿಯರ ಗ್ಯಾಂಗನ್ನು​ ಹೆಡೆಮುರಿ ಕಟ್ಟಿದ ಪೊಲೀಸರು

Share :

11-11-2023

    ಸೀರೆ ಅಂಗಡಿಗೆ ಎಂಟ್ರಿ ಕೊಟ್ಟ 6 ಜನ ಮಹಿಳೆಯರು

    ದುಬಾರಿ ಸೀರೆಗಳನ್ನು ಕೊಂಡುಕೊಳ್ಳೋ ರೀತಿ ಆ್ಯಕ್ಟಿಂಗ್

    ಬಂಧಿತರಿಂದ 8 ಮೊಬೈಲ್ ಹಾಗೂ ಒಂದು ಕಾರು ವಶಕ್ಕೆ

ಗ್ರಾಹಕರ ಸೋಗಿನಲ್ಲಿ ಬಂದು 4 ಲಕ್ಷ ಮೌಲ್ಯದ ಸೀರೆ ಕದ್ದಿದ್ದ ಕಳ್ಳರ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿ ನಗರದಲ್ಲಿ ಸೀರೆ ಅಂಗಡಿಯೊಂದರಲ್ಲಿ ನಡೆದಿದೆ. ಗ್ರಾಹಕರ ಸೋಗಿನಲ್ಲಿ ಸೀರೆ ಅಂಗಡಿಗೆ 6 ಜನ ಮಹಿಳೆಯರು ಏಕಕಾಲಕ್ಕೆ ಎಂಟ್ರಿ ಕೊಟ್ಟಿದ್ದು, ಈ ವೇಳೆ ಕಳ್ಳತನ ಮಾಡಿದ್ದಾರೆ.

ನ.3ರಂದು ನಡೆದ ಘಟನೆ ಇದಾಗಿದೆ. ಮಹಿಳೆಯರು ಸೀರೆ ಮಹಿಳೆಯೊಳಗೆ ಹೊಕ್ಕಂತೆ ದುಬಾರಿ ಸೀರೆಗಳನ್ನು ಕೊಂಡುಕೊಳ್ಳೋ ರೀತಿ ಆ್ಯಕ್ಟಿಂಗ್ ಮಾಡಿದ್ದಾರೆ. ಬಳಿಕ ಐದಾರೂ ಸೀರೆಯನ್ನ ಒಟ್ಟಿಗೆ ಚೀಲದಲ್ಲಿಟ್ಟುಕೊಂಡಿದ್ಧಾರೆ. ಸಿಸಿಟಿವಿಯಲ್ಲಿ ಕಾಣದಂತೆ ಮಹಿಳೆಯರು ಸೀರೆಗಳನ್ನು ಕದ್ದು ಪರಾರಿಯಾಗಿದ್ಧಾರೆ.

ಇನ್ನು ಈ ಸಂಬಂಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮಹಾರಾಷ್ಟ್ರದ ಶಿರಡಿಯಲ್ಲಿ ಆರು ಜನ ಮಹಿಳೆಯರು ಸೇರಿ ಇಬ್ಬರು ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆಂಧ್ರಪ್ರದೇಶ ಮೂಲದ ಸುನಿತಾ ಈಟಾ(45), ಕನಕದುರ್ಗ ಚಡಾಲ್(36), ರಾಣಿ ಮಟ್ಟಪರ್ತಿ(33), ಮಣಿ ದೇವರಕೊಂಡ(39), ರಜನಿ ಮೇಚಾರಪ್ಪು(30), ಚುಕ್ಕಮ್ಮಾ ಪೊಣ್ಣ(50), ವೆಂಕಟೇಶರಾವ್ ಕನುಮುರಿ(41), ವೆಂಕಟೇಶ್‌ರಾವಲು ಉಸುರುಗಂಟಿ(34) ಎಂದು ಗುರುತಿಸಲಾಗಿದೆ. ಇನ್ನು ಬಂಧಿತರಿಂದ ಎಂಟು ಮೊಬೈಲ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗ್ರಾಹಕರ ಸೋಗಿನಲ್ಲಿ ಬಂದ್ರು, 4 ಲಕ್ಷ ಸೀರೆ ಕದ್ರು! ಖತರ್ನಾಕ್​ ಕಳ್ಳಿಯರ ಗ್ಯಾಂಗನ್ನು​ ಹೆಡೆಮುರಿ ಕಟ್ಟಿದ ಪೊಲೀಸರು

https://newsfirstlive.com/wp-content/uploads/2023/11/Saari-Gang.jpg

Load More