newsfirstkannada.com

KSRTC ಬಸ್ ಹರಿದು ದುರಂತ.. 6 ವರ್ಷದ ಬಾಲಕನ ಜೀವ ಉಳಿಸಲು ಹರಸಾಹಸ; ಕೊನೆಗೆ ಏನಾಯ್ತು?

Share :

Published August 22, 2024 at 8:32pm

    ಮಹಾರಾಷ್ಟ್ರದಿಂದ ಅಜ್ಜಿಯ ಮನೆಗೆ ಬಂದಿದ್ದ 6 ವರ್ಷದ ಬಾಲಕ

    ಸರ್ಕಾರಿ ಬಸ್ ಹರಿದು ಬಾಲಕ ಗಂಭೀರವಾಗಿ ಗಾಯಗೊಂಡಿದ್ದ

    ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಿದ ಸಂಬಂಧಿಕರು

ಬೀದರ್: ಅಜ್ಜಿಯ ಮನೆಗೆ ಬಂದಿದ್ದ 6 ವರ್ಷದ ಬಾಲಕ ಸಾರಿಗೆ ಬಸ್ ದುರಂತದಲ್ಲಿ ಕಣ್ಣು ಮುಚ್ಚಿರುವ ದಾರುಣ ಘಟನೆ ಹುಲಸೂರು ತಾಲೂಕಿನ ಮಿರಖಲ್ ಗ್ರಾಮದಲ್ಲಿ ನಡೆದಿದೆ. ಗಣೇಶ್ ಪೇಟಕಾರ್ (6) ಸಾವನ್ನಪ್ಪಿದ ಬಾಲಕ.

ಇದನ್ನೂ ಓದಿ: 10 ವರ್ಷದ ಲವ್​.. ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ಯುವತಿ; ವಿಚಾರ ಕೇಳಿ ಬಿಚ್ಚಿ ಬಿದ್ದ ಫ್ಯಾಮಿಲಿ! 

ಮಹಾರಾಷ್ಟ್ರ ಮೂಲದ ಗಣೇಶ್ ಪೇಟಕಾರ್ ತನ್ನ ಅಜ್ಜಿಯ ಮನೆಗೆಂದು ಬೀದರ್‌ ಜಿಲ್ಲೆಯ ಮಿರಖಲ್ ಗ್ರಾಮಕ್ಕೆ ಬಂದಿದ್ದ. ಈ ಮಧ್ಯೆ ಸರ್ಕಾರಿ ಬಸ್ ಹರಿದು ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸುವ ವೇಳೆ ಬಾಲಕ ಸಾವನ್ನಪ್ಪಿದ್ದಾನೆ.

ಕಲ್ಯಾಣ ಕರ್ನಾಟಕದ ಸಾರಿಗೆ ಬಸ್‌ ಬಸವಕಲ್ಯಾಣದಿಂದ ಮಿರಖಲ್ ಮಾರ್ಗವಾಗಿ ನಿಲಂಗಾಕ್ಕೆ ತೆರಳುತ್ತಿತ್ತು. ಮಿರಖಲ್‌ ಗ್ರಾಮದಲ್ಲಿ ಬಾಲಕನ ಮೇಲೆ ಬಸ್ ಹರಿದ ಪರಿಣಾಮ ಈ ದುರಂತ ನಡೆದಿದೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಹುಲಸೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC ಬಸ್ ಹರಿದು ದುರಂತ.. 6 ವರ್ಷದ ಬಾಲಕನ ಜೀವ ಉಳಿಸಲು ಹರಸಾಹಸ; ಕೊನೆಗೆ ಏನಾಯ್ತು?

https://newsfirstlive.com/wp-content/uploads/2024/08/Bidar-KSRTC-Bus-Accident.jpg

Load More