/newsfirstlive-kannada/media/post_attachments/wp-content/uploads/2024/08/TN_POLICE.jpg)
ಹೈದರಾಬಾದ್​: ಕಿಡ್ನಾಪ್​ ಮಾಡಲಾಗಿದ್ದ 6 ವರ್ಷದ ಬಾಲಕಿಯನ್ನ ಕೇವಲ 12 ಗಂಟೆಯಲ್ಲೇ ವಿಶೇಷ ಕಾರ್ಯಾಚರಣೆ ಮೂಲಕ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯು ತೆಲಂಗಾಣದ ಹೈದರಾಬಾದ್​ ನಗರದಲ್ಲಿ ನಡೆದಿದೆ.
ಇದನ್ನೂ ಓದಿ:ಮತ್ತೆ ಭುಗಿಲೆದ್ದ ಹಿಂಸಾಚಾರ, 72 ಸಾವು.. ಪ್ರಧಾನಿ ರಾಜೀನಾಮೆಗೆ ಆಗ್ರಹ; ಭಾರತೀಯರಿಗೆ ಹೇಳಿದ್ದೇನು?
ಮಗಳು ಕಾಣೆಯಾಗುತ್ತಿದ್ದಂತೆ ತಾಯಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ನನ್ನ ಮಗಳು ಹಾಗೂ ಸೋದರಸಂಬಂಧಿ ದೇವಾಲಯದ ಬಳಿ ಆಟ ಆಡಲು ಹೋಗಿದ್ದರು. ಸೋದರ ಸಂಬಂಧಿ ವಾಪಸ್​ ಬಂದಿದ್ದರೆ, ಮಗಳು ಬಂದಿಲ್ಲ ಎಂದು ದೂರು ನೀಡಿದ್ದಳು. ದೂರು ನೀಡುತ್ತಿದ್ದಂತೆ ತಕ್ಷಣ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯನ್ನ ಕರೆದುಕೊಂಡು ಹೋಗುತ್ತಿರುವುದು ಪೊಲೀಸರಿಗೆ ಗೊತ್ತಾಗಿದೆ.
ಆಟೋದಲ್ಲಿ ಅಪರಿಚತ ವ್ಯಕ್ತಿ ತನ್ನೊಂದಿಗೆ ಬಾಲಕಿಯನ್ನು ಕರೆದುಕೊಂಡು ಹೋಗಿ ಬಳಿಕ ಸರ್ಕಾರಿ ಬಸ್​ ಮೂಲಕ ಅಫ್ಜಗುಂಜ್ ಬಸ್ ನಿಲ್ದಾಣದಲ್ಲಿ ಇಳಿದಿದ್ದಾನೆ. ಬಳಿಕ ಕೊತ್ತೂರು ಮಂಡಲದ ಗ್ರಾಮಕ್ಕೆ ಹೋಗಿದ್ದಾನೆ. ಇಲ್ಲಿಗೆ ವಿಶೇಷ ಪೊಲೀಸ್ ತಂಡ ತೆರಳಿ ಆರೋಪಿಯನ್ನು ಪತ್ತೆ ಹಚ್ಚಿ ಬಾಲಕಿಯನ್ನು ಕೇವಲ 12 ಗಂಟೆಯಲ್ಲೇ ರಕ್ಷಣೆ ಮಾಡಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆಯನ್ನ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕಿಯನ್ನು ಕಿಡ್ನಾಪ್​ ಮಾಡಿದ್ದ 32 ವರ್ಷದ ವ್ಯಕ್ತಿ ಬಿಹಾರ ಮೂಲದವನಾಗಿದ್ದು ಜೀವನಕ್ಕಾಗಿ ಕೂಲಿ ಮಾಡಿಕೊಂಡಿದ್ದನು. ಆದರೆ ಬಾಲಕಿಯ ತಂದೆಯಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಕಿಡ್ನಾಪ್ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಈ ಹಿಂದೆಯೇ ಬಿಹಾರದಲ್ಲಿ ಬೈಕ್ ಕಳ್ಳತನ ಮತ್ತು ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us