newsfirstkannada.com

ಬೆಂಗಳೂರಲ್ಲಿ ತಲೆ ಎತ್ತಲಿದೆ 63 ಅಡಿ ಎತ್ತರದ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆ

Share :

24-08-2023

  ರಾಮ ಮತ್ತು ಹನುಮನ ಭಕ್ತರಿಗೆ ಐತಿಹಾಸಿಕ ದಿನ..!

  ರಾಮ ಜನ್ಮಭೂಮಿಯಿಂದ ಮಣ್ಣನ್ನು ತರಲಾಗಿದೆ

  ಯಶ್, ಅಪ್ಪು ಪ್ರತಿಮೆ ನಿರ್ಮಿಸಿದ್ದ ಶಿಲ್ಪಿಯಿಂದ ಕೆತ್ತನೆ

ಬೆಂಗಳೂರಿನಲ್ಲಿರುವ‌ ರಾಮ ಭಕ್ತರಿಗೆ ಸುವರ್ಣ ಅಕ್ಷರದಲ್ಲಿ ಬರೆದ ದಿನವಾಗಿದೆ. ಇದೇ ಮೊದಲ ಬಾರಿಗೆ ಇಡೀ ಕರ್ನಾಟಕದಲ್ಲಿ 63 ಅಡಿ ರಾಮಾಂಜನೇಯರ ಬೃಹತ್ ಪ್ರತಿಮೆ ಶಂಕುಸ್ಥಾಪನೆ ಮಾಡಲಾಗಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ 63 ಅಡಿ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆಯನ್ನು ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು, ಸಿದ್ದಗಂಗಾ ಮಠ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ಅಮೃತ ಹಸ್ತದಿಂದ ಶಂಕುಸ್ಥಾಪನೆ ಮಾಡಲಾಗಿದೆ. ರಾಜಾಜಿನಗರದ ಶ್ರೀರಾಮಮಂದಿರ ದೇವಸ್ಥಾನ ಅವರಣದಲ್ಲಿ ಕಾರ್ಯಕ್ರಮ ನಡೆದಿದೆ.

ಅಯ್ಯೋದ್ಯೆ ರಾಮ ಮಂದಿರಕ್ಕೆ ಚಾಲನೆ ಸಿಕ್ಕ ಕೆಲ ದಿನಗಳಲ್ಲೇ ರಾಮಾಂಜನೇಯ್ಯ ಪ್ರತಿಮೆಯನ್ನು ಅನಾವರಣ ಮಾಡಲು ಶ್ರೀರಾಮ ಸೇನಾ ಮಂಡಳಿ ನಿರ್ಧರಿಸಿದೆ. ಅಲ್ಲದೇ ರಾಮ ಜನ್ಮಭೂಮಿಯಿಂದ ಮಣ್ಣನ್ನ ತರಲಾಗಿದೆ. ಇಂದು ಶಂಕುಸ್ಥಾಪನೆ ಮಾಡಲಾಗಿದ್ದು, ಸೋಮವಾರದಿಂದ ಇದರ ಕಾಮಗಾರಿ ಪ್ರಾರಂಭವಾಗಲಿದೆ.

ಈ ಪ್ರತಿಮೆಗೆ ಸುಮಾರು ಒಂದುವರೆ ಕೋಟಿ ಖರ್ಚು ತಗಲುವುದಾಗಿ ಮಂಡಳಿಯವರು ಮಾಹಿತಿ ಕೊಟ್ಟಿದೆ. ಈಗಾಗಲೇ ಭಕ್ತರು ರಾಮನ ಪ್ರತಿಮೆ ಸುದ್ದಿ ತಿಳಿದು ಲಕ್ಷಗಟ್ಟಲೇ ದೆಣಿಗೆ ನೀಡುತ್ತಿದ್ದಾರೆ. ರಾಮಾಂಜನೇಯರ ಪ್ರತಿಮೆಯನ್ನು ಕಾಂಕ್ರೀಟ್ ಮತ್ತು ಕಬ್ಬಿಣದಿಂದ ನಿರ್ಮಾಣ ಮಾಡಲಾಗುತ್ತದೆ ಎಂದು ಶಿವಮೊಗ್ಗದ ಶಿಲ್ಪಿ ಜೀವನ್ ತಿಳಿಸಿದ್ದಾರೆ.

ಪೂಜೆ ಸಂದರ್ಭದಲ್ಲಿ ಪ್ರತಿಮೆಯ ಫೋಟೋ ಅನಾವರಣ
ಪೂಜೆ ಸಂದರ್ಭದಲ್ಲಿ ಪ್ರತಿಮೆಯ ಫೋಟೋ ಅನಾವರಣ

ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ 63 ಎತ್ತರವಾದ ರಾಮಾಂಜನೇಯರ ಪ್ರತಿಮೆ ಸ್ಥಾಪನೆ ಮಾಡಲಾಗುತ್ತಿದೆ. 6 ತಿಂಗಳುಗಳ ಕಾಲ ಪ್ರತಿಮೆ ಕೆಲಸ ನಡೆಯುತ್ತಿದ್ದು, ಸುಮಾರು 25 ರಿಂದ 30 ಶಿಲ್ಪಿಗಳಿಂದ ಕೆತ್ತನೆ ಕೆಲಸ ಮಾಡಲಾಗುತ್ತಿದೆ. ಈ ಪ್ರತಿಮೆ ಭಗವಾನ್ ಶ್ರೀ ರಾಮಚಂದ್ರ ಭಾರತದ ಆಸ್ಮಿತೆಯಾಗಿದೆ. ಶ್ರೀರಾಮ ಎಂದರೆ ಸಕಲ ದೈವ ಗುಣಗಳವುಳ್ಳ ಮೂರ್ತಿ ಸ್ವರೂಪವಾಗಿದೆ. ರಾಷ್ಟ್ರಪಿತ ಮಹಾತ್ಮಗಾಂಧಿ ಹಲವಾರು ಬಾರಿ ರಾಮರಾಜ್ಯವಾಗಬೇಕು ಎಂದು ಹೇಳಿದ್ದರು ಎಂದು ರಾಮನ ಪ್ರಾಮುಖ್ಯ ಬಗ್ಗೆ ಮಂಡಳಿ ಸಾರಿ ಹೇಳಿ ಸಿದ್ದಗಂಗಾ ಶ್ರೀಗಳುಉ ಹೇಳಿದ್ದಾರೆ.

ಇನ್ನು ಶಿಲ್ಪಿ ಜೀವನ್ ಬಗ್ಗೆಯೂ ಭಕ್ತರು ಹೆಚ್ಚು ನಂಬಿಕೆ ಇಟ್ಟಿದ್ದಾರೆ. ಏಕೆಂದರೆ ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಕೆತ್ತನೆ, ಬಳ್ಳಾರಿಯಲ್ಲಿ 23 ಎತ್ತರದ ಪುನೀತ್ ರಾಜ್​​ಕುಮಾರ್ ಪ್ರತಿಮೆ ಕೆತ್ತಿದ ಶಿಲ್ಪಿ ಜೀವನ್ ಅವರೇ ಆಗಿದ್ದಾರೆ. ಹೀಗಾಗಿ ಅವರ ಮೇಲೆ ಹೆಚ್ಚು ಭರವಸೆ ಉಂಟಾಗಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿಯಲ್ಲಿ ರಾಮನ ಭಕ್ತಿ ಮತ್ತು ಭಕ್ತರ ಶಕ್ತಿ ತೋರಿಸುವ ಕೆಲಸ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ತಲೆ ಎತ್ತಲಿದೆ 63 ಅಡಿ ಎತ್ತರದ ಶ್ರೀ ರಾಮಾಂಜನೇಯರ ಬೃಹತ್ ಪ್ರತಿಮೆ

https://newsfirstlive.com/wp-content/uploads/2023/08/BNG_RAMA.jpg

Load More