newsfirstkannada.com

ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಕೆ ಆರೋಪ; ತಹಶೀಲ್ದಾರ್ ಅಜಿತ್ ರೈ ಪೋಸ್ಟಿಂಗ್​ಗೆ ಭಾರೀ ವಿರೋಧ

Share :

05-07-2023

    ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ಲೋಕಾಯುಕ್ತ ದಾಳಿ ಕೇಸ್​​

    ಕೋಟಿ, ಕೋಟಿ ಆಸ್ತಿಯ ಲೆಕ್ಕ ಕೊಡುವಲ್ಲಿ ವಿಫಲರಾದ್ರಾ ಅಜಿತ್ ರೈ?

    ಅಜಿತ್ ರೈ ವರ್ಗಾವಣೆ ವಿರುದ್ಧ ರಾಯಚೂರಿನಲ್ಲಿ ಭಾರೀ ವಿರೋಧ

ರಾಯಚೂರು: ಇತ್ತೀಚಿಗೆ ಅಕ್ರಮ ಆಸ್ತಿ ಆರೋಪದಡಿ ಕೆ.ಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಅವರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಈ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಸೇರಿದಂತೆ ಕಾರು, ಬೈಕ್‌, ಬೆಲೆಬಾಳುವ ವಸ್ತುಗಳು ಪತ್ತೆಯಾಗಿದ್ದವು. ಆದ್ರೆ ದಾಳಿ ವೇಳೆ ಸಿಕ್ಕ ಕಂತೆ ಕಂತೆ ನೋಟುಗಳು, ಆಸ್ತಿ ದಾಖಲೆಗಳು, ಚಿನ್ನಾಭರಣಗಳಿಗೆ ಸರಿಯಾದ ದಾಖಲೆಗಳಿರಲಿಲ್ಲ. ಹೀಗಾಗಿ ತಹಶಿಲ್ದಾರ್ ಹುದ್ದೆಯಿಂದ ಅಜಿತ್​​ ರೈ ಅವರನ್ನು ಅಮಾನತ್ತು ಮಾಡಲಾಗಿದೆ. ಬಳಿಕ ಪೊಲೀಸ್​​ ಅಧಿಕಾರಿಗಳು ಅಜಿತ್​​ ರೈರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ:ತಹಶೀಲ್ದಾರ್​ ಅಜಿತ್​​ ರೈನನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು

ಇದೀಗ ತಹಶೀಲ್ದಾರ್ ಅಜೀತ್ ರೈ ಪೋಸ್ಟಿಂಗ್​​ಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಅಜಿತ್ ರೈ ಅವರ ವರ್ಗಾವಣೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಿರವಾರ ತಾಲೂಕಿಗೆ ತಹಶೀಲ್ದಾರ್ ಗ್ರೇಡ್ 2 ಹುದ್ದೆಗೆ ಹಿಂಬಡ್ತಿಯಾಗಿ ವರ್ಗಾವಣೆ ಆಗಿರೋ ಅಜಿತ್ ರೈ ವಿರುದ್ಧ ಸಾಮಾಜಿಕ ಜಾಲತಾಣದ ಸೇರಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ತಹಶೀಲ್ದಾರ್ ಹುದ್ದೆಯಿಂದ ಅಮಾನತ್ತಿನಲ್ಲಿದ್ರೂ ವರ್ಗಾವಣೆ ಮಾಡಿ ಆದೇಶ ಜಾರಿಯಾಗಿದೆ. ಇದೇ 30 ರಂದು ನೇಮಕಾತಿ ಮಾಡಿ ಸರ್ಕಾರ ಆದೇಶ ಮಾಡಿತ್ತು. ನೇಮಕಾತಿ ಆದೇಶ ರದ್ದುಪಡಿಸುವಂತೆ ಎಲ್ಲೆಡೆ ಒತ್ತಾಯದ ಕೂಗು ಕೇಳಿ ಬರುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿರ ಕೋಟಿ ಅಕ್ರಮ ಆಸ್ತಿ ಗಳಿಕೆ ಆರೋಪ; ತಹಶೀಲ್ದಾರ್ ಅಜಿತ್ ರೈ ಪೋಸ್ಟಿಂಗ್​ಗೆ ಭಾರೀ ವಿರೋಧ

https://newsfirstlive.com/wp-content/uploads/2023/06/AJITH.jpg

Load More