ದೇಶದ ಅತ್ಯಂತ ಶ್ರೀಮಂತ ಹಾಗೂ ಅಪರೂಪದ ಗಣಪ ಇದು!
ಬಂಗಾರದ ಗಣಪನನ್ನ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ದೌಡು
69ನೇ ವರ್ಷದ ಗಣಪತಿಗೆ 69 ಕೆ.ಜಿ ಚಿನ್ನದಿಂದ ವಿಜೃಂಭಣೆ ಅಲಂಕಾರ
ಗಣೇಶ ಹಬ್ಬ ಬಂತಂದ್ರೆ ವೆರೈಟಿ ವೆರೈಟಿ ಗಣೇಶನನ್ನ ಕೂರಿಸೋದು ನೋಡಿರ್ತೀರಾ. ಆದರೆ ದೇಶದ ಅತ್ಯಂತ ಶ್ರೀಮಂತ ಗಣಪನನ್ನು ಎಲ್ಲಾದರೂ ನೋಡಿದ್ದೀರಾ? ಈ ಗಣೇಶನ ಬೆಲೆ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗುತ್ತೀರಾ. ಇದು ಬರೀ ಚಿನ್ನ, ಬೆಳ್ಳಿಯಿಂದಲೇ ಅಲಂಕಾರಗೊಂಡಿರುವ ಗೋಲ್ಡನ್ ಗಣಪನ ಕಥೆ. ದೇಶಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಸಡಗರ ಜೋರಾಗಿದೆ. ವಿಘ್ನೇಶ್ವರನ ಭಕ್ತರು ಬಗೆ ಬಗೆಯ ಗಣೇಶನ ಮೂರ್ತಿಗಳನ್ನ ಕೂರಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನನ್ನ ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಗಣೇಶ ಹಬ್ಬ ಅಂದ್ರೆ ಎಲ್ಲಾ ಜನರಿಗೂ ಸಂಭ್ರಮ. ಯಾವುದೇ ಜಾತಿ-ಧರ್ಮ ಭೇದ ಭಾವವಿಲ್ಲದೇ ಈ ಹಬ್ಬದಲ್ಲಿ ತೊಡಗಿಕೊಳ್ತಾರೆ. ಅದರಲ್ಲೂ ಯುವಕರಿಗಂತೂ ಹತ್ತು ಹದಿನೈದು ದಿನನೂ ಹಬ್ಬ ಅಂತಾನೇ ಹೇಳಬಹುದು. ನಮ್ಮ ಗಣೇಶ ಹಂಗಿರಬೇಕು, ನಮ್ಮ ಗಣೇಶನ ಡೆಕೋರೇಷನ್ ಹಿಂಗಿರಬೇಕು ಅಂತ ತುಂಬಾ ಪ್ಲಾನ್ ಮಾಡಿ ಸೆಲೆಬ್ರೇಟ್ ಮಾಡ್ತಾರೆ. ಹಾಗಾಗಿ ಹಬ್ಬದಿಂದ ಹಬ್ಬಕ್ಕೆ ವಿಭಿನ್ನ-ವಿಶೇಷ ಗಣೇಶ ಮೂರ್ತಿಗಳನ್ನ ನೋಡಬಹುದು. ಇದುವರೆಗೂ ಸಿನಿಮಾ ಹೀರೋಗಳ ಸ್ಟೈಲ್, ಸ್ಟಾರ್ ಕ್ರಿಕೆಟಿಗರ ಸ್ಟೈಲ್, ನೆಚ್ಚಿನ ಪೊಲಿಟಿಶಿಯನ್ ಸ್ಟೈಲ್ನಲ್ಲೂ ಗಣೇಶನ ಮೂರ್ತಿಗಳನ್ನ ನೋಡಿದ್ದೇವೆ. ಆದರೆ ಇದು ಸಾಮಾನ್ಯ ಗಣೇಶ ಅಲ್ಲ. ಸಿನಿಮಾ ಸ್ಟೈಲ್ ಗಣೇಶನೂ ಅಲ್ಲ. ಇದು ಚಿನ್ನದಿಂದ ಸುದ್ದಿಯಾಗಿರುವ ಬಂಗಾರದ ಗಣೇಶ.
ಇದು ದೇಶದ ಅತ್ಯಂತ ದುಬಾರಿ ಗಣಪ!
69 ಕೆಜಿ ಚಿನ್ನ.. 336 ಕೆಜಿ ಬೆಳ್ಳಿ ಗಣೇಶ!
ದೇಶದ ಅತ್ಯಂತ ದುಬಾರಿ ಮತ್ತು ಶ್ರೀಮಂತ ಗಣಪ. ಯಾಕಂದ್ರೆ ಈ ಗಣಪನ ಅಲಂಕಾರಕ್ಕೆ ಬರೋಬ್ಬರಿ 69 ಕೆ.ಜಿ ಚಿನ್ನ ಹಾಗೂ 336 ಕೆ.ಜಿ ಬೆಳ್ಳಿ ಬಳಸಲಾಗಿದೆ. ಸಾಮಾನ್ಯವಾಗಿ ಗಣೇಶ ಮೂರ್ತಿಗಳ ವಿಷಯದಲ್ಲಿ 100, 200 ಅಡಿ ಗಣೇಶ, 100, 200 ಕೆಜಿ ಗಣೇಶ ಎನ್ನುವ ವಿಶೇಷ ದಾಖಲೆಗಳನ್ನ ನೋಡಿರುತ್ತೀರಾ. ಆದರೆ ಇದು ಬರೋಬ್ಬರಿ 69 ಕೆ.ಜಿ ಚಿನ್ನ ಹಾಗೂ 336 ಕೆ.ಜಿ ಬೆಳ್ಳಿಯಿಂದ ಅಲಕೃಂತವಾಗಿರುವ ದುಬಾರಿ ಗಣೇಶ. ಈ ಗಣೇಶನನ್ನ ನೋಡುತ್ತಿದ್ದರೆ ಚಿನ್ನದ ಅಂಗಡಿಯೇ ದೇವರ ರೂಪ ತಾಳಿದೆ ಅನಿಸುತ್ತದೆ. ಚರ್ತುಮುಖನ ಎಲ್ಲಾ ಭಾಗಗಳು ಫಳ ಫಳ ಅಂತ ಹೊಳಿತಿದೆ. ಗಣಪನ ಈ ಪ್ರತಿರೂಪ ನೋಡುತ್ತಿದ್ದರೆ ಹಾಗೇ ನೋಡ್ತಾನೇ ಇರಬೇಕು ಅನ್ನುವಷ್ಟು ಹೊಳಪು, ಕಾಂತಿ. ಈ ಬಂಗಾರದ ಗಣಪನನ್ನ ಕಣ್ತುಂಬಿಕೊಳ್ಳೋದಕ್ಕೂ ನೂರಾರು ಸಂಖ್ಯೆಯಲ್ಲಿ ಭಕ್ತಗಣ ನೆರದಿದ್ದು, ವಿಘ್ನೇಶ್ವರನ ಆಶೀರ್ವಾದಕ್ಕೆ ಪಾತ್ರರಾಗ್ತಿದ್ದಾರೆ.
ಇದು ದೇಶದ ಅತ್ಯಂತ ಶ್ರೀಮಂತ ಹಾಗೂ ಅಪರೂಪದ ಗಣಪ. ಇದುವರೆಗೂ ದೇಶದ ಯಾವ ಮೂಲೆಯಲ್ಲೂ ಇಂಥಾ ದುಬಾರಿ ಗಣೇಶನನ್ನ ಕೂರಿಸಿರುವ ಉದಾಹರಣೆ ಇಲ್ಲ. ಈ ಶ್ರೀಮಂತ ಗಣೇಶನನ್ನ ಮುಂಬೈನ ಕಿಂಗ್ಸ್ ಸರ್ಕಲ್ನಲ್ಲಿ ಕೂರಿಸಲಾಗಿದೆ. ಜಿಎಸ್ಬಿ ಸೇವಾ ಮಂಡಲದವರು ಪ್ರತಿ ವರ್ಷವೂ ಅದ್ಧೂರಿಯಾಗಿ ಗಣಪತಿ ಉತ್ಸವ ಮಾಡುತ್ತಾ ಬಂದಿದ್ದು, ಅದರಂತೆ ಈ ವರ್ಷವೂ ಬಹಳ ಗ್ರ್ಯಾಂಡ್ ಆಗಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಹಿಂದೆ ಮುಂಬೈನಲ್ಲಿ ಜಿಎಸ್ಬಿ ಸೇವಾ ಮಂಡಲದವರು ಕೂರಿಸುವ ಗಣೇಶ ಉತ್ಸವ ಬಹಳ ಪ್ರಸಿದ್ಧಿ ಪಡೆದಿದೆ. ಸುಮಾರು 68 ವರ್ಷದಿಂದಲೂ ಈ ಪ್ರತೀತಿ ನಡೆದು ಬಂದಿದ್ದು, ಇದು 69ನೇ ವರ್ಷದ್ದಾಗಿದೆ. ಹಾಗಾಗಿ ಈ ವರ್ಷದ ಗಣಪತಿಗೆ 69 ಕೆಜಿ ಚಿನ್ನದಿಂದ ಅಲಂಕಾರ ಮಾಡಲಾಗಿದೆಯಂತೆ. ಈ ಬಗ್ಗೆ ಜಿಎಸ್ಬಿ ಸೇವಾ ಮಂಡಲದ ಪ್ರತಿನಿಧಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಸಾರಿ ನಮ್ಮ ಗಣಪತಿಗೆ 36 ಕಿಲೋ ಬೆಳ್ಳಿ ಹಾಗೂ 250 ಗ್ರಾಂ ಚಿನ್ನದ ಪೆಂಡೆಂಟ್ ಬಂದಿದೆ. ಇದು ನಿಜಕ್ಕೂ ತುಂಬಾ ದೊಡ್ಡದು. ಒಟ್ಟಾರೆ ಈಗ ನಮ್ಮ ಗಣಪನ ಬಳಿ ಒಟ್ಟಾರೆ 69 ಕೆ.ಜಿ ಚಿನ್ನವಿದೆ. 300 ಕೆಜಿ ಬೆಳ್ಳಿಯಿದೆ. ಪೆಂಡೆಂಟ್ ಬಂದಿರುವ ಈ 36 ಕೆಜಿಯೂ ಸೇರಿದ್ರೆ 336 ಕೆಜಿ ಬೆಳ್ಳಿ ಆಗುತ್ತೆ.
– ಜಿಎಸ್ಬಿ ಸೇವಾ ಮಂಡಲದ ಸದಸ್ಯರು
ದುಬಾರಿ ಗಣೇಶನಿಗೆ 360 ಕೋಟಿ ರೂ. ವಿಮೆ!
69 ಕೆಜಿ ಮತ್ತು 336 ಕೆಜಿ ಬೆಳ್ಳಿ ಅಂದ್ಮೇಲೆ ಭದ್ರತೆ ಬಗ್ಗೆ ಎಚ್ಚರಿಕೆ ವಹಿಸೋದು ಮುಖ್ಯ ಅಲ್ಲವೇ? ಈ ನಿಟ್ಟಿನಲ್ಲಿ ಈ ಗಣೇಶನಿಗೆ 360 ಕೋಟಿ ರೂಪಾಯಿಯ ವಿಮೆ ಮಾಡಿಸಲಾಗಿದೆಯಂತೆ. ಕಳೆದ ವರ್ಷ 315 ಕೋಟಿ ರೂ. ವಿಮೆ ಮಾಡಿಸಲಾಗಿತ್ತು. ಈ ಸಲ 360 ಕೋಟಿ ವಿಮೆ ಮಾಡಲಾಗಿದೆ ಎಂದು ಜಿಎಸ್ಬಿ ಸೇವಾ ಮಂಡಲದ ಸದಸ್ಯರು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಪೂಜಾರಿಗಳು, ಭಕ್ತರ ಇನ್ಶುರೆನ್ಸ್ 290 ಕೋಟಿ, ಆಭರಣಗಳದ್ದು 39 ಕೋಟಿ ಹಾಗೂ ಸಾರ್ವಜನಿಕ ಹೊಣೆಗಾರಿಕೆಗಾಗಿ 20 ಕೋಟಿಯ ವಿಮೆ ಮಾಡಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಮುಂಬೈನ ಈ ಗಣೇಶ ಉತ್ಸವ ಸೆಪ್ಟೆಂಬರ್ 19ರಿಂದ ಸೆಪ್ಟೆಂಬರ್ 29ನೇ ತಾರೀಕಿನವರೆಗೂ ಹತ್ತು ದಿನಗಳ ಕಾಲ ನಡೆಯಲಿದೆ. ಈ ಹತ್ತು ದಿನದಲ್ಲಿ ಪ್ರತಿದಿನವೂ ವಿಶೇಷ ಪೂಜೆಗಳು ಸಾಗಲಿದೆ. ಈ ಸಲ ಬಹಳ ಪ್ರಮುಖವಾಗಿ ಚಂದ್ರಯಾನ 3 ಸಕ್ಸಸ್ ಹಾಗೂ ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣ ಸುಗಮವಾಗಲಿ ಆಗಲಿ ಎಂಬ ಉದ್ದೇಶದಿಂದ ಸೆಪ್ಟೆಂಬರ್ 19 ಮತ್ತು ಸೆಪ್ಟೆಂಬರ್ 20 ರಂದು ವಿಶೇಷ ಹೋಮ ಹವನವನ್ನ ಹಮ್ಮಿಕೊಳ್ಳಲಾಗಿದೆಯಂತೆ. ಈ ಮೂಲಕ ಹಿಂದೂ ಸಮಾಜದ ಏಳಿಗೆಗೆ ಗಣಪನ ಆಶೀರ್ವಾದ ಸಿಗಲಿದೆ ಎನ್ನುವ ನಂಬಿಕೆ. ಈ ಭಾರಿ ಬೆಲೆ ಬಾಳುವ ಚಿನ್ನ, ಬೆಳ್ಳಿಯಿಂದ ಗಣಪನ ಅಲಂಕಾರ ಮಾಡಿರೋದ್ರಿಂದ ಭದ್ರತೆ ದೃಷ್ಟಿಯಿಂದ ಬಹಳ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಗಣೇಶ ಪೆಂಡಲ್ ಸುತ್ತಮುತ್ತ ಸಾಕಷ್ಟು ಸಿಸಿಟಿವಿಗಳನ್ನ ಫಿಕ್ಸ್ ಮಾಡಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿಯ ಸಹಕಾರ ಪಡೆದುಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ನೇಮಿಸಿಕೊಳ್ಳಲಾಗಿದೆ.
ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯಬಾರದು ಹಾಗೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ಸಂಪ್ರದಾಯವಾಗಿ, ಬಹಳ ಶಾಂತಿಯುತವಾಗಿ ಈ ಉತ್ಸವ ಜರುಗಿಸುವುದು ಜಿಎಸ್ಬಿ ಮಂಡಲದ ಉದ್ದೇಶ. ಈ ವರ್ಷದ ಗಣೇಶ ಸಂಭ್ರಮ ಸಖತ್ ಜೋರಾಗಿದ್ದು, ಈ ಜೋರು ಸಂಭ್ರಮದ ನಡುವೆ ಬಂಗಾರದ ಗಣಪ ಬಹಳ ಗಮನ ಸೆಳೆದಿದ್ದಾನೆ. ಸಕಲ ಜೀವಿಗಳ ಮೇಲೂ ವಿಘ್ನವಿನಾಶಕನ ಅಶೀರ್ವಾದ ಇರಲಿ ಅಂತ ಹೇಳುತ್ತಾ ಮತ್ತೊಮ್ಮೆ ನಿಮಗೆ ಗಣೇಶ ಹಬ್ಬದ ಶುಭಾಶಯಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ