ಮೈಸೂರಿನ ಶ್ರೀಗಂಧ ಮರದಿಂದ ತಯಾರಿಸಿದ್ದ ವಿಶೇಷ ಬಾಕ್ಸ್
ಆ ಶ್ರೀಗಂಧ ಬಾಕ್ಸ್ ಒಳಗೆ ಏನೆಲ್ಲಾ ಉಡುಗೊರೆ ಇದೆ ಗೊತ್ತಾ..?
ಅಂತಾರಾಷ್ಟ್ರೀಯ ಸಂಬಂಧ ಬಿಂಬಿಸುವ ಸಂಕೇತವೇ ಗ್ರೀನ್ ಡೈಮಂಡ್
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯನ್ನು ಅಧ್ಯಕ್ಷ ಜೋ ಬೈಡನ್ ಮತ್ತು ಫಸ್ಟ್ ಲೇಡಿ ಜಿಲ್ ಬೈಡನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ನ್ಯೂಯಾರ್ಕ್ನಿಂದ ವಾಷಿಂಗ್ಟನ್ನಲ್ಲಿರುವ ಶ್ವೇತಭವನಕ್ಕೆ ಮೋದಿ ಬರ್ತಿದ್ದಂತೆಯೇ ಸ್ವಾಗತಿಸಿದ್ದಾರೆ. ಈ ವೇಳೆ ಭಾರತದಿಂದ ತೆಗೆದುಕೊಂಡು ಹೋಗಿದ್ದ ಮೌಲ್ಯ ವಸ್ತುಗಳ ಉಡುಗೊರೆಗಳನ್ನು ಅಮೆರಿಕದ ಫಸ್ಟ್ ಕಪಲ್ಗೆ ಪ್ರಧಾನಿ ಮೋದಿ ನೀಡಿದರು.
ಗಿಫ್ಟ್ 1: ಸ್ಯಾಂಡಲ್ವುಡ್ ಬಾಕ್ಸ್
ರಾಜಸ್ಥಾನದ ಜೈಪುರದ ಕುಶಲಕರ್ಮಿ ಒಬ್ಬರು ತಯಾರಿಸಿದ ಸ್ಯಾಂಡಲ್ವುಡ್ ಬಾಕ್ಸ್ ಅನ್ನು ಮೋದಿ ಜೋ ಬೈಡನ್‌ಗೆ ನೀಡಿದರು. ಇದು ನಮ್ಮ ರಾಜ್ಯದ ಮೈಸೂರಿನ ಶ್ರೀಗಂಧ ಮರದಿಂದ ಮಾಡಿದ ಬಾಕ್ಸ್ ಆಗಿದೆ. ಈ ಬಾಕ್ಸ್ ಮೇಲೆ ಸಸ್ಯ ಹಾಗೂ ಪ್ರಾಣಿಗಳ ಮಾದರಿಗಳನ್ನು ಕೆತ್ತಲಾಗಿದೆ.
ಈ ಬಾಕ್ಸ್ನಲ್ಲಿ ಏನಿದೆ..?
ಗಣೇಶನ ವಿಗ್ರಹ, ಎಣ್ಣೆ ದೀಪ, ತಾಮ್ರದ ಪ್ಲೇಟ್, 10 ಬೆಳ್ಳಿ ಬಾಕ್ಸ್ಗಳಿವೆ. ಇದು ದಾಸ-ದಾನಂ ಪದ್ದತಿಯನ್ನು ನೆನಪಿಸುತ್ತಿದೆ.
ಗಿಫ್ಟ್ 2: ಡೈಮಂಡ್
ಅಮೆರಿಕ ಮೊದಲ ಮಹಿಳೆ ಜಿಲ್ ಬಿಡೆನ್ಗೆ ಲ್ಯಾಬ್ನಲ್ಲಿ ತಯಾರಿಸಿದ್ದ ಡೈಮಂಡ್ ಗಿಫ್ಟ್ ನೀಡಿದರು. ಇದು 7.5 ಕ್ಯಾರೆಟ್ ಗ್ರೀನ್ ಡೈಮಂಡ್ ಆಗಿದ್ದು, ಪರಿಸರಸ್ನೇಹಿಯಾಗಿದೆ. ಕಾಶ್ಮೀರದ ಕರ್ ಇ ಕಲಮಧನಿ ಬಾಕ್ಸ್ನಲ್ಲಿ ಗ್ರೀನ್ ಡೈಮಂಡ್ ಇಟ್ಟು ಉಡುಗೊರೆ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷ, ಸುಸ್ಥಿರ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಿಂಬಿಸುವ ಸಂಕೇತವಾಗಿ ಗ್ರೀನ್ ಡೈಮಂಡ್ ಗಿಫ್ಟ್ಗಳನ್ನು ನೀಡಲಾಗಿದೆ.
ಗಿಫ್ಟ್ 3: ಉಪನಿಷತ್ ಪುಸ್ತಕ
ಲಂಡನ್ನಲ್ಲಿ ಮುದ್ರಣವಾದ ಉಪನಿಷತ್ ಪುಸ್ತಕವನ್ನು ಮೋದಿ ಜೋ ಬೈಡೆನ್ಗೆ ನೀಡಿದ್ದಾರೆ. ಯೂನಿವರ್ಸಿಟಿ ಪ್ರೆಸ್ ಗ್ಲಾಸ್ಗೋನಲ್ಲಿ ಮುದ್ರಣವಾದ ‘ಟೆನ್ ಪ್ರಿನ್ಸಿಪಲ್ ಉಪನಿಷತ್’ ಪುಸ್ತಕದ ಮೊದಲ ಸಂಚಿಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಲಂಡನ್ನ ಫಾಬರ್ & ಫಾಬರ್ ಲಿಮಿಟೆಡ್ ಈ ಪುಸ್ತಕದ ಪ್ರಕಾಶರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ