newsfirstkannada.com

ಟ್ರಕ್​ಗೆ ಡಿಕ್ಕಿ ಹೊಡೆದ ಕಾರು; 8 ಜನರ ಪೈಕಿ 7 ಮಂದಿ ಸಾವು.. ಕಾರು ನಜ್ಜುಗುಜ್ಜು

Share :

30-06-2023

    ಯಮರಾಯನ ನರ್ತನಕ್ಕೆ ಜೀವ ಕಳೆದುಕೊಂಡ ಕುಟುಂಬಸ್ಥರು

    ತಡರಾತ್ರಿಯೇ ರಸ್ತೆಯಲ್ಲಿ ಹಾರಿ ಹೋಯಿತು 7 ಮಂದಿ ಪ್ರಾಣಪಕ್ಷಿ

    ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ ಮೂವರು ಪೈಕಿ ಇಬ್ಬರು ಸಾವು

ಲಕ್ನೋ: ತಡರಾತ್ರಿ ಅತೀ ವೇಗವಾಗಿ ಬಂದ ಕಾರೊಂದು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 8 ಜನರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಇನ್ನೊಬ್ಬರ ಸ್ಥತಿ ಚಿಂತಾಜನಕವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯು ಉತ್ತರಪ್ರದೇಶದ ಬಂದಾನಗರದಲ್ಲಿ ನಡೆದಿದೆ.

ಕಾರಿನಲ್ಲಿ ಕುಟುಂಬಸ್ಥರು ತಮ್ಮ ಸಂಬಂಧಿ ಮನೆಗೆ ತಡರಾತ್ರಿ ತೆರಳುತ್ತಿದ್ದರು. ಈ ವೇಳೆ ಕಾರು ಅತೀ ವೇಗವಾಗಿ ಚಾಲನೆಯಲ್ಲಿತ್ತು. ಹೀಗಾಗಿ ಮುಂದೆ ಹೋಗುತ್ತಿದ್ದ ಟ್ರಕ್​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ 8 ಜನರ ಪೈಕಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಮೂವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಗಾಯಾಳುಗಳ ಸ್ಥಿತಿ ತೀವ್ರ ಗಂಭೀರವಾಗಿದ್ದರಿಂದ ಮೂವರಲ್ಲಿ ಇಬ್ಬರು ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ ಎಂದು ಬಂದಾನಗರದ ಡಿಎಂ ದುರ್ಗಾ ಶಕ್ತಿ ನಾಗ್ಪಾಲ್​ ತಿಳಿಸಿದ್ದಾರೆ.

ಇದನ್ನು ಓದಿ: ಅಯ್ಯೋ ದುರಂತವೇ.. ಬಟ್ಟೆ ತೊಳೆಯಲು ಹೋದ ತಾಯಿ, 2 ಮಕ್ಕಳು ಭೀಮಾ ನದಿ ಪಾಲು

ಅತೀ ವೇಗವಾಗಿ ಬಂದು ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜು ಆಗಿದೆ. ಈ ರಸ್ತೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಂದಾನಗರದ ಠಾಣೆಯ ಪೊಲೀಸರು ತಡರಾತ್ರಿಯೇ ರಕ್ಷಣೆ ಕಾರ್ಯದಲ್ಲಿ ತೊಡಗಿದರು. ಗಾಯಾಳುಗಳನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟ್ರಕ್​ಗೆ ಡಿಕ್ಕಿ ಹೊಡೆದ ಕಾರು; 8 ಜನರ ಪೈಕಿ 7 ಮಂದಿ ಸಾವು.. ಕಾರು ನಜ್ಜುಗುಜ್ಜು

https://newsfirstlive.com/wp-content/uploads/2023/06/UP_CAR_ACCIDENT.jpg

Load More