newsfirstkannada.com

ಅಸಲಿ ಅಲ್ಲ, ನಕಲಿ ವೈದ್ಯರು.. ಸರ್ಜರಿ ಮಾಡಿ 7 ಮಂದಿ ಪ್ರಾಣವನ್ನೇ ತೆಗೆದುಬಿಟ್ರು.. ಏನಿದು ಸ್ಟೋರಿ..?

Share :

16-11-2023

    ಜನರಿಗೆ ಕಾಯಿಲೆ ಬರೋವರೆಗೂ ವೈದ್ಯರ ಮಹತ್ವ ಅರ್ಥವಾಗಲ್ಲ

    ಸಂಕಟ ಬಂದಾಗ ವೆಂಕಟರಮಣ ಎನ್ನುವ ಗಾದೆ ಮಾತು ಒಂದಿದೆ!

    ಹಾಗೇ ರೋಗ ಬಂದಾಗ ಮಾತ್ರ ವೈದ್ಯರನ್ನು ನೆನೆಯೋರು ನಾವು..!

ನವದೆಹಲಿ: ಜನರಿಗೆ ಯಾವುದೇ ಕಾಯಿಲೆ ಬರೋವರೆಗೂ ವೈದ್ಯರ ಮಹತ್ವ ಅರ್ಥ ಆಗೋದಿಲ್ಲ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ನಾವೆಲ್ಲ ನಮಗೆ ರೋಗ ಬಂದಾಗ ಮಾತ್ರ ವೈದ್ಯರನ್ನು ನೆನೆಯುತ್ತೇವೆ. ವೈದ್ಯೋ ನಾರಾಯಣ ಹರೀಃ ಎನ್ನುವ ಗಾದೆ ಒಂದಿದೆ. ವೈದ್ಯರಿಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಯಾವಾಗಲೂ ನಮ್ಮ ಜೀವ ಉಳಿಸೋರು, ಆಪತ್ಬಾಂಧವನಂತೆ ಕಾಪಾಡೋರು ಇದೇ ವೈದ್ಯರು.

ವೈದ್ಯರು ದೇವರ ಸಮಾನ. ಸಾವಿನ ಸುಳಿಯಲ್ಲಿ ಸಿಲುಕಿದ ಮನುಷ್ಯರನ್ನು ಕಾಪಾಡೋದೇ ಈತನ ಕಾಯಕ. ಹೀಗಾಗಿ ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತಿದೆ. ಹೀಗಿರುವಾಗಲೇ ದೆಹಲಿಯಲ್ಲಿ ಮಾತ್ರ ನಕಲಿ ವೈದ್ಯರ ಗ್ಯಾಂಗ್​ ಅನ್ನೋ ವಿಷಸರ್ಪ ಎಡೆ ಎತ್ತಿದೆ. ಈ ಗ್ಯಾಂಗ್​​ ಸುಮಾರು 7 ಮಂದಿ ಪ್ರಾಣಕ್ಕೆ ಕುತ್ತು ತಂದಿದೆ. ಇದರ ಪರಿಣಾಮ ಜನರಿಗೆ ಅಸಲಿ ವೈದ್ಯರು ಯಾರು? ನಕಲಿ ವೈದ್ಯರು ಯಾರು? ಅನ್ನೋ ಗೊಂದಲಕ್ಕೆ ಸಿಲುಕಿದ್ದಾರೆ. ಹುಷಾರು ಇಲ್ಲದೆ ಹೋದರೆ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ಯೆಸ್​​, ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಇತ್ತೀಚೆಗೆ ಇಬ್ಬರು ಮೃತಪಟ್ಟಿದ್ದರು ಎಂದು ವರದಿ ಆಗಿತ್ತು. ಈ ಕೇಸ್​ ಇಡೀ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಪ್ರಕರಣ ದಾಖಲಿಸಿಕೊಂಡ ಕೂಡಲೇ ಎಚ್ಚೆತ್ತ ದೆಹಲಿ ಪೊಲೀಸರು ಗ್ರೇಟರ್‌ ಕೈಲಾಶ್‌ ವ್ಯಾಪ್ತಿಯಲ್ಲಿರೋ ಅಗರ್ವಾಲ್‌ ಮೆಡಿಕಲ್‌ ಸೆಂಟರ್​ಗೆ ಸೇರಿದ ನಾಲ್ವರನ್ನು ಅರೆಸ್ಟ್​ ಮಾಡಿದ್ರು.

ಡಾ. ನೀರಜ್‌ ಅಗರ್ವಾಲ್‌ ಮತ್ತವರ ಪತ್ನಿ ಪೂಜಾ ಅಗರ್ವಾಲ್‌, ಡಾ. ಜಸ್‌ಪ್ರೀತ್‌ ಸಿಂಗ್‌ ಹಾಗೂ ಲ್ಯಾಬ್‌ ಟೆಕ್ನಿಷಿಯನ್‌ ಮಹೇಂದರ್‌ ಸಿಂಗ್‌ ಬಂಧಿತರು. ಇಂಟರೆಸ್ಟಿಂಗ್​​ ವಿಚಾರ ಏನಂದ್ರೆ ಇವರು ಅಸಲಿಗೆ ವೈದ್ಯರೇ ಅಲ್ಲ, ಬದಲಿಗೆ ನಕಲಿ ದಾಖಲೆ ಸೃಷ್ಟಿಸಿ ಡಾಕ್ಟರ್ಸ್​ ಆದವರು. ವೈದ್ಯರ ಹಾಗೇ ಪೋಸ್​​ ಕೊಡುತ್ತಿದ್ದ ಇವರೇ ಸರ್ಜರಿ ಮಾಡಿ ಇದುವರೆಗೂ 7 ಮಂದಿಯನ್ನು ಕೊಂದು ಹಾಕಿದ್ದಾರೆ.

ಕೇಸ್​ ಬೆಳಕಿಗೆ ಬಂದಿದ್ದು ಹೇಗೆ..?

ಒಂದು ವರ್ಷದ ಹಿಂದೆ ಅಸ್ಘರ್‌ ಅಲಿ ಅನ್ನೋರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹತ್ತಿರದಲ್ಲೇ ಇರೋ ಯಾವುದಾದ್ರೂ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸೋಣ ಎಂದಿದ್ದರು. ಆಗ ತನ್ನ ಸ್ನೇಹಿತರ ಮೂಲಕ ವೈದ್ಯರು ಒಬ್ಬರು ಪರಿಚಯ ಆದರು. ಅವರೇ ಈ ನಕಲಿ ಡಾಕ್ಟರ್​​. ಆಗ ಅಸ್ಘರ್​​​ ಈ ನಕಲಿ ಡಾಕ್ಟರ್​ ಕೆಲಸ ಮಾಡೋ ಅಗರ್ವಾಲ್​ ಮೆಡಿಕಲ್​ ಸೆಂಟರ್​​ಗೆ ತೆರಳುತ್ತಾರೆ. ತಪಾಸಣೆ ಬಳಿಕ ನಿಮಗೆ ಸರ್ಜರಿ ಮಾಡಬೇಕಿದೆ ಎಂದು ಹೇಳುತ್ತಾರೆ. ಸರ್ಜನ್‌ ಸ್ಪೆಷಲಿಸ್ಟ್​​ ಡಾ. ಜಸ್‌ಪ್ರೀತ್‌ ಅವರೇ ಆಪರೇಷನ್‌ ಮಾಡಬೇಕು ಎನ್ನುತ್ತಾರೆ. ಅದಕ್ಕೆ ಅಸ್ಘರ್ ಓಕೆ ಎನ್ನುತ್ತಾರೆ.

ಆಪರೇಷನ್​ ಥಿಯೇಟರ್​ಗೆ ಹೋದ ಮೇಲೆ ಆಗಿದ್ದೇ ಬೇರೆ..?

ಅಸ್ಘರ್ ಸರ್ಜರಿಗಾಗಿ ಆಪರೇಷನ್​ ಥಿಯೇಟರ್​​ಗೆ ಹೋಗುತ್ತಾರೆ. ಹೋಗುವಾಗ ಬದುಕಿದ್ದ ಈ ಮನುಷ್ಯ ಸರ್ಜರಿ ಬಳಿಕ ಬೀದಿ ಹೆಣವಾದರು. ಕಾರಣ ಸರ್ಜರಿ ಮಾಡಿದ್ದು ಡಾ. ಜಸ್‌ಪ್ರೀತ್‌ ಅಲ್ಲ, ಬದಲಿಗೆ ಪೂಜಾ ಹಾಗೂ ಮಹೇಂದರ್‌ ಎಂಬುವರು.

ನೋವು ನೋವು ಎಂದು ಕೂಗಾಡಿದ್ದ ರೋಗಿ

ಸರ್ಜರಿ ಬಳಿಕ ಅಸ್ಘರ್‌ ಅವರಿಗೆ ಭಾರಿ ನೋವಾಗಿತ್ತು. ಆಗ ಅಲ್ಲಿಂದ ಕೂಡಲೇ ಬೇರೆ ಆಸ್ಪತ್ರೆಗೆ ಶಿಫ್ಟ್​​ ಮಾಡಬೇಕು ಎನ್ನುವಷ್ಟರಲ್ಲಿ ಅಸ್ಘರ್ ಪ್ರಾಣ ಬಿಟ್ಟಿದ್ದರು. ಈ ಕುರಿತು ಪೊಲೀಸ್​​ ಕೇಸ್​ ಆಗಿತ್ತು. ಸದ್ಯ ಪೊಲೀಸ್ರು ನಾಲ್ವರು ನಕಲಿ ವೈದ್ಯರನ್ನು ಬಂಧಿಸಿದ ಬಳಿಕ ಇದು ಸುದ್ದಿಯಾಗಿದೆ.

ಒಂದಲ್ಲ, ಎರಡಲ್ಲ, ಬರೋಬ್ಬರಿ 9 ಕೇಸ್​​ ದಾಖಲು

ಅಗರ್ವಲ್​​ ಮೆಡಿಕಲ್​ ಸೆಂಟರ್​​. ಈ ಆಸ್ಪತ್ರೆ ಸೇರಿದ್ದು ಡಾ. ನೀರಜ್‌ ಅಗರ್ವಾಲ್‌ ಮತ್ತವರ ಪತ್ನಿ ಪೂಜಾ ಅನ್ನೋ ನಕಲಿ ವೈದ್ಯರಿಗೆ. ಇವರ ವಿರುದ್ಧ ಈ ರೀತಿ ಕೇಸುಗಳು ಕೇಳಿಬಂದಿದ್ದು ಮೊದಲೇನಲ್ಲ. ಕಳೆದ ಆರು ವರ್ಷಗಳಲ್ಲಿ ಇದುವರೆಗೂ ನೂರಾರು ಮಂದಿ ದೂರು ನೀಡಿದ್ದಾರೆ. ಅದರಲ್ಲಿ 9 ಕೇಸುಗಳಲ್ಲಿ ಎಫ್​ಐಆರ್​ ಆಗಿದೆ. ಅಧಿಕೃತ ಮಾಹಿತಿ ಪ್ರಕಾರ 7 ಮಂದಿ ಸಾವನ್ನಪ್ಪಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿದ್ದ ನಾಲ್ವರು..!

ನಾಲ್ವರು ನಕಲಿ ದಾಖಲೆ ಸೃಷ್ಟಿಸಿ ವೈದ್ಯರು ಎಂಬಂತೆ ಬಿಂಬಿಸಿಕೊಂಡಿದ್ದರು. ಇದೇ ದಾಖಲೆಯಿಂದ ಲೈಸನ್ಸ್​​ ಪಡೆದು ಆಸ್ಪತ್ರೆ ಕೂಡ ಓಪನ್​ ಮಾಡಿದ್ದರು. ಜನರಿಗೆ ಮೋಸ ಮಾಡುವ ಜತೆಗೆ ಅವರ ಪ್ರಾಣವನ್ನೇ ತೆಗೆದು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸಲಿ ಅಲ್ಲ, ನಕಲಿ ವೈದ್ಯರು.. ಸರ್ಜರಿ ಮಾಡಿ 7 ಮಂದಿ ಪ್ರಾಣವನ್ನೇ ತೆಗೆದುಬಿಟ್ರು.. ಏನಿದು ಸ್ಟೋರಿ..?

https://newsfirstlive.com/wp-content/uploads/2023/11/Fake-Doctors.jpg

Load More