newsfirstkannada.com

BREAKING: ಇಸ್ಪೀಟ್‌ ಆಡುವಾಗ ಪೊಲೀಸ್‌ ದಾಳಿ.. ತಪ್ಪಿಸಿಕೊಂಡ 7 ಮಂದಿ ನೀರುಪಾಲಾದ ಶಂಕೆ

Share :

Published July 2, 2024 at 8:21pm

Update July 2, 2024 at 8:23pm

    ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಬಿದ್ದು ಸಾವನ್ನಪ್ಪಿದ ಶಂಕೆ

    ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ ಏಳೆಂಟು ಜನರು

    ಅದೃಷ್ಟವಶಾತ್ ಓರ್ವ ವ್ಯಕ್ತಿ ನದಿಯಿಂದ ಹೊರಗೆ ಬಂದು ಪಾರು

ವಿಜಯಪುರ: ಅಂದರ್ ಬಾಹರ್ ಇಸ್ಪೀಟ್ ಆಟ ಆಡುವಾಗ ಪೊಲೀಸರು ದಾಳಿ ಮಾಡಿದ್ದಾರೆ. ಆಗ ಕೃಷ್ಣಾ ನದಿಯಲ್ಲಿ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ ಏಳೆಂಟು ಜನರು ತೆಪ್ಪದಲ್ಲಿ ಮುಗುಚಿ ಬಿದ್ದಿರೋ ದಾರುಣ ಘಟನೆ ಕೊಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿ ನಡೆದಿದೆ.

ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಬಿದ್ದು ಏಳೆಂಟು ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಅದರಲ್ಲಿ ಅದೃಷ್ಟವಶಾತ್ ಓರ್ವ ನದಿಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಹತ್ರಾಸ್ ಕಾಲ್ತುಳಿತ.. ಭೋಲೆ ಬಾಬಾ ಪ್ರವಚನ ಕೇಳಲು ಬಂದಿದ್ದ 80ಕ್ಕೂ ಹೆಚ್ಚು ಭಕ್ತರ ಸಾವು; ಆಗಿದ್ದೇನು? 

ಮೃತ ವ್ಯಕ್ತಿಯನ್ನು ಕೋಲ್ಹಾರ ಮೂಲದ ಪುಂಡಲೀಕ ಯಂಕಂಚಿ (35) ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ಬಳೂತಿ ಜಾಕ್ವೆಲ್ ಬಳಿಯ ಕೃಷ್ಣಾ ನದಿಯಲ್ಲಿ ಈ ಘಟನೆ ನಡೆದಿದೆ. ತೆಪ್ಪದಲ್ಲಿ ತೆರಳಿದವರು ಕೊಲ್ಹಾರ ಹಾಗೂ ಬಳೂತಿ ಗ್ರಾಮದವರು. ಇನ್ನುಳಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಗಬೇಕಿದೆ.

ಇದನ್ನೂ ಓದಿ: BREAKING: ಇಸ್ಪೀಟ್‌ ಆಡುವಾಗ ಪೊಲೀಸ್‌ ದಾಳಿ.. ತಪ್ಪಿಸಿಕೊಂಡ 7 ಮಂದಿ ನೀರುಪಾಲಾದ ಶಂಕೆ 

ಘಟನಾ ಸ್ಥಳಕ್ಕೆ ಗ್ರಾಮಸ್ಥರು ದೌಡಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚುವರಿ ಎಸ್‌ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಇಸ್ಪೀಟ್‌ ಆಡುವಾಗ ಪೊಲೀಸ್‌ ದಾಳಿ.. ತಪ್ಪಿಸಿಕೊಂಡ 7 ಮಂದಿ ನೀರುಪಾಲಾದ ಶಂಕೆ

https://newsfirstlive.com/wp-content/uploads/2024/07/Vijayapura-Death.jpg

Load More