newsfirstkannada.com

ರಸ್ತೆ ಪಕ್ಕದಲ್ಲಿ ಕುಳಿತಿದ್ದವರ ಮೇಲೆ ಹರಿದ ಲಾರಿ; ಭೀಕರ ಅಪಘಾತಕ್ಕೆ 7 ಜನರು ಸ್ಥಳದಲ್ಲೇ ಸಾವು

Share :

11-09-2023

    ಧರ್ಮಶಾಲಾಕ್ಕೆ ಬಸ್ ಮೂಲಕ ವಾಪಸ್ ಆಗ್ತಿದ್ದ ಪ್ರಯಾಣಿಕರು

    ಗಂಭೀರವಾಗಿ ಗಾಯಗೊಂಡಿದ್ದ ಕೆಲವರು ಆಸ್ಪತ್ರೆಗೆ ದಾಖಲು..!

    ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ ಡಿಸಿ

ಚೆನ್ನೈ: ರಾತ್ರಿ ಪಂಕ್ಚರ್ ಆಗಿ ರಸ್ತೆ ಪಕ್ಕ ನಿಂತಿದ್ದ ಮಿನಿ ಬಸ್​ಗೆ ಹಿಂಬಂದಿಯಿಂದ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 7 ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪತ್ತೂರ್ ಜಿಲ್ಲೆಯಲ್ಲಿ ನಡೆದಿದೆ.

ಮೀನಾ, ಸೆತ್ತು, ದೈವನೈ, ದೇವಕಿ, ಕಲಾನಿತಿ, ಸಾವಿತ್ರಿ ಮತ್ತು ಗೀತಾಂಜಲಿ ಎನ್ನುವರು ಮೃತಪಟ್ಟವರು. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಿನಿ ಬಸ್ 19 ಪ್ರಯಾಣಿಕರೊಂದಿಗೆ​ ಜಿಲ್ಲೆಯಿಂದ ಧರ್ಮಶಾಲಾಕ್ಕೆ ರಾತ್ರಿ ವಾಪಸ್ ಆಗುತ್ತಿತ್ತು. ಈ ವೇಳೆ ದಾರಿ ಮಧ್ಯೆ ಮಿನಿ ಬಸ್ ಪಂಕ್ಚರ್ ಆಗಿದ್ದರಿಂದ ರಸ್ತೆ ಪಕ್ಕದಲ್ಲೇ ಪಾರ್ಕ್​ ಮಾಡಿ 19 ಪ್ರಯಾಣಿಕರಲ್ಲಿ ಕೆಲವರು ಮೆಕ್ಯಾನಿಕ್​ನನ್ನು ಕರೆದುಕೊಂಡು ಬರಲು ಹೋಗಿದ್ದಾರೆ. ಉಳಿದವರು ಮಿನಿ ಬಸ್​ ಪಕ್ಕದಲ್ಲೇ ಕುಳಿತಿದ್ದರು.

ಇದನ್ನೂ ಓದಿ: Rapido ಸವಾರ ಮತ್ತು ಪ್ರಯಾಣಿಕನಿಗೆ ಯದ್ವಾ-ತದ್ವಾ ಬಾರಿಸಿದ ಪ್ರತಿಭಟನಾಕಾರರು; ಬಂದ್​ ಕುರಿತ ಅಪ್ಡೇಟ್​ ಹೀಗಿದೆ..

ಈ ವೇಳೆ ವೇಗವಾಗಿ ಬಂದ ಲಾರಿಯೊಂದು ರಭಸವಾಗಿ ಬಸ್​ ಹಿಂಬದಿ ಡಿಕ್ಕಿ ಹೊಡೆದು ಕುಳಿತ್ತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಹೀಗಾಗಿ ಸ್ಥಳದಲ್ಲೇ 7 ಜನರು ಮೃತಪಟ್ಟಿದ್ದಾರೆ. ಉಳಿದ ಗಾಯಾಳುಗಳನ್ನು ತಿರುಪತ್ತೂರ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಮೆಕ್ಯಾನಿಕ್​ನನ್ನು ಕರೆದುಕೊಂಡು ಬರಲು ಹೋಗಿದ್ದ ಗುಂಪು ಈ ಅಪಘಾತದಿಂದ ಎಸ್ಕೇಪ್ ಆಗಿದೆ.

ಜಿಲ್ಲಾಧಿಕಾರಿ ಭಾಸ್ಕರ ಪಾಂಡಿಯನ್ ಆಸ್ಪತ್ರೆಗೆ ಭೇಟಿ ನೀಡಿ ಮೃತಪಟ್ಟ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಸಿಎಂ ಎಂ.ಕೆ ಸ್ಟಾಲಿನ್ ಅವರು ಮಾಹಿತಿ ಪಡೆದಿದ್ದು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ಪಕ್ಕದಲ್ಲಿ ಕುಳಿತಿದ್ದವರ ಮೇಲೆ ಹರಿದ ಲಾರಿ; ಭೀಕರ ಅಪಘಾತಕ್ಕೆ 7 ಜನರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2023/09/TN_7_DEAD.jpg

Load More