ನಾಟಿ ವೈದ್ಯರ ವಿರುದ್ಧ ಕೇಸ್ ದಾಖಲಿಸಿದ ಪೋಷಕರು
ಚಿಕ್ಕಬಳ್ಳಾಪುರ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ಘಟನೆ
ಹೂಳಿದ್ದ ಶವ ಹೊರ ತೆಗೆದು ಪೊಲೀಸರಿಂದ ತನಿಖೆ
ಚಿಕ್ಕಬಳ್ಳಾಪುರ: ವೈದ್ಯರ ಯಡವಟ್ಟಿನಿಂದಾಗಿ 7 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ ನಲ್ಲಗುಟ್ಟಪಾಳ್ಯ ಗ್ರಾಮದಲ್ಲಿ ನಡೆದಿದೆ. ಇದೇ 13ರಂದು ಶ್ರೀನಿವಾಸ ಎಂಬುವವರು ಹಾಗೂ ಅವರ ಪುತ್ರಿ ಮತ್ತು ಪುತ್ರ ವೇದೇಶ ಸ್ಕಿನ್ ಅಲರ್ಜಿ ಚಿಕಿತ್ಸೆಗೆಂದು ಬೋಯಿನಹಳ್ಳಿಯ ನಾಟಿ ವೈದ್ಯ ಸತೀಶ್ ಬಳಿ ನಾಟಿ ಔಷಧಿ ಪಡೆದಿದ್ದರು.
ತಂದೆ-ಮಗಳಿಗೆ ಚಿಕಿತ್ಸೆ ಫಲಕಾರಿಯಾದ್ರೆ ಬಾಲಕ ವೇದೇಶ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಆದರೆ ಅಂದು ಜಿಲ್ಲಾಸ್ಪತ್ರೆಯಲ್ಲಿ ಬಾಲಕನ ಶವದ ಮರಣೋತ್ತರ ಪರೀಕ್ಷೆ ಮಾಡದೇ ನಿರ್ಲಕ್ಷ್ಯದಿಂದ ಆತನ ಪೋಷಕರಿಗೆ ಶವ ಹಸ್ತಾಂತರ ಮಾಡಿದ್ದರು.
ಇದರಿಂದ ಆಕ್ರೋಶಗೊಂಡ ಬಾಲಕನ ಪೋಷಕರು ಮಗನ ಸಾವಿಗೆ ನ್ಯಾಯ ಕೋರಿ ಪೊಲೀಸರಿಗೆ ನಾಟಿ ವೈದ್ಯ ಸತೀಶ್ ವಿರುದ್ಧ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಸಮಾಧಿಯಲ್ಲಿದ್ದ ಬಾಲಕನ ಶವ ಹೊರತೆಗೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದು ವರದಿ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ