ಕೊಪ್ಪಳದಲ್ಲಿ ಕಲುಷಿತ ನೀರಿಗೆ ಮತ್ತೊಂದು ಬಲಿ ಆರೋಪ
ಕಲುಷಿತ ನೀರು ಕುಡಿದು 7 ವರ್ಷದ ಬಾಲಕ ದಾರುಣ ಸಾವು
ಆಸ್ಪತ್ರೆ ಮುಂಭಾಗ ಮುಗಿಲು ಮುಟ್ಟಿದ ಪೊಷಕರ ಆಕ್ರಂದನ
ಕೊಪ್ಪಳ: ಕಲುಷಿತ ನೀರು ಸೇವಿಸಿ ಬಾಲಕ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ. ಕನಕಪ್ಪ (7) ಮೃತ ಬಾಲಕ.
ಮೃತ ಬಾಲಕನು ಕಲುಷಿತ ನೀರು ಸೇವಿಸಿ ಕಳೆದ ಮೂರು ದಿನಗಳಿಂದ ವಾಂತಿ ಭೇದಿಯಿಂದ ಬಳಲುತ್ತಿದ್ದನು. ಹೀಗಾಗಿ ಆತನನ್ನು ಕನಕಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತ ಪಟ್ಟಿದ್ದಾನೆ. ಇನ್ನು ಈ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಸಾವಿಗೆ ಪರೋಕ್ಷವಾಗಿ ಕಾರಣರಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಕನಕಗಿರಿ ಪೊಲೀಸರು ಭೇಟಿ ಪರಿಶೀಲನೆ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ