newsfirstkannada.com

Video: ಒಂದು ಬೈಕ್​ನಲ್ಲಿ 6 ಜನ, ತಲೆ ಮೇಲೆ ಮತ್ತೊಬ್ಬ! ಯುವಕರ ಸರ್ಕಸ್​ ನೋಡಿ ದಂಗಾದ ಕಾರ್​ ಚಾಲಕ

Share :

10-08-2023

    ಒಂದೇ ಬೈಕ್​ನಲ್ಲಿ 7 ಯುವಕರ ಸರ್ಕಸ್​ ಸವಾರಿ

    ಟ್ಯಾಂಕ್​ ಮೇಲೊಬ್ಬ, ತಲೆ ಮೇಲೆ ಮತ್ತೊಬ್ಬ

    ಯುವಕರ ಹುಚ್ಚಾಟ ಕಂಡು ಬೆಚ್ಚಿ ಬಿದ್ದ ಕಾರ್​ ಚಾಲಕ

ಒಂದು ಬೈಕ್​ನಲ್ಲಿ ಇಬ್ಬರು ಹೋಗೋದೆ ಕಷ್ಟ. ಅಂತದ್ರಲ್ಲಿ ಕೆಲವರು ತ್ರಿಬಲ್ ರೈಡ್​ ಹೋಗೋರು ಇರುತ್ತಾರೆ. ಆದರೆ ಇಲ್ಲೊಂದು ದೃಶ್ಯ ಕಂಡರೆ ಅಚ್ಚರಿ ಆಗೋದರಲ್ಲಿ ನೋ ಡೌಟ್​​. ಯಾಕೆಂದರೆ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ ಏಳು ಮಂದಿ ಒಂದೇ ಬೈಕ್​ನಲ್ಲಿ ರೈಡಿಂಗ್ ಹೋಗಿದ್ದಾರೆ.

ಹೌದು. ಉತ್ತರ ಪ್ರದೇಶದ ಹಾಫುರ್​ನಲ್ಲಿ ಟ್ರಾಫಿಕ್​ ರೂಲ್ಸ್ ಬ್ರೇಕ್ ಮಾಡಿ ಒಂದೇ ಬೈಕ್​ನಲ್ಲಿ 7 ಯುವಕರು ಸಂಚರಿಸಿದ್ದಾರೆ. 6 ಯುವಕರು ಬೈಕ್​ ಮೇಲೆ ಇಕ್ಕಟ್ಟಿನಲ್ಲಿ ಕೂತಿದ್ರೆ ಮತ್ತೋರ್ವ ಹಿಂಬದಿ ಕೂತಿದ್ದವನ ಭುಜದ ಮೇಲೆ ಹತ್ತಿ ಕೂತಿದ್ದಾನೆ. ಸದ್ಯ ಈ ವಿಡಿಯೋವನ್ನ ಕಾರ್​ ಸವಾರನೋರ್ವ ರೆಕಾರ್ಡ್​ ಮಾಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾನೆ.

ಸಂಚಾರಿ ಪೊಲೀಸರು ಸಂಚಾರಿ ನಿಯಮದ ಬಗ್ಗೆ ಎಷ್ಟೇ ಎಚ್ಚರಿಕೆ ರವಾನಿಸಿದರು ಯುವಕರು ಹುಚ್ಚಾಟವನ್ನು ಬಿಡುತ್ತಿಲ್ಲ. ಅದರಲ್ಲೂ ವಾಹನದ ಮೇಲೆ ನಾನಾ ಸರ್ಕಸ್​ ಮಾಡಿಕೊಂಡು ಪ್ರಯಾಣಿಸುತ್ತಿದ್ದಾರೆ. ಇಂತವರಿಗೆ ಎಷ್ಟೇ ಬಿಸಿ ಮುಟ್ಟಿಸಿದರು ಸರಿ ದಾರಿಗೆ ತರಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಒಂದು ಬೈಕ್​ನಲ್ಲಿ 6 ಜನ, ತಲೆ ಮೇಲೆ ಮತ್ತೊಬ್ಬ! ಯುವಕರ ಸರ್ಕಸ್​ ನೋಡಿ ದಂಗಾದ ಕಾರ್​ ಚಾಲಕ

https://newsfirstlive.com/wp-content/uploads/2023/08/7-member-Bike-raid.jpg

Load More