newsfirstkannada.com

‘ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ’.. ಒಂದಲ್ಲಾ 30 ವರ್ಷದಿಂದ ಈತ ನಿದ್ದೆನೇ ಮಾಡಿಲ್ಲ!

Share :

07-06-2023

    ಒಂದಲ್ಲಾ ಎರಡಲ್ಲಾ ಬರೋಬ್ಬರಿ 30 ವರ್ಷ

    70 ವರ್ಷದ ಅಜ್ಜನಿಗೆ ನಿದ್ದೆನೇ ಬರೋಲ್ವಂತೆ

    ಅದೊಂದು ಅಭ್ಯಾಸದಿಂದ ಹೀಗಾಯ್ತಾ?

‘ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ’ ಹಾಡು ಕೇಳಿದ್ದೀರಾ?. ಸಿನಿಮಾದಲ್ಲೀ ಈ ಹಾಡು ಇರೋದಂತೂ ನಿಜ. ಆದರೆ ನಿಜ ಜೀವನದಲ್ಲಿ ಬರೀ ಒಂದು ದಿನ ನಿದ್ದೆ ಕೆಟ್ಟರೆ ಅಂದಿನ ದಿನವೇ ಹಾಳಾಯ್ತು ಎಂದು ಗೊಣಗೋದು ಖಂಡಿತಾ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 30 ವರ್ಷದಿಂದ ನಿದ್ದೆ ಮಾಡಿಲ್ಲ ಎಂದರೆ  ನಂಬುತ್ತೀರಾ?. ಇದು ನಿಮ್ಮಾಣೆ ಸತ್ಯ.

ಇವರ ಹೆಸರು ಸೌದ್​ ಬಿನ್​ ಮೊಹ್ಮಮ್​ ಅಲ್​ ಘಮ್ದಿ. ಸೌದಿ ಮೂಲದ ಇವರಿಗೆ 70 ವರ್ಷ. ಆದರೆ 30 ವರ್ಷದಿಂದ ಇವರು ನಿದ್ದೆ ಮಾಡಿಲ್ಲ ಎಂದರೆ ಅಕ್ಷರಶಃ ನಂಬಲು ಅಸಾಧ್ಯ. ಆದರೆ ವೈದ್ಯರೇ ಇವರನ್ನು ಕಂಡು ಅಚ್ಚರಿಗೊಂಡಿದ್ದಾರೆ. ಮಾತ್ರವಲ್ಲ ಇಂತಹದೊಂದು ಪ್ರಕರಣಕಂಡು ಅವರೇ ತಲೆ ಕರೆದುಕೊಂಡಿದ್ದಾರೆ.

ಸೌದ್​ ಬಿನ್​ ಮೊಹ್ಮಮ್​ ಅಲ್​ ಘಮ್ದಿ ಅವರೇ ಈ ವಿಚಾರ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ‘‘ನಾನು ಮಾನಸಿಕ ಅಸ್ವಸ್ಥನಲ್ಲ, ಹುಚ್ಚನಲ್ಲ, ನಾನು ಎಲ್ಲರಂತೆಯೇ ಮನುಷ್ಯ. ಆದರೆ ಉಳಿದವರಂತೆ ನಿದ್ದೆ ಮಾಡದ ವ್ಯಕ್ತಿ ’’ ಎಂದು ಹೇಳಿಕೊಂಡಿದ್ದಾರೆ.

ಮೊಹ್ಮಮ್​ ಅಲ್​ ಘಮ್ದಿ ಮಿಲಿಟರಿ ಕಾರ್ಯ ಮಾಡಿದವರು. ಸೈನ್ಯದಲ್ಲಿ ಇದ್ದಾಗ ಇವರು 20 ದಿನಗಳ ಕಾಲ ನಿದ್ದೆ ಇಲ್ಲದೆ ಕೆಲಸ ಮಾಡಿದ್ದರಂತೆ. ಆದರೆ ಈ ಅಭ್ಯಸವನ್ನೇ ಮುಂದುವರಿಸುತ್ತಾ ಬಂದ ಅವರು ಬರೋಬ್ಬರಿ 30 ವರ್ಷದಿಂದ ನಿದ್ದೆ ಬರುವುದೇ ನಿಂತು ಹೋಯಿತು.

ಬರು ಬರುತ್ತಾ ಸೌದ್​ ಬಿನ್​ ಮೊಹ್ಮಮ್​ ಅಲ್​ ಘಮ್ದಿ ಗೆ ನಿದ್ದೆ ಬೀಳುತ್ತಿರಲಿಲ್ಲ. ಕೊನೆಗೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನೇಕ ಆಸ್ಪತ್ರೆಗೆ ಭೆಟಿ ನೀಡಿದರು, ಸಮಸ್ಯೆ ಹೇಳಿಕೊಂಡರು. ಆದರೆ ಎಷ್ಟೇ ಚಿಕಿತ್ಸೆ ಪಡೆದರು ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ.

ಇಂದಿಗೂ ಕೂಡ ಸೌದ್​ ಬಿನ್​ ಮೊಹ್ಮಮ್​ ಅಲ್​ ಘಮ್ದಿ ನಿದ್ದೆ ಇಲ್ಲದೆ ಬದುಕುತ್ತಿದ್ದಾರೆ. ಅಚ್ಚರಿಯ ಸಂಗತಿಯಂತೆಯೇ ಎಲ್ಲರಂತೆಯೇ ಆನಂದದಿ ಜೀವನ ನಡೆಸುತ್ತಿದ್ದಾರೆ. ಆದರೆ ನಿದ್ದೆ ಅನ್ನೋದು ಬಹುಮುಖ್ಯ. ನಿದ್ದೆ ಇಲ್ಲದೇ ಹೋದರೆ ಆರೋಗ್ಯ ಸಮಸ್ಯೆ ಕಾಡೋದಂತ ನಿಜ. ಆದರೆ ಸೌದ್​ ಬಿನ್​ ಮೊಹ್ಮಮ್​ ಅಲ್​ ಘಮ್ದಿ ಜೀವನದಲ್ಲಿ ಇದೆಲ್ಲವು ಉಲ್ಟಾ ಹೊಡೆದಿದೆ ಎನ್ನೋದೆ ಅಚ್ಚರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಿದ್ದೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ’.. ಒಂದಲ್ಲಾ 30 ವರ್ಷದಿಂದ ಈತ ನಿದ್ದೆನೇ ಮಾಡಿಲ್ಲ!

https://newsfirstlive.com/wp-content/uploads/2023/06/Muhammad-Al-Ghamdi.jpg

Load More