ಅನ್ಯಧರ್ಮೀಯರ ಭೂಮಿಯಲ್ಲಿ ಸಿಕ್ತು ಹಳೆಯ ವಿಗ್ರಹ
12ನೇ ಶತಮಾನದ ಕಲ್ಲಿನ ವಿಗ್ರಹ ಕಂಡು ಸ್ಥಳೀಯರಿಗೆ ಶಾಕ್
ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಿದ್ಧತೆ
ದಕ್ಷಿಣ ಕನ್ನಡದಲ್ಲಿ 700 ವರ್ಷಗಳ ಹಿಂದಿನ ವಿಗ್ರಹ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ ವಿಗ್ರಹ ಸಿಕ್ಕಿದೆ. ಇದು 700 ವರ್ಷಗಳ ಹಿಂದೆ ಇದ್ದ ಗೋಪಾಲಕೃಷ್ಣ ದೇವಸ್ಥಾನದ ಪಳಿಯುಳಿಕೆ ಎಂದು ಹೇಳಲಾಗುತ್ತಿದೆ.
ಅಚ್ಚರಿಯ ಸಂಗತಿ ಎಂದರೆ ಅನ್ಯಧರ್ಮೀಯರ ಭೂಮಿಯಲ್ಲಿ ದೇವಸ್ಥಾನದ ಪಳಿಯುಳಿಕೆ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ದೇವಸ್ಥಾನದ ಕುರುಹು ಇತ್ತು ಎಂಬ ವಿಚಾರ ಬೆಳಕಿಗೆ ಬಂದಂತೆ ಅನ್ಯಧರ್ಮೀಯರ ಬಳಿ ಭೂಮಿ ಬಿಟ್ಟುಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ಅದರಂತೆಯೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆ ಸ್ಥಳದ ಸರ್ವೆ ನಡೆಸಿದ್ದರು.
ಇನ್ನು ಜಾಗದ ಸರ್ವೆಯಲ್ಲಿ ಸರ್ಕಾರಿ ಭೂಮಿ ಎನ್ನುವುದು ತಿಳಿದುಬಂದಿತ್ತು. 25 ಸೆಂಟ್ಸ್ ಭೂಮಿ ಧಾರ್ಮಿಕ ದತ್ತಿ ಇಲಾಖೆ ಹೆಸರಿಗೆ ದಾಖಲೆ ಮಾಡಿದ್ದರು. ಬಳಿಕ ಇದೇ ಭೂಮಿಯಲ್ಲಿ ಸ್ಥಳೀಯರು ಉತ್ಖನನ ನಡೆಸಿದ್ದಾರೆ.
ಉತ್ಖನನ್ನ ವೇಳೆ ಬಾವಿಯಲ್ಲಿ ಪರಿಶೀಲಿಸಿದಾಗ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಸುಮಾರು 12ನೇ ಶತಮಾನದ ಕಲ್ಲಿನ ವಿಗ್ರಹ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸ್ಥಳೀಯರ ಸಿದ್ಧತೆ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ