newsfirstkannada.com

WATCH: ಬಟರ್ ಫ್ಲೈ ಪೋಸ್ ಕೊಟ್ಟು ಮೋಡಿ ಮಾಡಿದ ಓಲ್ಡ್ ಲೇಡಿ; ಅಬ್ಬಾ.. ಅಜ್ಜಿಯ ಯೋಗಾಸನ ಹೇಗಿದೆ ನೋಡಿ!

Share :

21-06-2023

    ಬದ್ಧ ಕೋನಾಸನ, ಉಪವಿಷ್ಟ ಕೋನಾಸನ, ಬಟರ್ ಫ್ಲೈ ಪೋಸ್

    ಅಬ್ಬಬ್ಬಾ.. ಯಾವ ಯೋಗಾಸನವಾದ್ರು ನಾನ್ ರೆಡಿ ಅಂತಾರೆ ಅಜ್ಜಿ

    ನಿತ್ಯ ವಾಕಿಂಗ್ ಜೊತೆಗೆ ರಸ್ತೆ ಬದಿಯಲ್ಲೇ 1 ಗಂಟೆ ಯೋಗಾಭ್ಯಾಸ

ಬಾಗಲಕೋಟೆ: ಬದ್ಧ ಕೋನಾಸನ, ಉಪವಿಷ್ಟ ಕೋನಾಸನ, ಬಟರ್ ಫ್ಲೈ ಪೋಸ್. ಅಬ್ಬಬ್ಬಾ.. ಯಾವ ಯೋಗಾಸನಕ್ಕೂ ಸೈ ಅಂತಾರೆ ಈ ಅಜ್ಜಿ. ಇವತ್ತು 9ನೇ ಅಂತಾರಾಷ್ಟ್ರೀಯ ಯೋಗ ದಿನ. ಭಾರತ ಸೇರಿದಂತೆ ವಿಶ್ವದ ಹಲವಡೆ ಯೋಗ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಗ್ತಿದೆ. ಯೋಗದ ಮಹತ್ವ ಸಾರುವ ಇಂದು ಬಾಗಲಕೋಟೆಯ ಅಜ್ಜಿಯೊಬ್ಬರು ಲೀಲಾಜಾಲವಾಗಿ ವಿವಿಧ ಆಸನಗಳನ್ನು ಮಾಡೋ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹದಿಹರೆಯದ ಯುವಕರು 72 ವರ್ಷದ ಅಜ್ಜಿ ಮಾಡೋ ಯೋಗಾಸನಗಳನ್ನ ನೋಡಿದ್ರೆ ಶಾಕ್ ಆಗೋದು ಪಕ್ಕಾ.

ಕಷ್ಟಕರವಾದ ಹಲವು ಯೋಗಾಸನಗಳನ್ನು ಲೀಲಾಜಾಲವಾಗಿ ಮಾಡುವ ಈ ಅಜ್ಜಿಯ ಹೆಸ್ರು ದ್ರಾಕ್ಷಾಯಿಣಿ ವಡಗೇರಿ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿದ್ದಾರೆ. ಯೋಗದಿಂದಲೇ ತನ್ನ ರೋಗ ದೂರ ಮಾಡಿಕೊಂಡ ದ್ರಾಕ್ಷಾಯಿಣಿ ಅಜ್ಜಿ ಕಳೆದ 7 ವರ್ಷದಿಂದ ಯೋಗದ ಮೊರೆ ಹೋಗಿದ್ದಾರೆ. 72ರ ಇಳಿ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುತ್ತಾರೆ. ಈ ಅಜ್ಜಿ ಯೋಗ ಮಾಡೋದು ನೋಡಿದ್ರೆ ಯೋಗ ಪಟುಗಳೇ ಹುಬ್ಬೇರಿಸಬೇಕು.

ಬಿಪಿ ಲೋ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದ್ರಾಕ್ಷಾಯಿಣಿ ಬಡ ಮಹಿಳೆ. ಈಕೆಗೆ ಆಸ್ಪತ್ರೆಗೆ ಹೋಗಿ ಖರ್ಚು ಮಾಡುವ ಶಕ್ತಿ ಇಲ್ಲದಾಗಿತ್ತು. ನಿತ್ಯ ವಾಕಿಂಗ್ ಮಾಡುತ್ತಾ ಯೋಗ ಆರಂಭಿಸಿದ ಅಜ್ಜಿ, ಯೋಗದ ವಿವಿಧ ಆಸನಗಳನ್ನು ರೂಢಿಸಿಕೊಂಡಿದ್ದಾರೆ. ಯೋಗ ಮಾಡಲು ಆರಂಭಿಸಿದ ಬಳಿಕ ಈಗ ಆರೋಗ್ಯ ಸಂಪೂರ್ಣ ಸುಧಾರಣೆ ಆಗಿದೆ ಅಂತಾಳೆ 72 ವರ್ಷದ ಅಜ್ಜಿ.

ಇದನ್ನೂ ಓದಿ: ಇವರಿಗೆ ಇದೆ ‘ಜಲ’ಯೋಗ.. ನೀರಿನ ಮೇಲೆ 80ಕ್ಕೂ ಅಧಿಕ ಯೋಗಾಸನ ಮಾಡ್ತಾರೆ ಅಪ್ಪ-ಮಗಳು..!

ದ್ರಾಕ್ಷಾಯಿಣಿ ವಡಗೇರಿ ನಿತ್ಯ ಬೆಳಗ್ಗೆ 5.30ಕ್ಕೆ ವಾಕಿಂಗ್ ಹೋಗುವ ಜೊತೆಗೆ ರಸ್ತೆ ಬದಿಯಲ್ಲೇ ಒಂದು ಗಂಟೆಗಳ ಕಾಲ ಯೋಗಾಭ್ಯಾಸ ಮಾಡುತ್ತಾರೆ. ಪ್ರತಿ ದಿನ ಏನೇ ತಪ್ಪಿದರೂ ಯೋಗ ಮಾಡುವುದು ತಪ್ಪಿಸಲ್ಲ. ಯೋಗ ಆರಂಭ ಮಾಡಿದಾಗಿಂದ ಯಾವುದೇ ಕಾಯಿಲೆ ಇಲ್ಲದೇ ಆರೋಗ್ಯವಾಗಿದ್ದೇನೆ. ಬೆಳಗ್ಗೆ ವಾಕಿಂಗ್, ಯೋಗಾಭ್ಯಾಸದ ಬಳಿಕ ಅಡುಗೆ ಮಾಡಲು ರಸ್ತೆ ಬದಿಯಲ್ಲಿ ಸಿಗುವ ಕಟ್ಟಿಗೆ ಆಯ್ದುಕೊಂಡು ಹೋಗಿ ಜೀವನ ಸಾಗಿಸುತ್ತಿದ್ದಾರೆ.

ಯೋಗದಿಂದ ರೋಗ ದೂರ ಮಾಡಿಕೊಂಡ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ನಿವಾಸಿ ದ್ರಾಕ್ಷಾಯಿಣಿ ವಡಗೇರಿ ಎಲ್ಲರಿಗೂ ಮಾದರಿ. 72ನೇ ವಯಸ್ಸಿನಲ್ಲಿ ಅಜ್ಜಿ ಮಾಡುವ ಯೋಗದ ಆಸನಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಬಟರ್ ಫ್ಲೈ ಪೋಸ್ ಕೊಟ್ಟು ಮೋಡಿ ಮಾಡಿದ ಓಲ್ಡ್ ಲೇಡಿ; ಅಬ್ಬಾ.. ಅಜ್ಜಿಯ ಯೋಗಾಸನ ಹೇಗಿದೆ ನೋಡಿ!

https://newsfirstlive.com/wp-content/uploads/2023/06/Ajji-Yogasana.jpg

Load More