ಅಮ್ಮನಿಗೆ ದೇಶ ತೋರಿಸ್ತಿದ್ದಾರೆ ಮೈಸೂರಿನ ಡಿ.ಕೃಷ್ಣಕುಮಾರ್
ಎರಡು ದಶಕಗಳ ಹಿಂದೆ ತಂದೆ ತೆಗೆಸಿಕೊಟ್ಟ ಸ್ಕೂಟರ್
ಅಮ್ಮನಿಗೆ ಇವರು ತೋರಿಸುವ ಪ್ರೀತಿ, ಕಾಳಜಿಗೆ ಸೆಲ್ಯೂಟ್
ಅಮ್ಮನಿಗೆ ಜಗತ್ತು ತೋರಿಸುವ ಹಠ ಹೊತ್ತ ಮಗನೊಬ್ಬ, ತಂದೆ ಕೊಡಿಸಿದ ಸ್ಕೂಟರ್ನಲ್ಲಿ ಅಮ್ಮನನ್ನು ಕೂರಿಸಿಕೊಂಡು ದೇಶ ಸುತ್ತುತ್ತ ಉಡುಪಿಗೆ ಬಂದಿದ್ದಾನೆ. ಕೂಡು ಕುಟುಂಬದಲ್ಲಿ ಬೆಳೆದ ಯುವಕ ಮೈಸೂರಿನ ಡಿ.ಕೃಷ್ಣಕುಮಾರ್, ತನ್ನ ತಾಯಿ ಚೂಡಾರತ್ನಮ್ಮ ಜೊತೆಗೆ ಭಾರತ ಸಂಚಾರ ಪೂರೈಸಿದ್ದಾರೆ.
ಎರಡು ದಶಕದ ಹಿಂದೆ ತಂದೆ ತೆಗೆಸಿಕೊಟ್ಟ ಸ್ಕೂಟರ್ನಲ್ಲಿ ಇವರ ಈ ಪ್ರವಾಸ ಪೂರ್ಣಗೊಂಡಿರುವುದು ಮತ್ತೊಂದು ವಿಶೇಷ. ಈ ಸ್ಕೂಟರ್ನ ರೂಪದಲ್ಲಿ ತಂದೆ ಜೀವಂತ ಇದ್ದಾರೆ. ನಮ್ಮದು ಕುಟುಂಬ ಪ್ರವಾಸ ಅನ್ನುವ ಕಲ್ಪನೆಯೊಂದಿಗೆ ಸಂಪೂರ್ಣ ದೇಶ ಮಾತ್ರವಲ್ಲದೇ ನೆರೆ ರಾಷ್ಟ್ರಗಳಿಗೂ ಈ ತಾಯಿ ಮಗ ಪ್ರವಾಸ ನಡೆಸಿದ್ದಾರೆ.
ಕೃಷ್ಣಕುಮಾರ್ ತಾನು ಕೆಲಸ ಮಾಡುತ್ತಿದ್ದ ಐಟಿ ಕಂಪನಿಯಲ್ಲಿ ಸ್ವಯಂ ನಿವೃತ್ತಿ ಪಡೆದು, ಅಮ್ಮನನ್ನು ಕರೆದುಕೊಂಡು ದೇಶ ಸುತ್ತಲು ಆರಂಭಿಸಿದ್ದಾರೆ.
ಉತ್ತರ ಭಾರತದ ಎಲ್ಲಾ ತೀರ್ಥಕ್ಷೇತ್ರಗಳನ್ನು ಸುತ್ತುವುದರ ಜೊತೆಗೆ ದಕ್ಷಿಣ ಭಾರತದ ಪ್ರತಿಯೊಂದು ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮದ ಒಲವು ಹೊಂದಿದ್ದ ಕೃಷ್ಣಕುಮಾರ್ ಲೌಕಿಕ ಜೀವನದಲ್ಲಿ ಯಾವುದೇ ಆಸಕ್ತಿ ಇರದ ಕಾರಣ ಪ್ರೀತಿಯನ್ನೆಲ್ಲಾ ತಾಯಿಗೆ ಮುಡಿಪಾಗಿಟ್ಟು ಅವಿವಾಹಿತರಾಗಿಯೇ ಉಳಿದಿದ್ದಾರೆ. ವಯಸ್ಸು 73 ಆದರೂ ತಾಯಿ ಚೂಡಾ ರತ್ನಮ್ಮ ಸ್ಕೂಟರ್ನ ಹಿಂದಿನ ಸೀಟಿನಲ್ಲಿ ನವ ಯುವತಿಯಂತೆ ಉತ್ಸಾಹದಿಂದ ದೇಶವನ್ನೇ ಕಣ್ಣಿನೊಳಗೆ ತುಂಬಿಕೊಂಡಿದ್ದಾರೆ.
ತಾವು ಸಂಚರಿಸಿದ ತೀರ್ಥಕ್ಷೇತ್ರಗಳಲ್ಲೇ ತಂಗುತ್ತಾರೆ. ಜನರ ಪ್ರೀತಿಗೆ ಪಾತ್ರರಾಗಿ ದೇವಾಲಯ, ಆಶ್ರಮಗಳಲ್ಲೇ ಊಟ ಮಾಡುತ್ತಾರೆ. ಹೋಟೆಲ್ ರೂಂ, ಊಟ ಅಂತ ಯಾವುದೇ ಖರ್ಚು ಮಾಡದೇ ಅತ್ಯಂತ ಸರಳವಾಗಿ ಪ್ರವಾಸ ನಡೆಸುವ ಈ ತಾಯಿ ಮಗನನ್ನು ನೋಡೋದೇ ಒಂದು ಖುಷಿ. ಸಾಧ್ಯವಾದರೆ ಪಾಶ್ಚತ್ಯ ಜಗತ್ತನ್ನು ಕೂಡ ಇದೇ ಸ್ಕೂಟರ್ನಲ್ಲಿ ಸುತ್ತಬೇಕು ಅನ್ನೋದು ಇವರಿಬ್ಬರ ಆಸೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ