newsfirstkannada.com

ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿದ 75 ವರ್ಷದ ಹಳೆ ಲಾರಿ! ಹೇಗಿದೆ ಗೊತ್ತಾ?

Share :

21-10-2023

    ಹೊಸ ಲುಕ್ ಪಡೆದ 75 ವರ್ಷದ ಹಳೆಯ ಲಾರಿ

    ಡಾ. ವೀರೇಂದ್ರ ಹೆಗ್ಗಡೆ ಅವರ ತಂದೆಯವರ ಕಾಲದ ವಾಹನ

    30 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದ ಲಾರಿಗೀಗ ಹೊಸ ಲುಕ್

ಇದು ಅಂತಿಂತ ಲಾರಿಯಲ್ಲ. ಬರೋಬ್ಬರಿ 75 ವರ್ಷ ಹಳೆಯ ಲಾರಿಯೊಂದು ಹೊಸ ಲುಕ್ ನೊಂದಿಗೆ ಓಲ್ಡ್ ಈಸ್ ಗೋಲ್ಡ್ ಎನ್ನುವ ರೇಂಜ್ ಗೆ ರೆಡಿಯಾಗಿದೆ. 75 ವರ್ಷ ಈ ಹಳೆಯ ಲಾರಿ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಮಂಜೂಷಾ ಹೆಸರಿನ ಮ್ಯೂಸಿಯಂ ಸೇರಿಕೊಂಡಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ ಹೆಗಡೆ ಅವರ ವಿಶೇಷ ಮುತುವರ್ಜಿಯಿಂದ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮಲ್ಯಾಡಿಯ ಗಜಾನನ ಬಾಡಿ ಬಿಲ್ಡ್ ಹಾಗೂ ವೆಲ್ಡಿಂಗ್ ಗ್ಯಾರೇಜ್ ನಲ್ಲಿ ಪುನರ್ ವಿನ್ಯಾಸಗೊಂಡು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪಿದೆ.

1948ನೇ ಇಸವಿಯ ಪೋರ್ಡ್ ಕಂಪನಿಯ ಎಂ ಸೀರೀಸ್‌ನ ಈ ಲಾರಿಯು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ತಂದೆಯವರ ಕಾಲದ ವಾಹನ. ಈ ಲಾರಿಯು ಕ್ಷೇತ್ರದ ಸರಕು ಸಾಗಾಣಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 30 ವರ್ಷ ಸೇವೆ ಸಲ್ಲಿಸಿ ತನ್ನ ಬಿಡಿ ಭಾಗಗಳ ಕೊರತೆಯಿಂದ ಹೊಸ ವಾಹನ ಗಳ ಆಗಮನ ದಿಂದ ತನ ಸೇವೆಗೆ ನಿವೃತ್ತಿ ಪಡೆದಿತ್ತು.

ವೀರೇಂದ್ರ ಹೆಗ್ಡೆಯವರು ತಮ್ಮ ತಂದೆಯ ಕಾಲದ ವಾಹನವನ್ನು ಸುಂದರವಾಗಿ ರೂಪಿಸಲು ತಾವೇ ಲಾರಿಯ ಹೊಸ ಲುಕ್‌ನ ನೀಲನಕ್ಷೆಯನ್ನು ತಯಾರಿಸಿ ಅವರೇ ಗ್ಯಾರೇಜು ಮಾಲೀಕರಿಗೆ ನೀಡಿ ಮರುನವೀಕರಿಸಿದ್ದಾರೆ. 1948ನೇ ಇಸವಿಯ ಫೋರ್ಡ್ ಕಂಪೆನಿಯಲ್ಲಿ ತಯಾರಾದ ಈ ಲಾರಿ ವಿರಿ ಸೀರೀಸ್‌ನದ್ದಾಗಿದ್ದು‌, ಮೇಕ್ ಇನ್ ಇಂಗ್ಲೆಂಡ್ ಆಗಿದ್ದು, 6 ಸಿಲಿಂಡರ್​ ಸಾಮರ್ಥ್ಯದ ಎಂಜಿನ್,‌ ಒರಿಜಿನಲ್ ಶೇಖ್‌ ಪ್ಯೂಯಿಡ್ ಬ್ರೇಕ್, ಅತಿ ದೊಡ್ಡದಾದ ಶೇಪ್ ಕ್ಯಾಬಿನ್ ಒಳಭಾಗದಲ್ಲಿ ವಿಶಾಲ ಜಾಗ, ನಾಜೂಕಾದ ಮರದ ಕೆಲಸಗಳು ಜೊತೆಗೆ 26 ಪೈಂಟಿಂಗ್ ಕೆಲಸದಿಂದ ಗಮನಸೆಳೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂ ಸೇರಿದ 75 ವರ್ಷದ ಹಳೆ ಲಾರಿ! ಹೇಗಿದೆ ಗೊತ್ತಾ?

https://newsfirstlive.com/wp-content/uploads/2023/10/Dharmastala-Truck.jpg

Load More