newsfirstkannada.com

WATCH: ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವ್ಯಕ್ತಿ ದಾರುಣ ಸಾವು; ಮಂಡ್ಯದಲ್ಲಿ ಸಾರಿಗೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನ

Share :

19-06-2023

    ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಅರಕನಕೆರೆ ಗ್ರಾಮದ ವ್ಯಕ್ತಿ ದಾರುಣ ಸಾವು

    ಬಾಗಿಲು ಇಲ್ಲದ ಬಸ್ ಸಂಚಾರಕ್ಕೆ ಬಿಟ್ಟಿದ್ದು ಯಾಕೆ? ಅಧಿಕಾರಿಗೆ ತರಾಟೆ

    ಮೃತ ವ್ಯಕ್ತಿಯ ಕುಟುಂಬಕ್ಕೆ 25 ಸಾವಿರ ಪರಿಹಾರ ಧನ ನೀಡಿದ ಅಧಿಕಾರಿ

ಮಂಡ್ಯ: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರೋ ಘಟನೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ನಡೆದಿದೆ. ಅರಕನಕೆರೆ ಗ್ರಾಮದ ಚಲುವೇಗೌಡ (75) ಮೃತ ವ್ಯಕ್ತಿ.

ಅಧಿಕ ಪ್ರಯಾಣಿಕರಿಂದ ಬಸ್​ ತುಂಬಿ ತುಳುಕುತ್ತಿತ್ತು. ಹೀಗಾಗಿ ಚಲುವೇಗೌಡ ಎಂಬುವವರು ಬಾಗಿಲ‌ ಬಳಿ ನಿಂತುಕೊಂಡಿದ್ದರು. ಇದೇ ವೇಳೆ ಬಸ್‌ಗೆ ಡೋರ್ ಇಲ್ಲದ ಕಾರಣ ವ್ಯಕ್ತಿಯು ಆಯಾ ತಪ್ಪಿ ಕೆಳಗೆ ಬಿದಿದ್ದಾರೆ. ಕೆಳಗೆ ಬಿದ್ದ ರಭಸಕ್ಕೆ ವ್ಯಕ್ತಿಯ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮೇಲುಕೋಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗೆ ಸಾರ್ವಜನಿಕರಿಂದ ತರಾಟೆ ತೆಗೆದುಕೊಂಡಿದ್ದಾರೆ. ಬಾಗಿಲು ಇಲ್ಲದ ಬಸ್ ಸಂಚಾರಕ್ಕೆ ಬಿಟ್ಟಿದ್ದು ಯಾಕೆ? RTOಯಿಂದ ಬಾಗಿಲಿಲ್ಲದ ಬಸ್ ಸಂಚಾರಕ್ಕೆ ಆನುಮತಿ ಕೊಟ್ಟಿದ್ದಾರಾ? ಈ ದುರ್ಘಟನೆಗೆ ಯಾರು ಹೊಣೆ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ಸ್ಥಳದಲ್ಲೇ RTO ಅಧಿಕಾರಿಯು ಮೃತ ವ್ಯಕ್ತಿಯ ಕುಟುಂಬಕ್ಕೆ 25 ಸಾವಿರ ಪರಿಹಾರ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವ್ಯಕ್ತಿ ದಾರುಣ ಸಾವು; ಮಂಡ್ಯದಲ್ಲಿ ಸಾರಿಗೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಜನ

https://newsfirstlive.com/wp-content/uploads/2023/06/mnd-free-bus.jpg

Load More