newsfirstkannada.com

ಆಹಾ ನನ್ನ ಮದ್ವೆಯಂತೆ.. ಓಹೋ ನನ್ನ ಮದ್ವೆಯಂತೆ.. 35 ವರ್ಷದ ಮಹಿಳೆಯ ಜೊತೆ ಸಪ್ತಪದಿ ತುಳಿದ 75ರ ವೃದ್ಧ!

Share :

10-09-2023

    ಒಬ್ಬಂಟಿ ಈರಣ್ಣನ ಬಾಳಿಗೆ ಪ್ರೀತಿಯ ಬೆಳಕು ಚೆಲ್ಲಿದ ಅನುಶ್ರೀ!

    ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಮದುವೆ

    ಅನುಶ್ರೀಯನ್ನು ಪ್ರಾಣದಂತೆ ಪ್ರೀತಸುತ್ತೇನೆ ಅಂತ ಈರಣ್ಣ

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತಂತೆ. ಮನುಷ್ಯ ಹುಟ್ಟೋವಾಗಲೇ ಆತನ ಸಂಗಾತಿ ಯಾರೆಂದು ಬ್ರಹ್ಮ ಹಣೆಯ ಮೇಲೆ ಗೀಚಿರ್ತಾನಂತೆ. ಇಲ್ಲೂ ಓರ್ವ ವೃದ್ಧನ ಪಾಲಿಗೆ 75 ವರ್ಷದ ಹರೆಯದಲ್ಲಿ ಒದಗಿ ಬಂದ ಕಂಕಣ ಸೌಭಾಗ್ಯ ಆತನಿಗೆ ಮರುಜನ್ಮ ನೀಡಿದೆ. ಏಕಾಂಗಿ ಜೀವನ ಹಾದಿ ಸವೆಸುತ್ತಿದ್ದ ವೃದ್ಧನ ಬಾಳಲ್ಲಿ ಪ್ರೇಮಗೀತೆ ಮೂಡಿ ಹೊಸ ಬೆಳಕು ಚೆಲ್ಲಿದೆ. ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಕಿವಿ, ಮೂಗು, ಬಾಯಿ ಯಾವುದೂ ಇಲ್ಲ ಅಂತಾರೆ. ನಾವು ಇವತ್ತು ಹೇಳೋಕೆ ಹೊರಟಿರೋ ಈ ಸ್ಟೋರಿ ಕೇಳಿದ್ರೆ ಪ್ರೀತಿ ಮುಂದೆ ವಯಸ್ಸು, ಸೌಂದರ್ಯ ಲೆಕ್ಕಕ್ಕೇ ಬರಲ್ಲ ಅಂತ ನಿಮಗೆ ಅನ್ನಿಸದೇ ಇರಲ್ಲ. ಯಾಕಂದ್ರೆ ಇದು 75 ವೃದ್ದರೊಬ್ರು 35 ಮಹಿಳೆಯ ಮನೆಗದ್ದು ಮನೆ ಅರಸಿ ಮಾಡಿಕೊಂಡ ಸೂಪರ್​ ಡೂಪರ್​ ಲವ್​ ಸ್ಟೋರಿ.

ಈ ಪ್ರೀತಿಗೆ ಬರುವಾಗ ಕಾರಣ ಬೇಕಿಲ್ಲ. ಒಮ್ಮೆ ಬಂದು ಹೃದಯದ ಅರಮನೆ ಸೇರಿದ್ರೆ ಮತ್ತೆ ವಾಪಸ್​ ಹೋಗಲ್ಲ. ಈ ಸ್ಟೋರಿಯಲ್ಲಾಗಿದ್ದು ಅದೇ ಕತೆ ನೋಡಿ. 75 ವರ್ಷದ ವೃದ್ದರೊಬ್ಬರ ಮನದಲ್ಲಿ ಚಿಗುರಿದ ಪ್ರೀತಿ, 35ರ ಮಹಿಳೆಯ ಹೃದಯವನ್ನ ಗೆದ್ದು, ಮದುವೆಯೆಂಬ ಬಂಧನದ ಜೊತೆ ಹೊಸ ಬಾಳಿನ ಹೊಸಿಲಿಗೆ ರಂಗೋಲಿ ಇಟ್ಟಿದೆ.

35 ವರ್ಷದ ಮಹಿಳೆಯ ಜೊತೆ ಸಪ್ತಪದಿ ತುಳಿದ 75ರ ವೃದ್ಧ!

ಹೀಗೆ ಏಕಾಂಗಿ ಯಾಗಿ ನಡೆದು ಬರ್ತಿದಾರಲ್ಲ ಇವರೇ ನಮ್ಮ ಇವತ್ತಿನ ಲವ್​ ಸ್ಟೋರಿಯ ಹೀರೋ. ಇವರು ಹೆಸರು ಈರಣ್ಣ ಅಂತ.. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದವರೂ. ಬಂಧು ಬಳಗ ಭಾರೀ ಪ್ರಮಾಣದಲ್ಲಿದ್ರು ಈ ಈರಣ್ಣನಿಗೆ ಜೊತೆ ಇದ್ದಿದ್ದು ಮಾತ್ರ ಏಕಾಂಗಿ ಅನ್ನೋ ಸಂಗಾತಿ ಮಾತ್ರ. ಕಳೆದ ಕೆಲ ವರ್ಷಗಳ ಹಿಂದೆ ಈ ಈರಣ್ಣ ಅವರ ಪತ್ನಿ ಇಹಲೋಕ ತ್ಯಜಿಸಿದ್ರು. ಆ ಮೇಲೆ ಮದುವೆಯಾದ ಹೆಣ್ಣು ಮಕ್ಕಳು ಗಂಡನ ಮನೆ ಸೇರಿದ್ರೆ, ಮಗ ಅಪ್ಪನ ಬಗ್ಗೆ ಡೋಂಟ್​ ಕೇರ್​ ಎಂದಿದ್ದ. ಈರಣ್ಣ ಮಾತ್ರ ಒಬ್ಬರೇ ಮನೆಯಲ್ಲಿ ಒಂಟಿಯಾಗಿ ವಾಸ ಮಾಡ್ತಿದ್ರು. ಒಂಟಿ ಜೀವನದಿಂದ ಬೇಸತ್ತಿದ್ದ ಈ ಈರಣ್ಣನ ಬಾಳಲ್ಲಿ ಇದ್ದಕ್ಕಿಂದಂತೆ ಹೊಸ ಪ್ರೀತಿಯ ರಾಗವೊಂದು ಪ್ರತಿಧ್ವನಿಸಿತ್ತು. ಈರಣ್ಣ ಎಂಬ ವೈರಾಗ್ಯದ ಹಾಡಿಗೆ ಅನುಶ್ರೀ ಅನ್ನೋ ಪ್ರೀತಿಯ ಪಲ್ಲವಿ ಜೊತೆಯಾಗಿತ್ತು.

ಅನುಶ್ರೀ-ಈರಣ್ಣ
ಅನುಶ್ರೀ-ಈರಣ್ಣ

ಅನುಶ್ರೀಯ ಜೊತೆ ಹೊಸಬಾಳಿಗೆ ಕಾಲಿಟ್ಟ ಈರಣ್ಣ!

ಈ ಪೋಟೋದಲ್ಲಿ ಈರಣ್ಣನ ಜೊತೆ ಮದುವೆ ಕಾಸ್ಟೂಮಿನಲ್ಲಿ ನಿಂತಿರೋ ಈಕೆನೇ ಈರಣ್ಣ ಮನಗೆದ್ದ ಸುಂದರಿ. ಈಕೆ ಹೆಸರು ಅನುಶ್ರೀ. ಮೂಲತಃ ಮಹಾರಾಷ್ಟ್ರದ ಸೋಲಾಪುರದ ಈಕೆಗೆ ಅಪ್ಪ-ಅಮ್ಮ ಬಂಧು ಬಳಗ ಯಾರೂ ಇಲ್ಲ. ನೀನೆ ಸರ್ವಸ್ವ ಅಂತ ನಂಬಿ ಬಂದಿದ್ದ ಪತಿಯೂ ಕಳೆದ ಕೆಲ ವರ್ಷಗಳ ಹಿಂದೆ ಕೈಕೊಟ್ಟು ಹೋಗಿದ್ದ. ಬಳಿಕ ಈರಣ್ಣನ ಪ್ರೀತಿಗೆ ದಾಸಿಯಾದ ಅನುಶ್ರೀ ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಈರಣ್ಣನ ಜೊತೆ ಸಪ್ತಪದಿ ತುಳಿದಿದ್ದಾಳೆ.

ದಿಕ್ಕು ತಪ್ಪಿದ ಈರಣ್ಣನ ಬದುಕಿಗೆ ದಿಕ್ಸೂಚಿಯಾದ ಅನುಶ್ರೀ!

75 ವರ್ಷದ ವಯಸ್ಸಿನ ಈ ಈರಣ್ಣನಿಗೆ ಹೃದಯ ಸಂಬಂಧಿ ಸಮಸ್ಯೆ, ಬಿಪಿ, ಶುಗರ್ ಇದೆ. ಇಷ್ಟಾದ್ರೂ ಹೆತ್ತ ಮಕ್ಕಳು ಮಾತ್ರ ಅಪ್ಪ ಬದುಕಿದ್ದೀಯ ಸತ್ತಿದ್ದೀಯ ಅಂತ ಕೇಳ್ತಿರ್ಲಿಲ್ಲ. ಇಂತಹ ಹೊತ್ತಲ್ಲೇ ಈರಣ್ಣನ ಬಾಳಿನಲ್ಲಿ ಹೊಸ ಪ್ರೀತಿಯ ಬೆಳಕು ಮೂಡಿಸಿದ ಅನುಶ್ರೀ, ಅವರ ಬಾಳಿಗೆ ತನ್ನ ಪ್ರೀತಿಯನ್ನ ಧಾರೆ ಎರೆದಿದ್ದಾಳೆ. ತನ್ನ ಆಸ್ತಿಯಲ್ಲಿ ಒಂದು ಭಾಗವನ್ನು ಅನುಶ್ರೀಗೆ ಮಾಡ್ತೀನಿ, ಆಕೆಯನ್ನು ಪ್ರಾಣದಂತೆ ಪ್ರೀತಸುತ್ತೇನೆ ಅಂತ ಈರಣ್ಣ ಹೇಳಿಕೊಂಡಿದ್ದಾರೆ. ಇನ್ನೂ ಈರಣ್ಣನ ಮಗಳು ಮಂಜುಳ ಸಹ ಅಪ್ಪನ ಪ್ರೀತಿಗೆ ಆಸರೆಯಾಗಿ ನಿಂತು ಮದುವೆ ಮಾಡಿಸಿದ್ದಾರೆ.

ಒಟ್ನಲ್ಲಿ ಆಸ್ತಿ, ಅಂತಸ್ತು ಎಷ್ಟಿದ್ರೆ ಏನು, ನಮ್ಮ ಕೊನೆಗಾಲದಲ್ಲಿ ನಮಗಾಗಿ ಮಿಡಿಯದ ಒಂದು ಮನಸ್ಸು ಇಲ್ಲ ಅಂದ್ರೆ ಆ ಜೀವನ ಪರಿಪೂರ್ಣ ಆಗಲು ಸಾಧ್ಯವಿಲ್ಲ. ಹೀಗೆ ಬದುಕಿನ ಕೊನೆಯಲ್ಲಿ ಏಕಾಂಗಿ ಜೀವನದಿಂದ ಬೇಸತಿದ್ದ ಈರಣ್ಣನ ಬದುಕಲ್ಲಿ ಹೊಸ ಪ್ರೇಮಗೀತೆ ಮೂಡಿದೆ. ತನ್ನವರು ಯಾರೂ ಇಲ್ಲ ಅಂತ ಮರುಗಿದ್ದ ಈರಣ್ಣನ ಬಾಳಲ್ಲಿ ಅನುಶ್ರೀಯ ಪ್ರೀತಿ ಮರುಭೂಮಿಯಲ್ಲಿ ಎಳನೀರು ಸಿಕ್ಕಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಹಾ ನನ್ನ ಮದ್ವೆಯಂತೆ.. ಓಹೋ ನನ್ನ ಮದ್ವೆಯಂತೆ.. 35 ವರ್ಷದ ಮಹಿಳೆಯ ಜೊತೆ ಸಪ್ತಪದಿ ತುಳಿದ 75ರ ವೃದ್ಧ!

https://newsfirstlive.com/wp-content/uploads/2023/09/Iranna.jpg

Load More