newsfirstkannada.com

Independence Day 2023: ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿದವರು ಯಾರು ಗೊತ್ತೇ? ಇವರೇ ನೋಡಿ

Share :

15-08-2023

    77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಭಾರತೀಯರು

    ಭಾರತದ ಧ್ವಜವು ಮೂರು ಬಣ್ಣಗಳಿಂದ ಕೂಡಿದೆ

    ಧ್ವಜದ ಬಣ್ಣ ಏಕತೆ, ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ತೋರಿಸುತ್ತದೆ

ಇಂದು ಭಾರತೀಯರಿಗೆ 77ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಇಂದು ಪ್ರತಿಯೊಬ್ಬರ ಮನೆಗಳಲ್ಲಿ, ಸರ್ಕಾರಿ ಕಚೇರಿ, ಶಾಲೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಆದರೆ ಈ ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿದವರು ಯಾರು ಗೊತ್ತೇ? ಇಲ್ಲಿದೆ ಮಾಹಿತಿ.

ಭಾರತದ ಧ್ವಜವು ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ, ಬಿಳಿ, ಹಸಿರು ಬಣ್ಣದಿಂದ ಕಂಗೊಳಿಸುತ್ತದೆ. ಇದು ಏಕತೆ, ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ತೋರಿಸುತ್ತದೆ. ಅಂದಹಾಗೆಯೇ ಈ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದ ಕೀರ್ತಿ ಪಿಂಗಲಿ ವೆಂಕಯ್ಯರವರಿಗೆ ಸಲ್ಲುತ್ತದೆ.

ಪಿಂಗಲಿ ವೆಂಕಯ್ಯ
ಪಿಂಗಲಿ ವೆಂಕಯ್ಯ

1921ರಲ್ಲಿ ಪಿಂಕಲಿ ವೆಂಕಯ್ಯ ಅವರು ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. 1916ರಿಂದ 1921ರವರೆಗೆ ಸುಮಾರು 30 ದೇಶಗಳನ್ನು ಸುತ್ತಿದ ಅವರು ಧ್ವಜಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿದರು. ಬಳಿಕ ಧ್ವಜದ ವಿನ್ಯಾಸವನ್ನು ಮಾಡಿದರು.

ಪ್ರಾರಂಭದಲ್ಲಿ ತ್ರಿವರ್ಣ ಧ್ವಜ ಕೊಂಚ ಭಿನ್ನವಾಗಿತ್ತು. ಕೆಂಪು, ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿತ್ತಲ್ಲದೆ, ಚರಕಕ್ಕೂ ಅದರದೇ ಆದ ಸ್ಥಾನವನ್ನು ನೀಡಲಾಗಿತ್ತು. 1931ರ ಬಳಿಕ ಕೆಂಪು ಬಣ್ಣವನ್ನು ತೆಗೆದು ಕೇಸರಿ ಬಣ್ಣವನ್ನು ಅನ್ವಯಿಸಲಾಯಿತು. ಅದರ ಜೊತೆಗೆ ಚರಕದ ಬದಲು ಅಶೋಕ ಚಕ್ರವನ್ನು ಸೇರಿಸಲಾಯಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Independence Day 2023: ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸ ಮಾಡಿದವರು ಯಾರು ಗೊತ್ತೇ? ಇವರೇ ನೋಡಿ

https://newsfirstlive.com/wp-content/uploads/2023/08/Pingali-venkayya.jpg

Load More