newsfirstkannada.com

77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ.. ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

Share :

15-08-2023

    ದೇಶಾದ್ಯಂತ ವಿಜೃಂಭಣೆಯ 77ನೇ ಸ್ವಾತಂತ್ರ್ಯ ದಿನಾಚರಣೆ

    ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿಯವರು ಧ್ವಜಾರೋಹಣ

    ಪ್ರಧಾನಿ ಮೋದಿಗೆ ಸ್ವಾಗತ ಕೋರಿದ 3 ಪಡೆಯ ರಕ್ಷಣಾ ಪಡೆ

ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಆಗಸದಲ್ಲಿ ಹೆಲಿಕಾಪ್ಟರ್​ ಮೂಲಕ ಹೂಮಳೆ ಸುರಿಸಲಾಯಿತು. ಪ್ರಧಾನಿ ಮೋದಿಯವರು 10ನೇ ಬಾರಿಗೆ ಧ್ವಜಾರೋಹಣ ಮಾಡಿರುವುದು ಮತ್ತೊಂದು ವಿಶೇಷ ಎನಿಸಿತು. ಬಳಿಕ ದೇಶವನ್ನುದ್ದೇಶಿಸಿ  ಪ್ರಧಾನಿ ಮೋದಿಯವರು ಭಾಷಣ ಮಾಡಿದರು.

ಇದಕ್ಕೂ ಮೊದಲು ಮಹಾತ್ಮ ಗಾಂಧಿಜೀಯವರ ರಾಜ್​ಕೋಟ್​ಗೆ ನಮಿಸಿದ ಪ್ರಧಾನಿ ಮೋದಿಯವರು ನೇರ ಕೆಂಪುಕೋಟೆಯತ್ತ ಆಗಮಿಸಿದರು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಹೊಸ ಅರಮನೆಯಂತೆ ಕೆಂಪುಕೋಟೆಯನ್ನು ಸಿಂಗಾರ ಮಾಡಲಾಗಿತ್ತು. ನಂತರ ರಕ್ಷಣಾ ಸಚಿವರು, ರಕ್ಷಣಾ ಕಾರ್ಯದರ್ಶಿ, ಸಿಡಿಎಸ್​ ಸೇರಿದಂತೆ 3 ಸೇನಾಪಡೆಗಳಿಂದ ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಲಾಯಿತು.

ಧ್ವಜಾರೋಹಣದಲ್ಲಿ ವಿಶೇಷ ಅತಿಥಿಗಳು..!

ಈ ಅದ್ಧೂರಿ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1,800 ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಕೇಂದ್ರ ಸಚಿವರು, ಸಂಸದರು, ಸೇನಾಧಿಕಾರಿಗಳು ಸೇರಿದಂತೆ ಗಣ್ಯಾತಿಗಣ್ಯರು ತ್ರಿವರ್ಣ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ವಿಶೇಷ ಅತಿಥಿಗಳಲ್ಲಿ 600ಕ್ಕೂ ಹೆಚ್ಚು ಗ್ರಾಮಗಳ 400 ಸರಪಂಚ್‌ಗಳು, ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250 ರೈತರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ತಲಾ 50 ಅತಿಥಿಗಳು ಭಾಗವಹಿಸಿದ್ದಾರೆ. ಸೆಂಟ್ರಲ್‌ ವಿಸ್ತಾ ಬಿಲ್ಡಿಂಗ್​ ನಿರ್ಮಾಣದಲ್ಲಿ ಕೆಲಸ ಮಾಡಿದ 50 ಶ್ರಮ ಯೋಗಿ ಕಾರ್ಮಿಕರು, ಗಡಿಯಲ್ಲಿ ರಸ್ತೆ ನಿರ್ಮಾಣ ಮಾಡಿದ 50 ಜನ, 50 ಖಾದಿ ಕಾರ್ಮಿಕರು, 50 ಪ್ರಾಥಮಿಕ ಶಾಲಾ ಶಿಕ್ಷಕರು, 50 ದಾದಿಯರು, ಹರ್ ಘರ್ ಜಲ ಯೋಜನೆಯಲ್ಲಿ ತೊಡಗಿದ 50 ಮಂದಿ, 50 ಮೀನುಗಾರರನ್ನು ಈ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರ ಈ ಮೊದಲೇ ಇವರಿಗೆ ಆಹ್ವಾನ ನೀಡಿತ್ತು. ಹೀಗಾಗಿ ಕೆಂಪುಕೋಟೆಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಡಗರದಿಂದ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

77ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ.. ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/08/Modi-3.jpg

Load More