ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದಿದ್ದ ಟೀ ಅಂಗಡಿ ಮಾಲೀಕ
ಟೀ ಅಂಗಡಿ ಮಾಲೀಕನನ್ನು ಕಿಡ್ನಾಪ್ ಮಾಡಿದ್ದ ಗ್ಯಾಂಗ್
ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ್ರು..!
ಬೆಂಗಳೂರು: ಕ್ಯಾಸಿನೋದಲ್ಲಿ ಹಣ ಗೆದ್ದಿದ್ದ ಟೀ ಅಂಗಡಿ ಮಾಲೀಕರನ್ನು ಕಿಡ್ನಾಪ್ ಮಾಡಿ ಹಣ ಸುಲಿಗೆ ಗೈದಿದ್ದ ಕೇಸ್ ಸಂಬಂಧ ಪೊಲೀಸರು 8 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಕೇಸ್ ಸಂಬಂಧ ಪ್ರಮುಖ ಆರೋಪಿ ಕಾರ್ತಿಕ್, ರಾಹುಲ್ ಸೇರಿ 8 ಜನರ ಬಂಧಿಸಲಾಗಿದೆ.
ಈ ಹಿಂದೆ ಆಗಸ್ಟ್ 1ನೇ ತಾರೀಕಿನಂದು ಟೀ ಅಂಗಡಿ ಮಾಲೀಕ ತಿಲಕ್ ಮಣಿಕಂಠ ಎಂಬುವರು ಗೋವಾಗೆ ತೆರಳಿ ಕ್ಯಾಸಿನೋದಲ್ಲಿ 25 ಲಕ್ಷ ದುಡ್ಡು ಗೆದ್ದಿದ್ದರು. 25 ಲಕ್ಷ ಹಣ ಗೆದ್ದಿರೋ ವಿಚಾರ ತಿಳಿದುಕೊಂಡ ಸ್ನೇಹಿತರು ತಿಲಕ್ ಅವರನ್ನು ಕಿಡ್ನಾಪ್ ಮಾಡಿ 15 ಲಕ್ಷ ಸುಲಿಗೆ ಮಾಡಿದ್ದಾರೆ.
ಇನ್ನು, ಆಗಸ್ಟ್ 5ನೇ ತಾರೀಕು ತಿಲಕ್ ಅವರನ್ನು ಕಿಡ್ನಾಪ್ ಮಾಡಿ 15 ಲಕ್ಷ ಹಣ ಕಿತ್ತುಕೊಂಡು ಮರುದಿನ 6ನೇ ತಾರೀಕು ಬಿಟ್ಟು ಕಳಿಸಿದ್ದಾರೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ತಿಲಕ್ ದೂರು ದಾಖಲಿಸಿದ್ದರು.
ತಿಲಕ್ ದೂರು ದಾಖಲಿಸಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಗೋವಾ, ಬಾಂಬೆ ಕಡೆ ಹೋಗಿ ತಲೆ ಮರೆಸಿಕೊಂಡಿದ್ದರು. ಕೊನೆಗೆ ಶಿರಡಿಯಲ್ಲಿ ಲಾಕ್ ಆಗಿದ್ದು, ಆರೋಪಿಗಳಿಂದ 10 ಲಕ್ಷ ಹಣ ಹನುಮಂತ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ