ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ..!
ಕಾರವಾರದ ಸಿದ್ದರ ಗ್ರಾಮದಲ್ಲಿ ನಡೆದ ದುರ್ಘಟನೆ
ಮಗು ಕಳೆದುಕೊಂಡು ದುಃಖದಲ್ಲಿ ಮುಳುಗಿದ ಕುಟುಂಬ
ಕಾರವಾರ: ಮೊಬೈಲ್ ಚಾರ್ಜರ್‌ನಿಂದ ಕರೆಂಟ್ ಶಾಕ್ ತಗುಲಿ 8 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿದ್ದರ ಗ್ರಾಮದಲ್ಲಿ ನಡೆದಿದೆ.
ಸಿದ್ದರ ಗ್ರಾಮದ ಸಂತೋಷ್ ಕಲ್ಗುಟ್ಕರ್, ಸಂಜನಾ ದಂಪತಿಯ 8 ತಿಂಗಳ ಸಾನಿಧ್ಯ ಮೃತಪಟ್ಟ ಮಗು. ಪೋಷಕರು ಮನೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಂಡು ಬಟನ್ ಆಫ್ ಮಾಡದೆ ಹಾಗೇ ಬಿಟ್ಟಿದ್ದಾರೆ. ಆಡಿಕೊಂಡಿದ್ದ ಮಗು ಚಾರ್ಜರ್ನ ವೈರ್ ಅನ್ನು ಬಾಯಲ್ಲಿ ಇಟ್ಟುಕೊಂಡಿದೆ. ಇದರಿಂದ ತಕ್ಷಣ ಕರೆಂಟ್ ಶಾಕ್ ತಗುಲಿದ್ದು ಮಗು ಸ್ಥಳದಲ್ಲಿಯೇ ಮೃತಪಟ್ಟಿದೆ.
ಸದ್ಯ ಮಗು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಯು ಕಾರವಾರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ