ಸಿದ್ದು, ಡಿಕೆ ಜೊತೆ 8 ಸಚಿವರಿಂದ ಪ್ರಮಾಣವಚನ
ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ ಸತೀಶ್ ಪದಗ್ರಹಣ
ಇಂಗ್ಲಿಷ್‌ನಲ್ಲಿ ಜಮೀರ್ ಅಹ್ಮದ್ ಪ್ರಮಾಣ ವಚನ ಸ್ವೀಕಾರ
ಕಾಂಗ್ರೆಸ್ ಸರ್ಕಾರ ರಚನೆ ಆಗಿದ್ದಾಯ್ತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಪದಗ್ರಹಣವೂ ಆಯ್ತು. ಆದರೆ ನೂತನ ಸರ್ಕಾರದಲ್ಲಿ ಜೋಡೆತ್ತುಗಳಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದಲ್ಲ. ಬದಲಾಗಿ ಸಿದ್ದು ಮೊದಲ ಹಂತದ ಕ್ಯಾಬಿನೆಟ್‌ಗೆ ಅಷ್ಟ ಮಂತ್ರಿಗಳ ಎಂಟ್ರಿಯಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆಗೆ ಸಚಿವ ಸಂಪುಟದ ಸಚಿವರಾಗಿ ‘ಕೈ’ ಘಟಾನುಘಟಿ ನಾಯಕರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕಾರುಬಾರು ಶುರುವಾಗಿದೆ. ಕೈ ಜೋಡೆತ್ತುಗಳು ಸರ್ಕಾರ ನೊಗವನ್ನ ಹೊತ್ತು ಮುಂದೆ ಸಾಗಲು ಸಜ್ಜಾಗಿವೆ. ಸರ್ಕಾರ ಬಂಡಿ ಸುಭದ್ರವಾಗಿ ಸಾಗಲು ಅಷ್ಟಮಂತ್ರಿಗಳು ಹೆಗಲು ಕೊಟ್ಟಿದ್ದಾರೆ. ಮೊದಲ ಸಂಪುಟದಲ್ಲಿ ಕೈ ಕಟ್ಟಾಳುಗಳಿಗೆ ಕಾಂಗ್ರೆಸ್ ಮಣೆ ಹಾಕಿ ಸಂಪುಟಕ್ಕೆ ಸೇರ್ಪಡೆ ಮಾಡಿದೆ.
‘ಕೈ’ ಕಟ್ಟಾಳುಗಳಿಗೆ ಮೊದಲ ಕ್ಯಾಬಿನೆಟ್‌ನಲ್ಲಿ ಮಣೆ
ಸಿದ್ದು, ಡಿಕೆ ಜೊತೆ 8 ಸಚಿವರಿಂದ ಪ್ರಮಾಣವಚನ
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ರೆ, ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದ್ದ ಅಷ್ಟ ಮಂತ್ರಿಗಳು ಸಿದ್ದು ಸರ್ಕಾರದ ದಿಕ್ಪಾಲಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಸಂಪುಟದಲ್ಲಿ 8 ಮಂದಿ ಶಾಸರಕರು ಕ್ಯಾಬಿನೆಟ್ ದರ್ಜೆಯ ನೂತನ ಸಚಿವರಾಗಿ ಪ್ರತಿಜ್ಞಾವಿಧಿಯನ್ನ ಸ್ವೀಕರಿಸಿದ್ದಾರೆ.
ಸಂವಿಧಾನದ ಹೆಸರಲ್ಲಿ ಡಾ.ಜಿ. ಪರಮೇಶ್ವರ್ ಪದಗ್ರಹಣ
ಕಾಂಗ್ರೆಸ್ ಕಟ್ಟಾಳು. ದಲಿತ ನಾಯಕ ಡಾ.ಜಿ. ಪರಮೇಶ್ವರ್ ಐದನೇ ಬಾರಿಗೆ ಗೆದ್ದು ವಿಧಾನಸಭೆ ಮೆಟ್ಟಿಲು ಹತ್ತಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಡಾ.ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ್ರು. ದಲಿತ ನಾಯಕನಿಗೆ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ರು. ಇನ್ನೂ ಸಂವಿಧಾನ ಹೆಸರಿನಲ್ಲಿ ಡಾ.ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದ್ರು.
ಆಗ ಕೇಂದ್ರ ಸಚಿವ.. ಈಗ ರಾಜ್ಯ ಸಚಿವರಾದ ಮುನಿಯಪ್ಪ
ಮತ್ತೊಬ್ಬ ದಲಿತ ನಾಯಕ ಕೇಂದ್ರದ ಸಚಿವರಾಗಿಯೂ ಕಾರ್ಯನಿರ್ವಹಿಸಿರೋ ಕೆ.ಹೆಚ್. ಮುನಿಯಪ್ಪ ಕೂಡಾ ಇವತ್ತು ಪ್ರಮಾಣವಚನ ಸ್ವೀಕರಿಸಿದ್ರು. ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ದಲಿತ ಎಡಗೈ ನಾಯಕ ಕೆ.ಹೆಚ್.ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು.
ಸಂಪುಟ ದರ್ಜೆ ಸಚಿವರಾಗಿ ಎಂ.ಬಿ. ಪಾಟೀಲ್ ಅಧಿಕಾರ ಸ್ವೀಕಾರ
ಬಬಲೇಶ್ವರ ಕ್ಷೇತ್ರದ ಲಿಂಗಾಯತ ನಾಯಕರಾದ ಎಂ.ಬಿ. ಪಾಟೀಲ್‌ಗೂ ಕೂಡಾ ರಾಜ್ಯಪಾಲರು ಪ್ರತಿಜ್ಞಾವಿಧಿಯನ್ನ ಬೋಧಿಸಿದ್ರು.. ಎಂಬಿಪಿ ದೇವರ ಹೆಸರಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು.

ಮೌಢ್ಯಗಳ ವಿರುದ್ಧ ದಿಕ್ಕಿನಲ್ಲಿ ಸದಾ ಸಾಗುವ ನಾಯಕ. ಸತೀಶ್ ಜಾರಕಿಹೊಳಿ.. ಇದೀಗ ನಾಲ್ಕನೇ ಬಾರಿಗೆ ಸಚಿವರಾಗಿ ಪ್ರತಿಜ್ಞಾವಿಧಿಯನ್ನ ಪಠಿಸಿದ್ದಾರೆ. ವಿಶೇಷ ಅಂದ್ರೆ, ಶಾಸಕ ಸತೀಶ್ ಜಾರಕಿಹೊಳಿ, ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದಿಂದ ಮತ್ತೆ ಜಯಭೇರಿ ಭಾರಿಸಿದ್ದ ಕೆ.ಜೆ. ಜಾರ್ಜ್ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ರು. ಸಿದ್ದು ಆಪ್ತವಲಯದಲ್ಲಿ ಗುರುತಿಸಿಕೊಂಡಿರೋ ಜಾರ್ಜ್ ದೇವರ ಹೆಸರಲ್ಲಿ ಪ್ರತಿಜ್ಞಾವಿಧಿಯನ್ನ ಪಠಿಸಿ ಮತ್ತೊಮ್ಮೆ ಸಿದ್ದು ಸಂಪುಟವನ್ನ ಸೇರಿದ್ದಾರೆ.
ಇನ್ನೂ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ನೂತನ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಬೆಂಗಳೂರಿನ ಬಿಟಿಎಂ ಲೇಔಟ್ ಕ್ಷೇತ್ರದ ಸೋಲಿಲ್ಲದ ಸರದಾರ. ಸರಳ ವ್ಯಕ್ತಿತ್ವದ ರಾಮಲಿಂಗಾ ರೆಡ್ಡಿ ಕೂಡಾ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು.
ಇಂಗ್ಲಿಷ್‌ನಲ್ಲಿ ಜಮೀರ್ ಅಹ್ಮದ್ ಖಾನ್ ಓಥ್ ಟೇಕಿಂಗ್!
ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು.. ಎಲ್ಲಾ 7 ಸಚಿವರು ಹಾಗೂ ಸಿಎಂ, ಡಿಸಿಎಂ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ರೆ, ಜಮೀರ್ ಅಹ್ಮದ್ ಖಾನ್ ಮಾತ್ರ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಅಲ್ಲಾ ಮತ್ತು ತಾಯಿಯ ಹೆಸರಲ್ಲಿ ಜಮೀರ್ ಅಹ್ಮದ್ ಪ್ರಮಾಣ ವಚನ ಸ್ವೀಕರಿಸಿದ್ರು.
ಮೊದಲ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ
ಇನ್ನೂ ಮೊದಲ ಸಚಿವ ಸಂಪುಟದಲ್ಲಿ 8 ಮಂದಿ ಶಾಸಕರನ್ನ ಆಯ್ಕೆ ಮಾಡಿರೋ ಕಾಂಗ್ರೆಸ್ ಹೈಕಮಾಂಡ್, ಪ್ರಮುಖವಾಗಿ 6 ಸಮುದಾಯಗಳ ನಾಯಕರಿಗೆ ಮಣೆ ಹಾಕಿದೆ. ದಲಿತ ಸಮುದಾಯ ಕ್ಯಾಟಗರಿಯಲ್ಲಿ ಕೆ.ಹೆಚ್. ಮುನಿಯಪ್ಪ, ಡಾ.ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆಗೆ ಹೈ ಕಮಾಂಡ್ ಮಣೆ ಹಾಕಿದೆ.
ಲಿಂಗಾಯತ ಸಮುದಾಯದಿಂದ ಎಂ ಬಿ ಪಾಟೀಲ್, ಕ್ರಿಶ್ಚಿಯನ್ ಸಮುದಾಯದಿಂದ ಕೆ.ಜೆ. ಜಾರ್ಜ್, ನಾಯಕ ಸಮುದಾಯದಿಂದ ಸತೀಶ್ ಜಾರಕಿಹೊಳಿ, ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ, ಮುಸ್ಲಿಂ ಸಮುದಾಯದಿಂದ ಜಮೀರ್ ಅಹ್ಮದ್ ಖಾನ್‌ಗೆ ಮೊದಲ ಕ್ಯಾಬಿನೆಟ್‌ನಲ್ಲಿ ಸಚಿವ ಸ್ಥಾನ ಸಿಕ್ಕಿದೆ. ಈ ಮೂಲಕ ದಲಿತ ನಾಯಕರಿಗೆ 8 ಸ್ಥಾನದಲ್ಲಿ ಸಿಂಹಪಾಲು ಸಿಕ್ಕಿದೆ.
ಒಟ್ಟಾರೆ, ರಾಜ್ಯದಲ್ಲಿ ಇವತ್ತಿನಿಂದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇದೀಗ ಬಹುಮತ ನೀಡಿ ಬೆನ್ನುತಟ್ಟಿ ಕಳಿಸಿರೋ ಮತದಾರ. ಉತ್ತಮ ಆಡಳಿತದ ನಿರೀಕ್ಷೆಯಲ್ಲಿರೋದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ