ಎರಡು ಗಂಟೆ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ 8 ವರ್ಷದ ಬಾಲಕ
ಲಿಫ್ಟ್‌ನಲ್ಲಿ ಹೋಮ್‌ವರ್ಕ್ ಮಾಡಲು ಕೂತಿದ್ದೇಕೆ ಈ ಬಾಲಕ?
ದೊಡ್ಡ ಗಂಡಾಂತರದಿಂದ ಪಾರಾದ ಪುಟ್ಟ ಬಾಲಕನಿಗೆ ಶುಭಾಶಯ
ಫರಿದಾಬಾದ್: ಬಾಲಕನೋರ್ವ ಬರೋಬ್ಬರಿ 2 ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಘಟನೆ ಫರಿದಾಬಾದ್‌ನ ಓಮ್ಯಾಕ್ಸ್ ಹೈಟ್ಸ್ ಸೊಸೈಟಿಯಲ್ಲಿ ನಡೆದಿದೆ. ಎಂಟು ವರ್ಷದ ಬಾಲಕ 2 ಗಂಟೆಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ. ಆ ಕ್ಷಣದಲ್ಲಿ ಹುಡುಗ ಗಾಬರಿಯಾಗದೇ ಶಾಂತವಾಗಿ ಲಿಫ್ಟ್‌ನಲ್ಲಿ ಕುಳಿತುಕೊಂಡು ತನ್ನ ಹೋಮ್‌ವರ್ಕ್ ಮಾಡಿರೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಏನಿದು ಘಟನೆ..?
ಬಾಲಕ ಗಾರ್ವಿತ್ ಅವರ ಕುಟುಂಬ ಫರಿದಾಬಾದ್ ಅಪಾರ್ಟ್ಮೆಂಟ್ ಒಂದರ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದರು. ಬಾಲಕನು ಎಂದಿನಂತೆ ಟ್ಯೂಷನ್ಗಾಗಿ ನೆಲ ಮಹಡಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ಬಾಲಕ ತನ್ನ ತಾಯಿಯ ಜೊತೆ ಟ್ಯೂಷನ್ಗೆ ಹೋಗುತ್ತಿದ್ದನಂತೆ. ಆದರೆ ಅಂದು ತಾಯಿ ಹಾಗೂ ತಂದೆ ಬರದಿದ್ದ ಕಾರಣ ಎಂದಿನಂತೆ ಗಾರ್ವಿತ್ ಟ್ಯೂಷನ್ಗೆ ಹೋಗಬೇಕೆಂದು ಲಿಫ್ಟ್ ಹತ್ತಿದ್ದಾನೆ. ಆದರೆ ತಾಂತ್ರಿಕ ದೋಷದಿಂದ ಲಿಫ್ಟ್ ದಿಢೀರನೇ ನಿಂತುಕೊಂಡಿದೆ. ಕೆಲ ಹೊತ್ತು ಸುಮ್ಮನೆ ಕುಳಿತುಕೊಂಡ ಬಾಲಕ ಲಿಫ್ಟ್ನಲ್ಲಿದ್ದ ಹೆಲ್ಪ್ ಲೈನ್ಗೆ ಕಾಲ್ ಮಾಡಿದ್ದಾನೆ. ಲಿಫ್ಟ್ ಡೋರ್ ಬಳಿ ನಿಂತುಕೊಂಡು ಕೂಗಾಡಿದ್ದಾನೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಯಾರಿಂದಲೂ ನೆರವು ಸಿಗದಿದ್ದಾಗ ಗಾಬರಿಯಾಗದೇ ಬಾಲಕ ಟ್ಯೂಷನ್ನಲ್ಲಿ ಕೊಟ್ಟ ಹೋಮ್‌ವರ್ಕ್ ಮಾಡಲು ನಿರ್ಧರಿಸಿದ್ದಾನೆ.
ಒಂದು ಗಂಟೆಯ ನಂತರ, ಟ್ಯೂಷನ್ ಶಿಕ್ಷಕರು ಗಾರ್ವಿತ್ ತರಗತಿಗೆ ಬಂದಿಲ್ಲ ಎಂದು ಪೋಷಕರಿಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಆತಂಕಗೊಂಡ ಪೋಷಕರು ಮಗನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಕೆಲವು ನಿಮಿಷಗಳ ನಂತರ, ಸೆಕ್ಯುರಿಟಿ ಗಾರ್ಡ್ ಬಳಿ ಬಂದು ವಿಚಾರಿಸಿದ್ದಾರೆ. ಆಗ ಲಿಫ್ಟ್ ಸಂಜೆ 5 ಗಂಟೆಯಿಂದ ಕಾರ್ಯನಿರ್ವಹಿಸದಿರುವುದನ್ನು ಪೋಷಕರಿಗೆ ಸಿಬ್ಬಂದಿ ತಿಳಿಸಿದ್ದಾರೆ. ಬಳಿಕ ಅನುಮಾನಗೊಂಡ ಪೋಷಕರು ತಡ ಮಾಡದೇ ತಂತ್ರಜ್ಞರನ್ನು ಕರೆಸಿ ರಾತ್ರಿ 7 ಗಂಟೆ ಸುರಕ್ಷಿತವಾಗಿ ಲಿಫ್ಟ್‌ನಿಂದ ಬಾಲಕನನ್ನು ರಕ್ಷಿಸಲಾಯಿತು. ಇನ್ನು, ಲಿಫ್ಟ್‌ನಿಂದ ಹೊರಬಂದ ಬಳಿಕ ಬಾಲಕನ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ಗಾರ್ವಿತ್ ತನ್ನ ಗಮನವನ್ನು ಬೇರೆಡೆಗೆ ತಿರುಗಿಸುವ ಮೂಲಕ ತನ್ನ ಪುಸ್ತಕಗಳನ್ನು ತೆರೆದು ಹೋಮ್ವರ್ಕ ಮಾಡಲು ಪ್ರಾರಂಭಿಸಿದ್ದಾನೆ. ಸದ್ಯ ದೊಡ್ಡ ಗಂಡಾಂತರದಿಂದ ಪಾರಾಗಿ ಬಂದಿದ್ದಾನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ