newsfirstkannada.com

ಉದ್ರಿಕ್ತರ ಸಿಟ್ಟಿಗೆ ಮೇಣದಂತೆ ಕರಗುತ್ತಿದೆ ಫ್ರಾನ್ಸ್​; ಆ ಹುಡುಗನ ಕೊಂದಿದ್ದೇಕೆ? ಜನ ತಿರುಗಿ ಬಿದ್ದಿದ್ದೇಕೆ..?

Share :

02-07-2023

    17 ವರ್ಷದ ಬಾಲಕನ ಹತ್ಯೆಗೆ ಹೊತ್ತಿ ಉರಿಯುತ್ತಿದೆ ಇಡೀ ದೇಶ!

    ಪ್ಯಾರಿಸ್‌ನ ಹಲವು ಮನೆ, ಅಂಗಡಿ, ಬ್ಯಾಂಕು, ಲೈಬ್ರರಿ ಎಲ್ಲವೂ ಭಸ್ಮ

    ಆಕ್ರೋಶ, ಉದ್ರಿಕ್ತರ ಸಿಟ್ಟಿಗೆ ನರಕದಂತಾದ ಭೂಲೋಕದ ಸ್ವರ್ಗ

ಸಮುದಾಯದ ಕಿಚ್ಚಿಗೆ ಕಂಗಾಲಾಗಿದ್ದ ಮಣಿಪುರದ ಪರಿಸ್ಥಿತಿಯನ್ನ ಕಣ್ಣಾರೆ ಕಂಡಿದ್ದೇವೆ. ಸದ್ಯ ಇಂತಹದ್ದೇ ಪರಿಸ್ಥಿತಿ ಭೂ ಲೋಕದ ಸ್ವರ್ಗದಂತಿದ್ದ ಫ್ರಾನ್ಸ್​ಗೂ ಬಂದೊದಗಿದೆ. ಪೊಲೀಸರು ಮಾಡಿದ ಅದೊಂದು ಎಡವಟ್ಟಿಗೆ ಫ್ರಾನ್ಸ್​ನ​ ನಾಲ್ಕು ದಿಕ್ಕುಗಳಲ್ಲಿ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಬಡವನ ಸಿಟ್ಟು ದವಡೆಗೆ ಮೂಲ ಅನ್ನೋ ಮಾತಿದೆ. ಈ ಪ್ರಶ್ನೆಗೆ ಈಗ ಉತ್ತರವಾಗಿ ಫ್ರಾನ್ಸ್​ ರಾಷ್ಟ್ರ ತತ್ತರವಾಗ್ತಿದೆ. ಪೊಲೀಸರು ಮಾಡಿದ ಅದೊಂದು ತಪ್ಪಿಗೆ ಸರ್ಕಾರ ತಲೆದಂಡ ನೀಡುವ ಪರಿಸ್ಥಿತಿ ಎದುರಾಗಿದೆ. ಸಮುದಾಯದ ಕಿಚ್ಚಿಗೆ ಪ್ಯಾರಿಸ್​ ನಗರ ಹೊತ್ತಿ ಉರಿಯುತ್ತಿದೆ. ಅಸಮಾಧಾನ, ಆಕ್ರೋಶ, ಹಿಂಸಾಚಾರ. ಎತ್ತ ನೋಡಿದರೂ ಕಿಡಿಗೇಡಿಗಳ ಅಟ್ಟಹಾಸ. ಇದು ಫ್ರಾನ್ಸ್​ ರಾಷ್ಟ್ರದ ಸದ್ಯದ ಪರಿಸ್ಥಿತಿ. ಅಷ್ಟಕ್ಕೂ ಫ್ರಾನ್ಸ್​ಗೆ ಇಂತದೊಂದು ದುಸ್ಥಿತಿ ಬಂದಿರೋದಕ್ಕೆ ಕಾರಣ ಅದೊಂದು ಬಾಲಕನ ಹತ್ಯೆ.

ಟ್ರಾಫಿಕ್ ತಪಾಸಣೆ ವೇಳೆ ಕಾರು ಚಲಾಯಿಸುತ್ತಿದ್ದ ಯುವಕನ ಹತ್ಯೆ

ಫ್ರಾನ್ಸ್‌ನ ಪಶ್ಚಿಮ ಪ್ಯಾರಿಸ್‌ನ ನಾಂಟೇರ್‌ನಲ್ಲಿ ಟ್ರಾಫಿಕ್‌ ತಪಾಸಣೆ ವೇಳೆ 17 ವರ್ಷದ ಬಾಲಕನನ್ನ ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ರು. ಈ ಹತ್ಯೆಯನ್ನ ಖಂಡಿಸಿ ಪ್ರತಿಭಟನೆಗಿಳಿದ ಮುಸ್ಲಿಂ ಸಮುದಾಯದ ಜನರು ಇಡೀ ದೇಶವನ್ನೇ ಅಲ್ಲೋಲ-ಕಲ್ಲೋಲ ಮಾಡ್ತಿದ್ದಾರೆ. ಹಿಜಾಬ್ ಧರಿಸಿದ ಮಹಿಳೆಯರೂ ಸಹ ಪೊಲೀಸರ ಮೇಲೆ ದಾಳಿ ಮಾಡಿ ಕಂಡ ಕಂಡಲ್ಲಿ ದಾಂಧಲೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಫ್ರಾನ್ಸ್‌ನಲ್ಲಿ ಭುಗಿಲೆದ್ದಿರೋ ಈ ಜನಾಕ್ರೋಶ ಇನ್ನೂ ತಣ್ಣಗಾಗದೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಅಲ್ಜೇರಿಯನ್‌ ಮೂಲದ 17 ವರ್ಷದ ಬಾಲಕ ನಾಹೇಲ್‌ ಎಂಬಾತ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ್ದ. ಮಂಗಳವಾರ ಈತ ಕಾರು ಚಲಾಯಿಸುವಾಗ ನಿಯಮ ಉಲ್ಲಂಘಿಸಿದ್ದಕ್ಕೆ ತಡೆದಿದ್ದ ಪೊಲೀಸರು ಆತನನ್ನ ಕಾರಿನಿಂದ ಹೊರಕ್ಕೆ ಇಳಿಸಲು ಪ್ರಯತ್ನಿಸಿದ್ದರು. ಅಲ್ಲದೇ ಫ್ರಾನ್ಸ್‌ನಲ್ಲಿ ವಾಹನ ಚಲಾಯಿಸಲು ಲೈಸೆನ್ಸ್​ ಹೊಂದುವಷ್ಟು ನಾಹೇಲ್​ಗೆ ವಯಸ್ಸು ಸಹ ಆಗಿರಲಿಲ್ಲ. ಹೀಗಾಗಿ ಗನ್​ ತೋರಿಸಿ ಕಾರನ್ನ ನಿಲ್ಲಿಸುವಂತೆ ನಾಹೇಲ್‌ಗೆ ಪೊಲೀಸರು ಎಚ್ಚರಿಕೆ ಸಹ ನೀಡಿದ್ರು. ಆದರೆ ಆತ ಮಾತ್ರ ಕಾರನ್ನ ನಿಲ್ಲಿಸಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ರು. ಗುಂಡು ನಾಹೇಲ್‌ನ ಕೈ ಹಾಗೂ ಎದೆಗೆ ಭಾಗಕ್ಕೆ ತಾಗಿ ಆತ ಸಾವನ್ನಪ್ಪಿದ್ದ.

ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ.. ಪೊಲೀಸರ ಮೇಲೂ ದಾಳಿ

ಈ ಸಾವಿನ ಬಳಿಕ ಫ್ರಾನ್ಸ್‌ನ ಪ್ಯಾರಿಸ್‌ ನಗರದಲ್ಲಿ ಮುಸ್ಲಿಂ ಸಮುದಾಯದ ಉದ್ರಿಕ್ತರು ಬೀದಿ ಬೀದಿಗಳಲ್ಲಿ ಪೊಲೀಸ್‌ ಬ್ಯಾರಿಕೇಡ್‌ಗಳನ್ನ ಮುರಿದು ಹಾಕಿ, ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಶಾಂತಿ ಮರುಸ್ಥಾಪಿಸಲು ಅಧ್ಯಕ್ಷ ಎಮಾನ್ಯುಯಲ್‌ ಮ್ಯಾಕ್ರಾನ್‌ ಸರಕಾರ ಹರಸಾಹಸ ನಡೆಸುತ್ತಿದೆ. ಮುಂದಿನ ಕೆಲವು ಗಂಟೆಗಳು ನಿರ್ಣಾಯಕ ಎಂದಿರುವ ಫ್ರಾನ್ಸ್ ಸರ್ಕಾರ, ಶೀಘ್ರವೇ ಗಲಭೆಯನ್ನು ಹತ್ತಿಕ್ಕಲು ಸುಮಾರು 45 ಸಾವಿರ ಪೊಲೀಸರನ್ನು ನಿಯೋಜಿಸಿದೆ.

2000ಕ್ಕೂ ಹೆಚ್ಚು ಕಾರುಗಳು ಭಸ್ಮ.. 800 ಜನರ ಬಂಧನ

ಪ್ರತಿಭಟನಾಕಾರರ ಆಕ್ರೋಶಕ್ಕೆ 2000ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಆಹುತಿಯಾಗಿವೆ. 500 ಕಟ್ಟಡಗಳು ಧ್ವಂಸಗೊಂಡಿವೆ. ಪೊಲೀಸರು 800ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದರೂ ಪರಿಸ್ಥಿತಿ ಹತೋಟಿಗೆ ಬಂದಿಲ್ಲ. ಇದೇ ವೇಳೆ ಸಿಕ್ಕಿದೇ ಚಾನ್ಸ್​ ಅಂತ ಸಿಕ್ಕ ಸಿಕ್ಕ ಅಂಗಡಿಗಳಿಗೆ ಲಗ್ಗೆ ಇಡ್ತಿರೋ ಕಿಡಿಗೇಡಿಗಳು ಕೇಗೆ ಸಿಕ್ಕ ವಸ್ತುಗಳನ್ನ ಕದ್ದೊಯ್ತಿದ್ದಾರೆ. ಇನ್ನೂ ಯುವಕನ ಹತ್ಯೆ ಮಾಡಿದ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ತನಿಖೆಗೆ ಸರ್ಕಾರ ಆದೇಶಿಸಿದೆ.

ಫ್ರಾನ್ಸ್​ನಲ್ಲೂ ಭಾರತದ ಬುಲ್ಡೋಜರ್​ ಬಾಬ ಫೇಮಸ್​!

ಗಲಭೆಗಳು ನಡೆದಾಗ ಬುಲ್ಡೋಜರ್​ ಮೂಲಕ ಘರ್ಜಿಸೋ ಉತ್ತಪ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್​ ಫ್ರಾನ್ಸ್​ನಲ್ಲೂ ಫುಲ್​ ಫೇಮಸ್​. ಯಾಕಂದ್ರೆ ಫ್ರಾನ್ಸ್​ ಗಲಭೆಯನ್ನ ನಿಯಂತ್ರಿಸಲು ಭಾರತವು ಯೋಗಿ ಅದಿತ್ಯನಾಥ್​ ಅವರನ್ನೇ ಕಳುಹಿಸಬೇಕಂತೆ. ಹೀಗಂತ ನಾವ್​ ಹೇಳ್ತಿಲ್ಲ ಫ್ರಾನ್ಸ್​ನ ಜಾನ್​ ಕ್ಯಾಮ್​ ಎಂಬ ಪ್ರೊಪಸರ್​ ಒಬ್ರು ಈ ರೀತಿ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಯೋಗಿ ಅದಿತ್ಯನಾಥ್​ ಕಚೇರಿಯಿಂದ ರೀ ಟ್ವೀಟ್​ ಸಹ ಮಾಡಲಾಗಿದೆ.

ಯೋಗಿಯೇ ಬರಬೇಕು!

ಅಲ್ಲಿನ ಗಲಭೆ ಪರಿಸ್ಥಿತಿಯನ್ನು ನಿಯಂತ್ರಿಸಲು ಭಾರತವು ಯೋಗಿ ಅದಿತ್ಯನಾಥ್​ ಅವರನ್ನೇ ಫ್ರಾನ್ಸ್‌ಗೆ ಕಳುಹಿಸಬೇಕು.. ನನ್ನ ದೇವರೇ, ಅವರು ಫ್ರಾನ್ಸ್​ಗೆ ಬಂದ್ರೆ 24 ಗಂಟೆಗಳ ಒಳಗೆ ಈ ಗಲಭೆಯನ್ನ ನಿಯಂತ್ರಿಸುತ್ತಾರೆ.

– ಪ್ರೊ. ಜಾನ್​ ಕ್ಯಾಮ್​

ಯೋಗಿ ಮಾದರಿ!

ಜಗತ್ತಿನ ಯಾವುದೇ ಭಾಗದಲ್ಲಿ ಉಗ್ರವಾದವು ಗಲಭೆಗಳು, ಅವ್ಯವಸ್ಥೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ಉಂಟಾದಾಗ, ಜಗತ್ತು ಸಾಂತ್ವನವನ್ನು ಹುಡುಕುತ್ತದೆ.. ಮತ್ತು ಉತ್ತರ ಪ್ರದೇಶದಲ್ಲಿ ಮಹಾರಾಜ್ ಜಿ ಸ್ಥಾಪಿಸಿದ ಕಾನೂನು ಮತ್ತು ಸುವ್ಯವಸ್ಥೆಯ ಪರಿವರ್ತಕ “ಯೋಗಿ ಮಾದರಿ” ಗಾಗಿ ಹಾತೊರೆಯುತ್ತದೆ.

– ಸಿಎಂ ಯೋಗಿ ಅದಿತ್ಯನಾಥ್​ ಕಚೇರಿ

ಬಾಲನೋರ್ವನ ಹತ್ಯೆ ಇಡೀ ಫ್ರಾನ್ಸ್​ ದೇಶವನ್ನ ಹೊತ್ತಿ ಉರಿಯುವಂತೆ ಮಾಡಿದೆ. ಸಮುದಾಯದ ಕಿಚ್ಚಿಗೆ ಇಡೀ ದೇಶವೇ ಬೆಂಕಿಯ ಉಂಡೆಯಂತಾಗಿದ್ದು ಸರ್ಕಾರ ಕಂಗಾಲಾಗಿ ಹೋಗಿದೆ.. ಇದೇ ಪರಿಸ್ಥಿತಿ ಮುಂದುವರೆದರೆ ಫ್ರಾನ್ಸ್​ನಲ್ಲಿ ಎಮರ್ಜೆನ್ಸಿ ಘೋಷಿಸುವ ಸಾಧ್ಯತೆಗಳು ಸಹ ಇದೆ ಅಂತ ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ರಿಕ್ತರ ಸಿಟ್ಟಿಗೆ ಮೇಣದಂತೆ ಕರಗುತ್ತಿದೆ ಫ್ರಾನ್ಸ್​; ಆ ಹುಡುಗನ ಕೊಂದಿದ್ದೇಕೆ? ಜನ ತಿರುಗಿ ಬಿದ್ದಿದ್ದೇಕೆ..?

https://newsfirstlive.com/wp-content/uploads/2023/07/frans.jpg

Load More