newsfirstkannada.com

ಅಂದು 300 ರೂನಿಂದ ತರಕಾರಿ ವ್ಯಾಪಾರ ಶುರು ಮಾಡಿದ ಇವ್ರು.. ಇಂದು 800 ಕೋಟಿ ಮಾಲೀಕರು!

Share :

11-06-2023

  ಎತ್ತಿನಗಾಡಿಯಲ್ಲಿ ಶುರುವಾದ ವ್ಯಾಪಾರ ಮಾಲ್‌ವರೆಗೆ

  300 ರೂಪಾಯಿ ಖರ್ಚು ಮಾಡಿ 800 ಕೋಟಿ ಆದಾಯ

  'ಕೋವೈ ಪಜಮುದಿರ್' ಕೋಟಿ, ಕೋಟಿ ಗಳಿಸಿದ್ದು ಹೇಗೆ?

ಚೆನ್ನೈ: ಯಾರೇ ಆಗಲಿ ಸಾಧನೆ ಮಾಡೋದು ಸುಲಭವಲ್ಲ. ವ್ಯಾಪಾರ, ವ್ಯವಹಾರದಲ್ಲಿ ಲಾಭಗಳಿಸೋದು ಸಲೀಸಲ್ಲ. ಆದರೆ ಎಷ್ಟೇ ಕಷ್ಟ ಬಂದ್ರೂ ನಿರಂತರ ಪರಿಶ್ರಮದಿಂದ ಕಠಿಣವಾದ ಹೆಜ್ಜೆಗಳನ್ನು ಇಟ್ಟು ಧೈರ್ಯದಿಂದ ಮುನ್ನುಗ್ಗಿದ್ರೆ ಸಕ್ಸಸ್ ಸಿಕ್ಕೇ ಸಿಗುತ್ತೆ. ಈ ಮಾತಿಗೆ ತಾಜಾ ಉದಾಹರಣೆ ತಮಿಳುನಾಡಿನ ಆರ್‌. ನಟರಾಜನ್ ಫ್ಯಾಮಿಲಿ.

ತಮಿಳುನಾಡು ಕೊಯಮತ್ತೂರಿನ ಆರ್‌. ನಟರಾಜನ್ ಸಕ್ಸಸ್‌ ಸ್ಟೋರಿ ಕೇಳಿದ್ರೆ ನಿಜಕ್ಕೂ ಮೈ ಜುಮ್ ಅನ್ನುತ್ತೆ. 1965ರಲ್ಲಿ ನಟರಾಜನ್ ಕುಟುಂಬ ಬಹಳಷ್ಟು ಕಷ್ಟದಲ್ಲಿರುತ್ತೆ. ಈ ಕಷ್ಟ ನೋಡಲಾಗದ ನಟರಾಜನ್ ಓದುತ್ತಿದ್ದ ಶಾಲೆಯನ್ನೇ ಬಿಟ್ಟು ತನ್ನ ಅಣ್ಣ ಎತ್ತಿನಗಾಡಿಯಲ್ಲಿ ಮಾರುತ್ತಿದ್ದ ಹಣ್ಣಿನ ವ್ಯಾಪಾರಕ್ಕೆ ಕೈ ಜೋಡಿಸುತ್ತಾರೆ. ತಂದೆಯನ್ನು ಕಳೆದುಕೊಂಡಿದ್ದ ನಟರಾಜನ್ ಕುಟುಂಬಕ್ಕೆ ಅಣ್ಣನೇ ಆಸರೆಯಾಗಿದ್ದರು. ಕುಟುಂಬ ನಿರ್ವಹಣೆಯ ಜವಾಬ್ದಾರಿ ಈ ನಟರಾಜನ್ ಸಹೋದರರ ಮೇಲೆ ಬಿದ್ದಿದೆ.

ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ನಟರಾಜನ್ ಸಹೋದರರು ಕೊನೆಗೆ ಜಸ್ಟ್ 300 ರೂಪಾಯಿ ಖರ್ಚು ಮಾಡಿ ಪಜಮುದಿರ್ ನಿಲಯಂ ಅನ್ನೋ ಅಂಗಡಿ ತೆರೆಯುತ್ತಾರೆ. ಈ ಅಂಗಡಿಯಲ್ಲಿ ಜನರಿಗೆ ನ್ಯಾಯಯುತ ಬೆಲೆಯಲ್ಲಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಾರೆ. ನಟರಾಜನ್ ಸಹೋದರರ ನಿಖರ ಬೆಲೆ, ಪ್ರಾಮಾಣಿಕತೆ ಹಾಗೂ ವ್ಯಾಪಾರ ಗ್ರಾಹಕರಿಗೆ ಬಹಳ ಇಷ್ಟವಾಗುತ್ತೆ. ಹೆಚ್ಚು ಗ್ರಾಹಕರು ನಟರಾಜನ್ ಅವರ ಪಜಮುದಿರ್ ನಿಲಯಂಗೆ ಬಂದು ಕೊಳ್ಳಲು ಆರಂಭಿಸುತ್ತಾರೆ. ಇಲ್ಲಿಂದಾನೇ ನೋಡಿ ನಟರಾಜನ್ ಅದೃಷ್ಟ ಬದಲಾಗಿದ್ದು.

ನಟರಾಜನ್ ಸಹೋದರರು ಎತ್ತಿನಗಾಡಿಯಿಂದ ಶುರು ಮಾಡಿದ ವ್ಯಾಪಾರ ಇಂದು ಬರೋಬ್ಬರಿ 800 ಕೋಟಿ ರೂಪಾಯಿಗೆ ತಲುಪಿದೆ. ಅದರಲ್ಲಿ ಶೇಕಡಾ 30 ರಷ್ಟು ಆದಾಯವನ್ನು ಕಂಪನಿಯು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಇದರ ಹೊರತಾಗಿಯೂ ಸದ್ಯ ಕೋವೈ ಪಜಮುದಿರ್ ನಿಲಯಂ 400 ಕೋಟಿ ರೂಪಾಯಿ ಆದಾಯದಲ್ಲಿದೆ. ಈ ಸಕ್ಸಸ್ ಹಿಂದೆ ನಟರಾಜನ್ ಇಡೀ ಕುಟುಂಬದ ಶ್ರಮವಿದೆ. ನಟರಾಜನ್ ಮಗ ಸೆಂಥಿಲ್ ನಟರಾಜನ್ ಸದ್ಯ ಈ ಕಂಪನಿಯನ್ನು ಮುನ್ನೆಡೆಸುತ್ತಿದ್ದಾರೆ.

2012ರಲ್ಲಿ ಕೋವೈ ಪಜಮುದಿರ್ ನಿಲಯಂ ಅತ್ಯಾಧಿಕ ಲಾಭವನ್ನು ಗಳಿಸುತ್ತೆ. ಕಂಪನಿಯ ಆದಾಯ ಶೇಕಡಾ 60ರಷ್ಟು ಹೆಚ್ಚಾಗಿದ್ದು, ನಟರಾಜನ್ ಕುಟುಂಬಸ್ಥರು ತಮ್ಮ ವ್ಯಾಪಾರ, ವ್ಯವಹಾರವನ್ನು ಮತ್ತಷ್ಟು ವಿಸ್ತರಿಸೋ ನಿರ್ಧಾರ ಕೈಗೊಳ್ಳುತ್ತಾರೆ. ಸದ್ಯ ಕೋವೈ ಪಜಮುದಿರ್ ನಿಲಯಂ 2 ಅತಿ ದೊಡ್ಡ ಮಳಿಗೆಗಳನ್ನು ಹೊಂದಿದೆ. ಕೊಯಮತ್ತೂರ್‌ನಲ್ಲಿ 20 ಸಾವಿರ ಚದರಡಿಯ ಫಾರ್ಮ್‌ ಮತ್ತು ಚೆನ್ನೈ ಹೊರವಲಯದಲ್ಲಿ 1.5 ಲಕ್ಷ ಚದರಡಿಯ ಮಾರಾಟ ಮಳಿಗೆಯನ್ನು ಸ್ಥಾಪಿಸಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಂದು 300 ರೂನಿಂದ ತರಕಾರಿ ವ್ಯಾಪಾರ ಶುರು ಮಾಡಿದ ಇವ್ರು.. ಇಂದು 800 ಕೋಟಿ ಮಾಲೀಕರು!

https://newsfirstlive.com/wp-content/uploads/2023/06/KPN-Store-1.jpg

Load More