82 ವರ್ಷದ ವೃದ್ಧೆಗೆ ತನ್ನ ಪತಿಯ ಮೇಲೆ ಅದೆಂಥಾ ಪ್ರೀತಿ
ಗಂಡ ಸತ್ತು 23 ವರ್ಷ ಕಳೆದರು ಬದುಕಿದ್ದಾನೆಂಬ ನಂಬಿಕೆಯಲ್ಲಿ ವೃದ್ಧೆ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವೃದ್ಧೆಯ ವಿಡಿಯೋ
ಗೆಳೆಯ-ಗೆಳತಿ, ಪತಿ-ಪತ್ನಿ ಅಥವಾ ಆಪ್ತರು ಸಾವನ್ನಪ್ಪಿದಾಗ ಆ ನೋವು ಮಾಸಲು ಸಮಯ ಹಿಡಿಯುತ್ತದೆ. ಕೆಲವರು ಅದೇ ಗುಂಗಿನಲ್ಲಿ ವರ್ಷಗಳನ್ನೇ ಕಳೆಯುತ್ತಾರೆ. ಇನ್ನು ಕೆಲವರು ಆ ನೋವಿನ ಶಕ್ತಿಯನ್ನು ತಾಳಲಾರದೆ ತಾವು ಕೂಡ ಸಾವಿನ ಮೊರೆ ಹೋದ ಘಟನೆಗಳು ಅದೆಷ್ಟೋ ನಡೆದಿದೆ. ಆದರೆ ಇಲ್ಲೊಬ್ಬಳು ವೃದ್ಧೆ ತನ್ನ ಪತಿ ಸತ್ತು 23 ವರ್ಷ ಕಳೆದರು ಅದೇ ಗುಂಗಿನಲ್ಲಿ ಬದುಕುತ್ತಿದ್ದಾಳೆ ಎಂದರೆ ನಂಬುತ್ತೀರಾ. ಮಾತ್ರವಲ್ಲದೆ ಸತ್ತ ಪತಿಯನ್ನ ಬದುಕಿದ್ದಾನೆ ಎಂದು ನಂಬಿಕೊಂಡು ಆಹಾರವನ್ನು ಉಣಬಡಿಸಿ ಆಕೆಯೂ ಸೇವಿಸುತ್ತಿದ್ದಾಳೆ. ಅಂದಹಾಗೆಯೇ ಈ ಘಟನೆ ಎಲ್ಲಿಯದ್ದು ಗೊತ್ತಾ?.
ಚೀನಾದ ಚಾಂಗ್ಕಿಂಗ್ನಲ್ಲಿ ಬೆಳಕಿಗೆ ಬಂದಿರುವ ಘಟನೆ ಇದಾಗಿದೆ. ವೃದ್ಧೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾವನ್ನಪ್ಪಿದ ಪತಿ ತನ್ನೊಂದಿಗೆ ಇದ್ದಾರೆ ಎಂದುಕೊಂಡೇ ಜೀವನ ನಡೆಸುತ್ತಿದ್ದಾಳೆ ವೃದ್ಧೆ.
ಅಷ್ಟು ಮಾತ್ರವಲ್ಲ, ಸತ್ತ ಪತಿಯ ಫೋಟೋ ಮುಂದೆ ಆಹಾರವನ್ನು ಇಟ್ಟುಕೊಂಡು ತಾನು ಇನ್ನೊಂದು ಪ್ಲೇಟ್ನಲ್ಲಿ ಆಹಾರ ಸೇವಿಸುವ ಚಿತ್ರಣ ವೈರಲ್ ಆಗಿದೆ. ಬಳಿಕ ಆಕೆ ಪತಿಯ ಫೋಟೋದ ಮುಂದೆ ಇರುವ ಆಹಾರವನ್ನು ತೆಗೆಯುತ್ತಾಳೆ.
ಅಂದಹಾಗೆಯೇ ವೃದ್ಧೆ ಬರೋಬ್ಬರಿ 23 ವರ್ಷದಿಂದ ಹೀಗೆ ಮಾಡುತ್ತಾ ಬಂದಿದ್ದಾಳೆ. ಸದ್ಯ ವೃದ್ಧೆಗೆ 82 ವರ್ಷ ವಯಸ್ಸಾಗಿದೆ. ಇನ್ನು ವೃದ್ಧೆಯ ವಿಡಿಯೋವನ್ನು 20 ಲಕ್ಷಕ್ಕಿಂತ ಅಧಿಕ ಜನರು ವೀಕ್ಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ