newsfirstkannada.com

ಕಾಂಚನಜುಂಗಾ ಎಕ್ಸ್‌ಪ್ರೆಸ್​​ಗೆ ಭಯಾನಕವಾಗಿ ಡಿಕ್ಕಿಯಾದ ಗೂಡ್ಸ್​ ಟ್ರೈನ್.. ಸಾವಿನ ಸಂಖ್ಯೆ ಮತ್ತೆ ಹೆಚ್ಚಳ!

Share :

Published June 17, 2024 at 5:40pm

    ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ರೈಲ್ವೆ ಇಲಾಖೆ ಸಿಬ್ಬಂದಿ

    ರೈಲುಗಳ ಆ್ಯಕ್ಸಿಡೆಂಟ್​ನಲ್ಲಿ ಮತ್ತಷ್ಟು ಸಾವು, ನೋವು ಹೆಚ್ಚಳ

    ಡಿಕ್ಕಿಯಾದ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬೋಗಿಗಳು

ಕೋಲ್ಕತ್ತಾ: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ರಂಗಪಾಣಿ ನಿಲ್ದಾಣದ ಬಳಿ ನಡೆದಿದ್ದ ಈ ದುರ್ಘಟನೆಯಲ್ಲಿ ಮೂವರು ರೈಲ್ವೆ ಸಿಬ್ಬಂದಿ ಸೇರಿದಂತೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮಾನವೀಯತೆ ಮೆರೆದ ಡಾ.CN ಮಂಜುನಾಥ್.. ನೂತನ ಸಂಸದರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಡಾರ್ಜಿಲಿಂಗ್​ನ ರಂಗಪಾಣಿ ನಿಲ್ದಾಣದ ಬಳಿ ಇಂದು ಬೆಳಗ್ಗೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ವೇಗವಾಗಿ ಬಂದು ಡಿಕ್ಕಿಯಾಗಿತ್ತು. ಘಟನೆಯಲ್ಲಿ 5 ಜನರು ಸಾವನ್ನಪ್ಪಿದ್ದು 25 ಮಂದಿ ಗಾಯಗೊಂಡಿದ್ದರು ಎಂದು ಬೆಳಗ್ಗೆ ಹೇಳಲಾಗಿತ್ತು. ಆದರೆ ಇದೀಗ ಸಾವಿನ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳವಾಗಿದ್ದು ಘಟನೆಯಲ್ಲಿ ಒಟ್ಟು 9 ಜನರು ಅಸುನೀಗಿದ್ದು 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಭೀಕರ ರೈಲು ದುರಂತದಲ್ಲಿ ಉಸಿರು ಚೆಲ್ಲಿದ 5 ಪ್ರಯಾಣಿಕರು.. 25 ಮಂದಿ ಗಂಭೀರ; ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ

ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಸ್ಸಾಂನ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಪ್ರಯಾಣಿಸುತ್ತಿದ್ದಾಗ ಈ ಭಯಾನಕ ಅಪಘಾತ ಸಂಭವಿಸಿದೆ. ಆಕ್ಸಿಡೆಂಟ್ ವೇಳೆ ರೈಲು ಬೋಗಿಗಳು ಹಳಿ ತಪ್ಪಿದ್ದು ಹೇಗೆಂದರೆ ಹಾಗೇ ಬಿದ್ದಿವೆ. ಅಪಘಾತದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ 3 ಬೋಗಿಗಳು ಹಳಿತಪ್ಪಿವೆ. ರೈಲಿನ ಹಿಂಭಾಗದ ಪಾರ್ಸೆಲ್ ಕೋಚ್ ಕೂಡ ಹಾನಿಯಾಗಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಸೂಪರ್​​ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?

ಪಶ್ಚಿಮ ಬಂಗಾಳದಿಂದ ಈಶಾನ್ಯ ರಾಜ್ಯಗಳ ನಗರಗಳಾದ ಸಿಲ್ಚಾರ್ ಮತ್ತು ಅಗರ್ತಲಾಕ್ಕೆ ಕಾಂಚನಜುಂಗಾ ಎಕ್ಸ್‌ಪ್ರೆಸ್ ನಿತ್ಯ ಪ್ರಯಾಣಿಸುತ್ತದೆ. ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸಲು ಇದೇ ಟ್ರೈನ್ ಅನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಸಿಗ್ನಲ್ ಅನ್ನು ಸರಿಯಾಗಿ ಗಮಿನಿಸದ ಕಾರಣ 2 ಟ್ರೈನ್ ಮಧ್ಯೆ ಡಿಕ್ಕಿಯಾಗಿದೆ. ಈ ದುರ್ಘಟನೆ ಸಂಬಂಧ ಎಲ್ಲವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೆಹಲಿಯ ರೈಲ್ವೆ ವಾರ್ ರೂಮ್‌ನಿಂದಲೇ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಚನಜುಂಗಾ ಎಕ್ಸ್‌ಪ್ರೆಸ್​​ಗೆ ಭಯಾನಕವಾಗಿ ಡಿಕ್ಕಿಯಾದ ಗೂಡ್ಸ್​ ಟ್ರೈನ್.. ಸಾವಿನ ಸಂಖ್ಯೆ ಮತ್ತೆ ಹೆಚ್ಚಳ!

https://newsfirstlive.com/wp-content/uploads/2024/06/WB_TRAIN_ACCIDENT.jpg

Load More