/newsfirstlive-kannada/media/post_attachments/wp-content/uploads/2024/08/DJ-party.jpg)
ಹೈಟೆನ್ಷನ್​ ವಿದ್ಯುತ್​ ತಂತಿಗೆ ಡಿಜೆ ವಾಹನ ಸಿಲುಕಿ ಸುಮಾರು 9 ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಹಲವಾರು ಮಂದಿ ವಿದ್ಯುತ್​ ಸ್ಪರ್ಶದಿಂದ ಗಾಯಗೊಂಡಿದ್ದಾರೆ.
ಬಿಹಾರದ ಸುಲ್ತಾನ್​​​ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ವೇಳೆ ಡಿಜೆ ವಾಹನ ಸಂಚರಿಸುವಾಗ ಹೈಟೆನ್ಷನ್​ ವೈರ್​ಗೆ ಸಿಲುಕಿಕೊಂಡಿದೆ. ಪರಿಣಾಮ ಸಾವು-ನೋವು ಸಂಭವಿಸಿದೆ.
ಇದನ್ನೂ ಓದಿ: ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಯೊಳಕ್ಕೆ ಕೊಂಡೊಯ್ದ ಚಾಲಕ! ಈ ಘಟನೆ ನಡೆದದ್ದು ಬೇರೆಲ್ಲೂ ಅಲ್ಲ..
ಡಿಜೆ ವಾಹನವು ತುಂಬಾ ಎತ್ತರವಾಗಿತ್ತು. ರಾತ್ರಿ ವೇಳೆ ಹೈಟೆನ್ಷನ್​ ವೈರ್​ ಅಡ್ಡಲಾಗಿ ಹಾದು ಹೋಗಿದ್ದು ಕಾಣಿಸಿಲ್ಲ. ವೈರ್​ ತಾಗಿದೊಡನೆ 9 ಜನರು ಸಾವನ್ನಪ್ಪಿದ್ದಾರೆ.
ಇನ್ನು ಗಾಯಗೊಂಡವರನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us