OMG: ಅದೊಂದು ತಪ್ಪಿಗೆ ಒಂದು ವರ್ಷದ ಹಿಂದೆ ಜೈಲು ಸೇರಿದ್ದ 9 ಮೇಕೆಗಳು ರಿಲೀಸ್​!

author-image
AS Harshith
Updated On
OMG: ಅದೊಂದು ತಪ್ಪಿಗೆ ಒಂದು ವರ್ಷದ ಹಿಂದೆ ಜೈಲು ಸೇರಿದ್ದ 9 ಮೇಕೆಗಳು ರಿಲೀಸ್​!
Advertisment
  • ಶುಕ್ರವಾರದಂದು ಜೈಲಿನಿಂದ ರಿಲೀಸ್ ಆದ 9 ಮೇಕೆಗಳು
  • ಡಿಸೆಂಬರ್​ 6, 2022ರಲ್ಲಿ ಮೇಕೆಗಳು ಜೈಲು ಪಾಲಾಗಿದ್ದವು
  • ಅಷ್ಟಕ್ಕೂ ಮೇಕೆಗಳು ಮಾಡಿದ ತಪ್ಪೇನು ಗೊತ್ತಾ?

ತಪ್ಪು ಯಾರೇ ಮಾಡಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ. ಹಾಗಂತ ಪ್ರಾಣಿಗಳು ತಪ್ಪು ಮಾಡಿದರೆ ಶಿಕ್ಷೆ ಯಾರಿಗೆ?. ಇಲ್ಲೊಂದು ಪ್ರಕರಣ ಮಾತ್ರ ವಿಚಿತ್ರವಾಗಿದ್ದು ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಒಂಭತ್ತು ಮೇಕೆಗಳು ರಿಲೀಸ್​ ಆಗಿವೆ. ಅಷ್ಟಕ್ಕೂ ಮೇಕೆಗಳು ಮಾಡಿದ ತಪ್ಪೇನು ಗೊತ್ತಾ?

ಮೇಕೆಗಳು ಸ್ಥಳೀಯ ಸ್ಮಶಾನದಲ್ಲಿ ಮೇಯಲು ಹೋಗಿದ್ದೇ ತಪ್ಪು. ಇದೇ ಕಾರಣದಕ್ಕೆ ಸುಮಾರು 1 ವರ್ಷದ ಹಿಂದೆ 9 ಮೇಕೆಗಳು ಜೈಲು ಸೇರಿದ್ದವು. ಆದರೆ ಶುಕ್ರವಾರದಂದು ಈ ಮೇಕೆಗಳನ್ನು ಜೈಲಿನಿಂದ ರಿಲೀಸ್​ ಮಾಡಲಾಗಿದೆ.

ಅಂದಹಾಗೆಯೇ ಇದು ಬಾಂಗ್ಲಾದೇಶದ ಬಾರಿಸಾಲ್​ನಲ್ಲಿ ನಡೆದ ಘಟನೆ. ಡಿಸೆಂಬರ್​ 6, 2022ರಲ್ಲಿ ಮೇಕೆಗಳು ಸ್ಥಳೀಯ ಸ್ಮಶಾನದ ಒಳ ಹೊಕ್ಕಿವೆ. ಬಳಿಕ ಅಲ್ಲಿದ್ದ ಹುಲ್ಲುಗಳನ್ನು ತಿಂದಿವೆ. ಈ ಕಾರಣದಲ್ಲಿ ಬಂಧಿಸಲಾಗಿತ್ತು.

ಮೇಕೆಗಳ ಮಾಲೀಕ ಶಹರಿಯಾರ್​ ಸಚಿವ್​ ರಾಜೀಬ್​ 9 ಮೇಕೆಗಳನ್ನು ಹಿಂತಿರುಗಿ ಪಡೆದಿದ್ದಾರೆ. ಹೊಸದಾಗಿ ಚುನಾಯಿತಗೊಂಡಿರುವ ಸಿಟಿ ಕಾರ್ಪೋರೇಷನ್​ ಮೇಯರ್​ ಅಬುಲ್​ ಖೈರ್​ ಅಬ್ದುಲ್ಲಾ ಅವರಿಗೆ ಮನವಿ ಮಾಡುವ ಮೂಲಕ ಜೈಲು ಸೇರಿದ್ದ ಮೇಕೆಗಳನ್ನು ಮರಳಿ ಪಡೆದಿದ್ದಾರೆ.

ಪ್ರಾಣಿಗಳು ಜೈಲು ಸೇರಿದ್ದು ಇದೇ ಮೊದಲಲ್ಲ

ಉತ್ತರ ಪ್ರದೇಶದ ಜಲೌನ್​ ಜಿಲ್ಲೆಯಲ್ಲಿ ಕತ್ತೆಗಳ ಹಿಂಡನ್ನು ಜೈಲಿಗೆ ಹಾಕಲಾಗಿತ್ತು. ಕಾರಣ ಉರೈ ಜೈಲಿನ ಹೊರಗೆ 5 ಲಕ್ಷ ಮೌಲ್ಯದ ಸಸ್ಯಗಳನ್ನು ತಿಂದು ನಾಶ ಪಡಿಸಿದ್ದಕ್ಕಾಗಿ ಬಂಧಿಸಲಾಯಿತು. 4 ದಿನಗಳ ಬಳಿಕ ಕತ್ತೆಗಳನ್ನು ರಿಲೀಸ್​ ಮಾಡಲಾಗಿತ್ತು.

Advertisment