newsfirstkannada.com

ವರುಣಾರ್ಭಟಕ್ಕೆ ತತ್ತರಿಸಿದ ಉತ್ತರ, 24 ಗಂಟೆಗಳಲ್ಲಿ 9 ಬಲಿ..ಹಿಮಾಚಲದಲ್ಲಿ 223 ಸಾವು

Share :

11-08-2023

    ದೇವಭೂಮಿಯಲ್ಲಿ ವರುಣನ ರೌದ್ರನರ್ತನ

    800 ಮನೆಗಳು ನಾಶ.. 7500 ಮನೆಗಳಿಗೆ ಹಾನಿ

    ಮನೆ ಕುಸಿದು 2 ಸಾವು.. ಮೂವರು ನಾಪತ್ತೆ

ಉತ್ತರ ಭಾರತವನ್ನ ತತ್ತರ ಮಾಡ್ತಿರೋ ವರುಣ, ದೇವಭೂಮಿಯಲ್ಲಿ ರೌದ್ರನರ್ತನ ಮೆರೆಯುತ್ತಿದ್ದಾನೆ. ಹಿಮಾಚಲ, ಉತ್ತರಾಖಂಡ್​ ಹಾಗೂ ಬಿಹಾರದಲ್ಲಿ ರೆಸ್ಟ್​ ತೆಗೆದುಕೊಳ್ಳದೇ ಸುರಿಯುತ್ತಿರೋ ಮಳೆರಾಯ ಸಾವಿನ ಸರಮಾಲೆಗೆ ಕಾರಣವವಾಗ್ತಿದ್ದಾನೆ.

ಮಳೆ ಬಂದ್ರೆ ಇಳೆಗೆ ಜೀವ ಕಳೆ. ಸಕಲ ಜೀವ ರಾಶಿಗಳಿಗೆ ಹೊಸ ಉತ್ಸಾಹ. ಆದ್ರೆ ಅದೇ ಮಳೆ ರೌದ್ರರೂಪ ತಾಳಿದ್ರೆ ಸಕಲ ಜೀವರಾಶಿಗಳಿಗೆ ಸಂಚಕಾರ. ಸದ್ಯ ದೇವಭೂಮಿ ಅಂತಲೇ ಕರೆಸಿಕೊಳ್ಳೋ ಉತ್ತರಾಖಂಡ್​ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆರಾಯನ ರಕ್ಕಸ ರೂಪವನ್ನ ಕಂಡು ತಬ್ಬಿಬ್ಬಾಗಿರೋ ಉತ್ತರಾಖಂಡ್​ನ ಜನ ಜೀವ ಕೈಯಲ್ಲಿ ಹಿಡಿದು ದಿನ ದೂಡುತ್ತಿದ್ದಾರೆ. ವರುಣಾರ್ಭಟಕ್ಕೆ ದೇವಭೂಮಿಯಲ್ಲಿ ಸಾವಿರಾರು ಜನರ ಬದುಕು ಕೊಚ್ಚಿಹೋಗಿದೆ.

ಕಳೆದ 24 ಗಂಟೆಗಳಲ್ಲಿ 9 ಜನರ ಬಲಿ ಪಡೆದ ವರುಣ ಉತ್ತರಾಖಂಡ್​ನಾದ್ಯಂತ ಸುರಿಯುತ್ತಿರೋ ಯಮರೂಪಿ ಮಳೆ ಜನಜೀವವನ್ನ ಅಸ್ತವ್ಯಸ್ತಗೊಳಿಸಿದೆ.. ಕಳೆದ 24 ಗಂಟೆಗಳಲ್ಲಿ ವರುಣಾರ್ಭಟಕ್ಕೆ ದೇವಭೂಮಿಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಭೂಕುಸಿತ, ಮನೆ ಕುಸಿತ ಸೇರಿ ಹಲವು ಅವಾಂತರಗಳಲ್ಲಿ 12 ಮಂದಿ ಗಾಯಗೊಂಡಿದ್ದಾರೆ.

ರಿಷಿಕೇಶ್ ಮತ್ತು ಹಲ್ದ್​​ವಾನಿಯಲ್ಲಿ  ಧಾರಾಕಾರ ಮಳೆ

ಉತ್ತರಾಖಂಡ್​ನ ರಿಷಿಕೇಶ್​ ಮತ್ತು ಹಲ್ದ್​​ವಾನಿಯಲ್ಲಿ ಧಾರಾಕಾರ ಮಳೆಯಾಗ್ತಿದೆ. ಕಳೆದ 24 ಗಂಟೆಗಳಲ್ಲಿ ಈ ಪ್ರದೇಶಗಳಲ್ಲಿ ಬರೋಬ್ಬರಿ 31 ಸೆಂ.ಮೀ ಮಳೆ ಸುರಿದಿದೆ. ಭಾರೀ ಮಳೆಯ ಕಾರಣ ರಿಷಿಕೇಶ್​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 50 ಜನರನ್ನ ಎನ್​ಡಿಅರ್​ಎಫ್​ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಹಲ್ದ್​​ವಾನಿಯಲ್ಲಿ  ಪ್ರವಾಹದ ನೀರಿನಲ್ಲಿ ಸಿಲುಕಿದ್ದ 150 ಜನರನ್ನು ರಕ್ಷಿಸಲಾಗಿದೆ. ರಾಜ್ಯದ ನೈನಿತಾಲ್, ಚಂಪಾವತ್, ಉಧಮ್ ಸಿಂಗ್ ನಗರ ಮತ್ತು ಪೌರಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಹಿಮಾಚಲದಲ್ಲಿ ಮಳೆ ಅಬ್ಬರಕ್ಕೆ 223 ಜನರ ಸಾವು

ಹಿಮಾಚಲ ಪ್ರದೇಶವನ್ನ ಬೆಂಬಿಡದೇ ಕಾಡ್ತಿರೋ ಮಳೆರಾಯ ಅವಾಂತರಗಳ ಸರಮಾಲೆಯನ್ನೇ ಸೃಷ್ಟಿಸಿ ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ.

ಹಿಮಾಚಲದಲ್ಲಿ ವರುಣಾರ್ಭಟಕ್ಕೆ ಜೂನ್ 24 ರಿಂದ ಇಲ್ಲೆಯವರೆಗೆ ಸುಮಾರು 223 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ಮಳೆ ಅವಾಂತರದಿಂದ 295ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.. ನಿರಂತರ ಮಳೆಯಿಂದ ಹಿಮಾಚಲದಲ್ಲಿ 800 ಮನೆಗಳು ಸಂಪೂರ್ಣ ನಾಶವಾಗಿದ್ದು, 7500 ಮನೆಗಳು ಶಿಥಿಲಗೊಂಡಿವೆ.

ಹಿಮಾಚಲದಲ್ಲಿ ಮನೆ ಕುಸಿದು ಇಬ್ಬರ ಸಾವು

ಹಿಮಾಚಲ ಪ್ರದೇಶದ ಸಿರ್​ಮಾರ್​ನಲ್ಲಿ ಸುರಿದ ಧಾರಕಾರ ಮಳೆ ಇಬ್ಬರನ್ನ ಬಲಿಪಡೆದಿದೆ. ಮಳೆ ಅಬ್ಬರಕ್ಕೆ ಮನೆಯೊಂದು ಕುಸಿದ ಕಾರಣ ಮನೆಯಲ್ಲಿದ್ದ ಇಬ್ಬರು ಸಾವನ್ನಪ್ಪಿ, 3 ಮಂದಿ ನಾಪತ್ತೆಯಾಗಿದ್ದಾರೆ. ಎನ್​ಡಿಆರ್​ಎಫ್​ ಸಿಬ್ಬಂದಿ ನಾಪತ್ತೆಯಾದವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಬಿಹಾರದಲ್ಲಿ ಕುಸಿದ ಶಾಲಾ ಕಟ್ಟಡ.. ತಪ್ಪಿತು ಭಾರೀ ದುರಂತ

ಮಳೆ ಅಬ್ಬರಕ್ಕೆ ಬಿಹಾರದಲ್ಲಿ ಕೋಸಿ ನದಿ ಉಕ್ಕಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ಖಗಾರಿಯಾ ಜಿಲ್ಲೆಯ ಗಾಂಧಿನಗರದಲ್ಲಿ ನದಿ ತೀರದಲ್ಲಿದ್ದ ಶಾಲೆಯೊಂದು ಪ್ರವಾಹದ ಹೊಡೆತಕ್ಕೆ ಕುಸಿತಗೊಂಡಿದೆ. 210 ವಿದ್ಯಾರ್ಥಿಗಳು ಓದುತ್ತಿದ್ದ ಶಾಲೆಯಲ್ಲಿ ಭಾರೀ ಮಳೆ ಕಾರಣ ರಜೆ ನೀಡಲಾಗಿತ್ತು. ಹೀಗಾಗಿ ಘಟನೆ ವೇಳೆ ಶಾಲೆಯಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ.

ಒಟ್ಟಿನಲ್ಲಿ ಉತ್ತರ ಭಾರತವನ್ನ ಬೆಂಬಿಡದೆ ಬೇತಾಳದಂತೆ ಕಾಡ್ತಿರೋ ಮಳೆರಾಯ ಜನರನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾನೆ. ಮಳೆರಾಯನ ಅಬ್ಬರಕ್ಕೆ ಬೆಚ್ಚಿಬಿದ್ದಿರೋ ಉತ್ತರದ ಜನತೆ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರುಣಾರ್ಭಟಕ್ಕೆ ತತ್ತರಿಸಿದ ಉತ್ತರ, 24 ಗಂಟೆಗಳಲ್ಲಿ 9 ಬಲಿ..ಹಿಮಾಚಲದಲ್ಲಿ 223 ಸಾವು

https://newsfirstlive.com/wp-content/uploads/2023/08/Himachal-Pradesh.jpg

Load More