‘ಈ ಮ್ಯಾಜಿಕಲ್ ಮಿರರ್ ನಾಸಾ ವಿಜ್ಞಾನಿಗಳು ಬಳಸುತ್ತಾರಂತೆ’
ಸಿಂಗಾಪುರದ ಕಂಪನಿಗಳಲ್ಲಿ ತಯಾರಾಗುವ ಸ್ಪೆಷಲ್ ಪ್ರಾಡಕ್ಟ್?
2 ಕೋಟಿ ರೂಪಾಯಿ ಮಿರರ್‌ಗೆ 9 ಲಕ್ಷ ರೂಪಾಯಿ ಅಡ್ವಾನ್ಸ್!
ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರು ಇದ್ದೇ ಇರ್ತಾರೆ. ಇದೊಂದು ಹಳೇ ಡೈಲಾಗ್ ಆದ್ರೂ ಆವಾಗವಾಗ ಸಾಬೀತಾಗುತ್ತಲೇ ಇದೆ. ಈ ಮ್ಯಾಜಿಕ್ ಮಿರರ್ ವಿಷಯದಲ್ಲಿ ಇದೇ ಆಗಿದೆ. ನಮ್ಮ ಹತ್ರ ಒಂದು ಮ್ಯಾಜಿಕ್ ಮಿರರ್ ಇದೆ. ಅದರಿಂದ ನೀವು ಎಲ್ಲರನ್ನೂ ಬೆತ್ತಲೆಯಾಗಿ ನೋಡಬಹುದು. ಹೀಗಂತಾ ನಂಬಿಸಿದ ಖದೀಮರು 9 ಲಕ್ಷ ರೂಪಾಯಿ ಜೊತೆ ಪರಾರಿಯಾಗಿದ್ದಾರೆ. ಈ ಕಳ್ಳರ ಮಾತು ನಂಬಿ ಮ್ಯಾಜಿಕ್ ಮಿರರ್ ಖರೀದಿಸಿದ ವ್ಯಕ್ತಿಗೆ ತಾನು ಮೋಸ ಹೋಗಿರೋದು ತಡವಾಗಿ ಗೊತ್ತಾಗಿದೆ.
ಇದನ್ನೂ ಓದಿ: ನೇಪಾಳದಲ್ಲಿ ಐಷಾರಾಮಿ ಹೋಟೆಲ್; ಭಾರತದಲ್ಲಿ ಕೋಟಿಗಟ್ಟಲೇ ಆಸ್ತಿ; ಖತರ್ನಾಕ್ ಕಳ್ಳ ಪೊಲೀಸರಿಗೆ ಸಿಕ್ಕಿದ್ದು ಹೇಗೆ?
ಉತ್ತರಪ್ರದೇಶದ ಕಾನ್ಪುರದಲ್ಲಿ ಇಂತಹದೊಂದು ಮಿರಾಕಲ್ ಪ್ರಕರಣ ಬೆಳಕಿಗೆ ಬಂದಿದೆ. ಅವಿನಾಶ್ ಕುಮಾರ್ ಶುಕ್ಲಾ ಎಂಬ ವ್ಯಕ್ತಿಯನ್ನು ಮೂವರು ಖದೀಮರು ಪರಿಚಯ ಮಾಡಿಕೊಳ್ತಾರೆ. ಸ್ವಲ್ಪ ಕ್ಲೋಸ್ ಆಗುತ್ತಿದ್ದಂತೆ ನಾವು ಸಿಂಗಾಪುರದ ಕಂಪನಿಗಳಲ್ಲಿ ಕೆಲಸ ಮಾಡಿ ಪರಿಣಿತಿ ಹೊಂದಿದ್ದೇವೆ. ನಾವು ಸಿಂಗಾಪುರದಿಂದ ಒಂದು ಮಿರಾಕಲ್ ಮಿರರ್ ಅನ್ನು ತರಿಸಿಕೊಡ್ತೀವಿ. ಆ ಮ್ಯಾಜಿಕಲ್ ಮಿರರ್ ಅನ್ನು ನಾಸಾ ವಿಜ್ಞಾನಿಗಳು ಬಳಸುತ್ತಾರೆ. ಅದರಲ್ಲಿ ನೀವು ಎಲ್ಲರನ್ನು ಬೆತ್ತಲೆಯಾಗಿ ನೋಡಬಹುದು ಅಂತಾ ನಂಬಿಸಿದ್ದಾರೆ.
ಖದೀಮರ ಈ ಮಾತನ್ನ ಅವಿನಾಶ್ ಕುಮಾರ್ ಶುಕ್ಲಾ ಮೊದ, ಮೊದಲು ನಂಬಿಲ್ಲ. ಮತ್ತೆ, ಮತ್ತೆ ಬೆನ್ನು ಬಿದ್ದ ಖದೀಮರು ಶುಕ್ಲಾ ಅವರ ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಸಿಂಗಾಪುರದಿಂದ ಮಿರಾಕಲ್ ಮಿರರ್ ತಂದು ಕೊಡಲು 2 ಕೋಟಿ ರೂಪಾಯಿ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಅವಿನಾಶ್ ಕುಮಾರ್ ಶುಕ್ಲಾ 9 ಲಕ್ಷ ರೂಪಾಯಿ ಅಡ್ವಾನ್ಸ್ ಮಾಡಿದ್ದಾರೆ. ಹಣ ಪಡೆದ ಆರೋಪಿಗಳು ಒಂದು ಮಾಮೂಲಿ ಮಿರರ್ ಗ್ಲಾಸ್ ಅನ್ನ ತಂದು ಕೊಟ್ಟು ಎಸ್ಕೇಪ್ ಆಗಿದ್ದಾರೆ.
9 ಲಕ್ಷ ರೂಪಾಯಿಗೆ ಮ್ಯಾಜಿಕ್ ಮಿರರ್ ಖರೀದಿಸಿದ ಬಳಿಕ ಅವಿನಾಶ್ ಕುಮಾರ್ ಶುಕ್ಲಾಗೆ ತಾನು ಮೋಸ ಹೋಗಿರೋದು ಗೊತ್ತಾಗಿದೆ. ತಕ್ಷಣವೇ ಕಾನ್ಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ಆರೋಪಿಗಳು ಪಾರ್ಥ ಸಿಂಗ್ರೇ, ಮಲಯ ಸರ್ಕಾರ್, ಸುದೀಪ್ತ ಸಿನ್ಹಾ ರಾಯ್ ಎಂದು ಗುರುತಿಸಲಾಗಿದೆ. ಈ ಮೂವರು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಒಡಿಶಾದಲ್ಲಿ ಸಿಕ್ಕಿಬಿದ್ದಿದ್ದಾರೆ. ಆನ್‌ಲೈನ್‌ನಲ್ಲಿ ಹಣ ಟ್ರಾನ್ಸ್‌ಫರ್ ಮಾಡುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 72 ವರ್ಷದ ಅವಿನಾಶ್ ಕುಮಾರ್ ಶುಕ್ಲಾ ಮ್ಯಾಜಿಕ್ ಮಿರರ್ ಆಸೆಗೆ ಬಿದ್ದು 9 ಲಕ್ಷ ರೂಪಾಯಿ ಕಳೆದುಕೊಂಡಿದ್ರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹಣ, ಕಾರು, ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ