newsfirstkannada.com

×

ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

Share :

Published June 9, 2023 at 5:33pm

Update June 9, 2023 at 5:55pm

    ಮೆಂಥೋಪ್ಲಸ್​​ ಡಬ್ಬಿ ನುಂಗಿ 9 ತಿಂಗಳ ಮಗು ದಾರುಣ ಸಾವು

    ರಾಘವೇಂದ್ರ ಹಾಗೂ ತುಳಸಿ ದಂಪತಿಗೆ ಸೇರಿದ ಮೃತ ಮಗು

    ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಇಂದಿರಾನಗರದಲ್ಲಿ ಘಟನೆ

ಬಳ್ಳಾರಿ: ಮೆಂಥೋಪ್ಲಸ್​​ ಡಬ್ಬಿ ನುಂಗಿ 9 ತಿಂಗಳ ಮಗು ಸಾವನ್ನಪ್ಪಿರೋ ಘಟನೆ ಕಂಪ್ಲಿ ತಾಲೂಕಿನ ಇಂದಿರಾನಗರದಲ್ಲಿ ನಡೆದಿದೆ. ಪ್ರಿಯದರ್ಶಿನಿ (9 ತಿಂಗಳು) ಮೃತ ಮಗು.

ಮೃತ ಮಗುವು ರಾಘವೇಂದ್ರ ಹಾಗೂ ತುಳಸಿ ದಂಪತಿಗೆ ಸೇರಿದೆ. ಮೃತ ಮಗುವು ಆಟವಾಡುತ್ತಿದ್ದಾಗ ಮೆಂಥೋಪ್ಲಸ್​​ ಕೈಗೆ ಸಿಕ್ಕಿದೆ. ಆ ವೇಳೆ ಮೆಂಥೋಪ್ಲಸ್ ಡಬ್ಬಿಯನ್ನು ಮಗು ನುಂಗಿದೆ. ಬಳಿಕ ಮಗುವಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಕೂಡಲೇ ಮಗುವನ್ನು ಖಾಸಗಿ ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಗುವನ್ನು ತಪಾಸಣೆ ಮಾಡಿದ ವೈದ್ಯರು, ಮಗುವು ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಇನ್ನು, ಮೃತ ಮಗುವಿನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

https://newsfirstlive.com/wp-content/uploads/2023/06/women-5.jpg

Load More