ಈ ಎಡಗೈ ಬ್ಯಾಟರ್ಸ್ ಹುಟ್ಟಿರೋದು ನವೆಂಬರ್ ತಿಂಗಳನಲ್ಲಿ..!
ಕ್ರಿಕೆಟ್‌ನ ಎಲ್ಲಾ ವಿಚಾರದಲ್ಲೂ ರೈನಾ, ತಿಲಕ್ ವರ್ಮಾಗೆ ಸಾಮ್ಯತೆ
T20I ಡೆಬ್ಯು ಮ್ಯಾಚ್ನ ಮೊದಲ ಓವರ್ನಲ್ಲಿ ವಿಕೆಟ್, 2 ಕ್ಯಾಚ್
ಗುರು ಹಾಕಿಕೊಟ್ಟ ಮಾರ್ಗದಲ್ಲಿ ಎಡವದೆ ನಡೆಯೋದು ಕಷ್ಟ. ಅಂತಹದ್ರಲ್ಲಿ ಗುರುವಿನ ಹಾದಿಯನ್ನ ಡಿಟ್ಟೋ ಫಾಲೋ ಮಾಡೋಕಾಗುತ್ತಾ? ಇದನ್ನ ಗುರುವಿನ ಹಾದಿಯಲ್ಲಿ ಶಿಷ್ಯ ಅನ್ನಬೇಕೋ ಅಥವಾ ಕಾಕತಾಳೀಯ ಅನ್ನಬೇಕೋ ಕನ್ಫೂಷನ್ ಆಗ್ತಿದೆ. ಯಂಗ್ ಬ್ಯಾಟರ್ ತಿಲಕ್ ವರ್ಮಾ ಅವರು ತನ್ನ ಗುರು ರೈನಾರನ್ನ ಹೇಗೆ ಫಾಲೋ ಮಾಡ್ತೊರೋ ಗೊತ್ತಾ?
ತಿಲಕ್ ವರ್ಮಾ ಟೀಮ್ ಇಂಡಿಯಾದ ಸದ್ಯದ ಸೆನ್ಸೇಷನ್. ಆಡಿದ ಒಂದೇ ಸಿರೀಸ್ನಿಂದ ಭವಿಷ್ಯದ ಭರವಸೆ ಅನಿಸಿಕೊಂಡಿರುವ ಕ್ರಿಕೆಟಿಗ. ತಿಲಕ್ ಆಟವನ್ನ ನೋಡಿದ ಪ್ರತಿಯೊಬ್ಬರೂ ಲೆಜೆಂಡ್ ಸುರೇಶ್ ರೈನಾಗೆ ಹೋಲಿಕೆ ಮಾಡ್ತಿದ್ದಾರೆ. ಅಸಲಿ ವಿಚಾರ ಏನಪ್ಪಾ ಅಂದ್ರೆ, ಲೆಜೆಂಡ್ ರೈನಾ ತಿಲಕ್ ವರ್ಮಾ ಪಾಲಿನ ಗುರು.
ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಾಗಿನಿಂದ ಹಿಡಿದು ಈವರೆಗೂ ತಿಲಕ್, ರೈನಾರನ್ನು ಫಾಲೋ ಮಾಡಿರೋದು. ಅದೆಷ್ಟು ಮಟ್ಟಿಗೆ ಅಂದ್ರೆ ಒಂದಿಂಚೂ ಆ ಕಡೆ, ಈ ಕಡೆ ಇಲ್ಲ ಅಂತಾರಲ್ಲಾ ಹಾಗೇ. ಎಡಗೈ ಬ್ಯಾಟ್ಸ್ಮನ್, ಫಾರ್ಟ್ ಟೈಮ್ ಬೌಲರ್, ಸಾಲಿಡ್ ಫೀಲ್ಡರ್, ಹುಟ್ಟಿದ್ದು ನವೆಂಬರ್ ಅನ್ನೋದನೆಲ್ಲ ಬಿಟ್ಟು ಬಿಡಿ. ಸಾಧನೆ ವಿಚಾರದಲ್ಲೂ ಸೇಮ್ ಟು ಸೇಮ್. ಅಷ್ಟರ ಮಟ್ಟಿಗೆ ಸಾಮ್ಯತೆಯಿದೆ.
2ನೇ ಐಪಿಎಲ್ ಪಂದ್ಯದಲ್ಲೇ ಅರ್ಧಶತಕ
2008ರ ಉದ್ಘಾಟನಾ ಆವೃತ್ತಿಯ ಐಪಿಎಲ್ನಲ್ಲಿ ಆಡಿದ 2ನೇ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಸುರೇಶ್ ರೈನಾ ಹಾಫ್ ಸೆಂಚುರಿ ಸಿಡಿಸಿದ್ರು. ತಿಲಕ್ ವರ್ಮಾ ಕೂಡ ಐಪಿಎಲ್ ಟೂರ್ನಿಯಲ್ಲಿ ಆಡಿದ 2ನೇ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಅರ್ಧಶತಕ ಸಿಡಿಸಿದ್ರು. ಒಂದು ಚೈಂಜ್ ಏನಪ್ಪಾ ಅಂದ್ರೆ, ರೈನಾ ಮುಂಬೈ ವಿರುದ್ಧ ಅರ್ಧ ಶತಕಗಳಿಸಿದ್ರೆ, ತಿಲಕ್ ಮುಂಬೈ ಪರ ಹಾಫ್ ಸೆಂಚುರಿ ದಾಖಲಿಸಿದ್ರು.
ಮೊದಲ 2 IPL ಸೀಸನ್ನಲ್ಲಿ 350+ ರನ್
2008 ಹಾಗೂ 2009ರ ಐಪಿಎಲ್ ಸೀಸನ್ನಲ್ಲಿ ಸಾಲಿಡ್ ಆಟವಾಡಿದ್ದ ರೈನಾ ಎರಡೂ ಆವೃತ್ತಿಗಳಲ್ಲಿ 350+ ರನ್ ಸಿಡಿಸಿದ್ರು. ಕಾಕತಾಳೀಯ ಎಂಬಂತೆ 2022ರಲ್ಲಿ ಐಪಿಎಲ್ ಡೆಬ್ಯು ಮಾಡಿದ್ದ ತಿಲಕ್, 2022 ಹಾಗೂ 2023 ಎರಡೂ ಸೀಸನ್ನಲ್ಲಿ 350+ ರನ್ ಕೊಳ್ಳೆ ಹೊಡೆದ್ರು.
T20I ಡೆಬ್ಯು ಮ್ಯಾಚ್ನಲ್ಲಿ 2 ಕ್ಯಾಚ್
ಸುರೇಶ್ ರೈನಾ ಹಾಗೂ ತಿಲಕ್ ವರ್ಮಾ ಟಿ20 ಅಂತರಾಷ್ಟ್ರೀಯ ಮಾದರಿಗೆ ಡೆಬ್ಯು ಮಾಡಿದ್ದು ತಮ್ಮ 20ನೇ ವಯಸ್ಸಿನಲ್ಲಿ. ಯಂಗ್ಗನ್ಗಳಾಗಿ ಎಂಟ್ರಿ ಕೊಟ್ಟ ಇಬ್ರೂ ಡೆಬ್ಯೂ ಮ್ಯಾಚ್ನಲ್ಲೇ ಕ್ಯಾಚ್ ಹಿಡಿದು ಕಮಾಲ್ ಮಾಡಿದ್ರು. ಸೌತ್ ಆಫ್ರಿಕಾ ವಿರುದ್ಧ ಡೆಬ್ಯು ಮಾಡಿದ ರೈನಾ 2 ಕ್ಯಾಚ್ ಹಿಡಿದ್ರೆ, ವಿಂಡೀಸ್ ವಿರುದ್ಧ ಡೆಬ್ಯು ಮಾಡಿದ ತಿಲಕ್ ಕೂಡ 2 ಕ್ಯಾಚ್ ಹಿಡಿದು ತಂಡಕ್ಕೆ ನೆರವಾದ್ರು.
ತಂಡ ಸೋತ ಪಂದ್ಯದಲ್ಲಿ ಮೊದಲ ಅರ್ಧಶತಕ
ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಸುರೇಶ್ ರೈನಾ ಹಾಗೂ ತಿಲಕ್ ವರ್ಮಾರ ಮೊದಲ ಅರ್ಧಶತಕ ದಾಖಲಾಗಿದ್ದು ಸೋತ ಪಂದ್ಯದಲ್ಲೇ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರೈನಾ ಅರ್ಧಶತಕ ಸಿಡಿಸಿದ್ರೆ, ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ ಮೊದಲ ಹಾಫ್ ಸೆಂಚುರಿ ಸಿಡಿಸಿದ್ರು. ಆದ್ರೆ, ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲುಂಡಿತ್ತು.
ಚೇಸಿಂಗ್ನಲ್ಲಿ ಅಜೇಯ 49 ರನ್
ಇನ್ನು ಚೇಸಿಂಗ್ ವೇಳೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಾಗಲೂ ಸೇಮ್ ಕಥೆ. ವಿಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಚೇಸಿಂಗ್ ವೇಳೆ ತಿಲಕ್ ವರ್ಮಾ ಅಜೇಯ 49 ರನ್ ಸಿಡಿಸಿದ್ರು. ಈ ಹಿಂದೆ ಸುರೇಶ್ ರೈನಾ ಕೂಡ ಇದೇ ಸಾಧನೆ ಮಾಡಿದ್ರು.
T20Iನಲ್ಲಿ ಹಾಕಿದ ಮೊದಲ ಓವರ್ನಲ್ಲೇ ವಿಕೆಟ್
ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಹಾಕಿದ ಮೊದಲ ಓವರ್ನಲ್ಲೇ ಇಬ್ರೂ ವಿಕೆಟ್ ಕಬಳಿಸಿದ್ರು. ಸುರೇಶ್ ರೈನಾ ಸೌತ್ ಆಫ್ರಿಕಾ ವಿರುದ್ಧ ರೈನಾ ಮೊದಲ ವಿಕೆಟ್ ಕಬಳಿಸಿದ್ರೆ, ವಿಂಡೀಸ್ ವಿರುದ್ಧ ತಿಲಕ್ ವರ್ಮಾ ಹಾಕಿದ ಮೊದಲ ಓವರ್ನಲ್ಲೇ ವಿಕೆಟ್ ಕಬಳಿಸಿದ್ರು.
ಈ ಎಲ್ಲ ಸಾಮ್ಯತೆಗಳನ್ನ ನೋಡಿದ ಮೇಲೆ ಗುರುವಿನ ಹಾದಿಯಲ್ಲಿ ಶಿಷ್ಯ ಅನ್ನದೇ ಇರೋಕಾಗುತ್ತಾ..? ಸದ್ಯ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ರೈನಾ ರಂತೇ ಇಂಪ್ಯಾಕ್ಟ್ ಮಾಡೋ ನಿರೀಕ್ಷೆಯನ್ನ ತಿಲಕ್ ವರ್ಮಾ ಹುಟ್ಟು ಹಾಕಿರೋದಂತೂ ಸುಳ್ಳಲ್ಲ. ಅಭಿಮಾನಿಗಳ ಆ ನಿರೀಕ್ಷೆಗಳನ್ನ ತಿಲಕ್ ಹುಸಿಯಾಗಿಸದಿರಲಿ ಅನ್ನೋದೆ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ