ಸಿಸಿಟಿವಿಯಲ್ಲಿ ಸೆರೆಯಾಗಿದೆ ಬಾಲಕ ಮನೆ ಬಿಡುತ್ತಿರುವ ದೃಶ್ಯ
ಅಪ್ಪ-ಅಮ್ಮನಿಗೆ ಹೇಳಿದ ಸುಳ್ಳು ಏನು ಗೊತ್ತಾ..?
ಬೆಂಗಳೂರಿನ ಆರ್ಟಿ ನಗರದಲ್ಲಿ ವಿಚಿತ್ರ ಕೇಸ್..!
ಬೆಂಗಳೂರು: ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಡುವ ಪೋಷಕರು ಓದಲೇಬೇಕಾದ ಸ್ಟೋರಿ ಇದು. ಅಮ್ಮನ ಫೋನ್ನಲ್ಲಿ ಲೊಕೇಶನ್ ಚೆಕ್ ಮಾಡಿ ಬಾಲಕ ಮನೆಬಿಟ್ಟು ಹೋದ ಘಟನೆ ಆರ್.ಟಿ.ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಪ್ರಕರಣ..?
ಆದಿತ್ಯ ನಾಪತ್ತೆಯಾದ ಬಾಲಕ. ಈತ 9ನೇ ತರಗತಿ ಓದುತ್ತಿದ್ದಾರೆ. ಅಮ್ಮನ ಮೊಬೈಲ್ ಪಡೆದಿದ್ದ ಬಾಲಕ, ಮಲ್ಪೆ, ಮೈಸೂರಿನ ಕೆಲವು ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಅದಾದ ನಂತರ ಮೇ 29 ರಂದು ಕಟ್ಟಿಂಗ್ ಶಾಪ್ಗೆ ಹೋಗ್ತೀನಿ ಎಂದು ಹೋದ ಬಾಲಕ ಮತ್ತೆ ವಾಪಸ್ ಬಂದಿಲ್ಲ. ಕೊನೆಗೆ ಅಪ್ಪ-ಅಮ್ಮ ಹುಡುಕಾಡಿದಾಗ, ಮನೆಯಲ್ಲಿದ್ದ ಒಂದಷ್ಟು ಬಟ್ಟೆಗಳನ್ನೂ ತುಂಬಿಕೊಂಡು ಹೋಗಿರೋದು ಬೇಳಕಿಗೆ ಬಂದಿದೆ. ಜೊತೆಗೆ ಸಿಸಿಟಿವಿಯಲ್ಲೂ ಕೆಲವು ದೃಶ್ಯಗಳು ಸೆರೆಯಾಗಿದೆ.
ಠಾಣೆ ಬಿಟ್ಟು, ಜ್ಯೋತಿಷಿ ಮೊರೆ ಹೋದ ಪೋಷಕರು..!
ಮಗ ಮಿಸ್ಸಿಂಗ್ ಬೆನ್ನಲ್ಲೇ ಪೋಷಕರು ಜ್ಯೋತಿಷಿಯ ಮೊರೆ ಹೋಗಿದ್ದಾರೆ. ಜ್ಯೋತಿಷಿಯು ದಕ್ಷಿಣ ಕರಾವಳಿ ಭಾಗದಲ್ಲಿ ಇದ್ದಾನೆ ಎಂದು ತಿಳಿಸಿದ್ದರಂತೆ. ಜ್ಯೋತಿಷಿ ಮಾತಿನಿಂದ ಪೋಷಕರು ದಕ್ಷಿಣ ಕನ್ನಡಕ್ಕೆ ಹೋಗಿ ಹುಡಕಾಟ ನಡೆಸಿದ್ದಾರೆ.
ಹೀಗಾಗಿ ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಎಲ್ಲೂ ಮಗನ ಸುಳಿವು ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಟಿ ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನಂತೆ ಆರ್.ಟಿ.ನಗರ ಪೊಲೀಸರು, ಶೋಧಕಾರ್ಯ ಆರಂಭಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ