ಬೆಂಕಿ-ಬಿರುಗಾಳಿ.. ಹವಾಯಿ ಪರಿಸ್ಥಿತಿ ಫುಲ್ ಅಯೋಮಯ
ಸುಟ್ಟು ಕರಕಲಾದ ಮನೆಗಳು ಹಾಗೂ ಕಟ್ಟಡಗಳು, ವಾಹನಗಳು
ಹವಾಯಿ ಬೆಂಕಿ ಗಂಡಾಂತರಕ್ಕೆ 93ಕ್ಕೂ ಹೆಚ್ಚು ಮಂದಿ ಬಲಿ..!
ಧರೆಯೇ ಹೊತ್ತಿ ಉರಿಯುವಾಗ ಬದುಕಲಿ ಎಲ್ಲಿ ಓಡುವೆ ಅನ್ನೋ ಮಾತು ಸದ್ಯ ಹವಾಯಿ ದ್ವೀಪಕ್ಕೆ ಅನ್ವಯ ಆಗ್ತಿದೆ. ಕಳೆದೊಂದು ವಾರದಿಂದ ಸಂಭವಿಸಿರುವ ಕಾಡ್ಗಿಚ್ಚು ಇಂಥಾದ್ದೇ ಮತ್ತೊಂದು ಘಟನೆಗೆ ನಾಂದಿ ಹಾಡಿದೆ. ಇಡೀ ಹವಾಯಿ ದ್ವೀಪ ಬೆಂಕಿಯ ಕೆನ್ನಾಲಿಗೆ ಸುಟ್ಟು ಭಸ್ಮವಾಗಿದೆ. ಅಗ್ನಿಯ ನರ್ತನಕ್ಕೆ ಸಾವು-ನೋವಿನ ಅಕ್ರಂದನ ಮುಗಿಲುಮುಟ್ಟಿದೆ.
ಹವಾಯಿ ಬೆಂಕಿ ಗಂಡಾಂತರಕ್ಕೆ 93ಕ್ಕೂ ಹೆಚ್ಚು ಮಂದಿ ಬಲಿ!
ಶತಮಾನದಲ್ಲೇ ಕಂಡು ಕೇಳರಿಯದ ರಣಭೀಕರ ಕಾಡ್ಗಿಚ್ಚಿಗೆ ಉತ್ತರ ಅಮೆರಿಕದ ಹವಾಯಿ ದ್ವೀಪ ಅಕ್ಷರಶಃ ತತ್ತರಿಸಿದೆ. ಕಾಡ್ಗಿಚ್ಚು ದ್ವೀಪ ರಾಷ್ಟ್ರವನ್ನು ಸಂಪೂರ್ಣವಾಗಿ ಆವರಿಸಿದ್ದು ಸ್ಮಶಾನದ ವಾತಾವರಣ ಸೃಷ್ಟಿಸಿದೆ. ಮನೆ-ಕಟ್ಟಡಗಳು, ಮರಗಳು, ಕಾರುಗಳೆಲ್ಲ ಸುಟ್ಟು ಕರಕಲಾಗಿದ್ದು, ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಜನ ಸಮುದ್ರಕ್ಕೆ ಹಾರಿ ತಮ್ಮ ಜೀವ ಉಳಿಸಿಕೊಳ್ಳುತ್ತಿದ್ದಾರೆ. ಹವಾಯಿ ದ್ವೀಪದ ಲಹೈನಾ ನಗರದ ಸದ್ಯದ ಸ್ಥಿತಿ ನರಕದ ವಾತಾವರಣವನ್ನೇ ಸೃಷ್ಟಿಸಿದೆ. ಸದ್ಯ ಬೆಂಕಿಯ ಜ್ವಾಲೆಗೆ ಸಿಲುಕಿ ಮಾಯಿ ನಗರದಲ್ಲಿ 93ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ.
ಬೆಂಕಿ ಕೆನ್ನಾಲಿಗೆ ನಡುವೆ ಹಲವರು ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಬದುಕುಳಿದವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಆಗಿದೆ. ಮನೆ-ಮಠ ಕಳೆದುಕೊಂಡು ಜನ ಬೀದಿಗೆ ಬಂದಿದ್ದಾರೆ. ಜನರ ಆಸ್ತಿ ಹಾಗೂ ಪ್ರಾಣ ಉಳಿಸಲು ರಕ್ಷಣಾಪಡೆಗಳು ಹರಹಾಹಸ ನಡೆಸ್ತಿವೆ. ಕಾಡ್ಗಿಚ್ಚಿನಿಂದ ಬದುಕು ಸರ್ವನಾಶವಾಗಿದ್ದು ಸಂತ್ರಸ್ತರು ಆಶ್ರಯ ಕೇಂದ್ರಗಳಲ್ಲಿ ಉಳಿದಿದ್ದಾರೆ. ಮಾಯಿ, ಲಹೈನಾ ದ್ವೀಪಗಳಲ್ಲಿ ಅತಿ ಹೆಚ್ಚಿನ ಕಾಡ್ಗಿಚ್ಚು ಸಂಭವಿಸಿದೆ. ಆ. 8ರಂದು ಕಾಣಿಸಿಕೊಂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಇನ್ನೂ ಸಿಬ್ಬಂದಿ ಪರದಾಟ ನಡೆಸ್ತಿದ್ದಾರೆ. ಸದ್ಯ ಹವಾಮಾನ ಇಲಾಖೆ ಭಾರಿ ಬಿರುಗಾಳಿತ ಎಚ್ಚರಿಕೆ ನೀಡಿದೆ. ಕಳೆದ 100 ವರ್ಷದಲ್ಲಿ ಭೀಕರವಾದ ಕಾಡ್ಗಿಚ್ಚೆಂದು ಘೋಷಣೆ ಮಾಡಿದೆ.
ಸ್ವರ್ಗದಂತಿದ್ದ ಹವಾಯಿ ದ್ವೀಪ ರಾಷ್ಟ್ರ ನರಕದಂತಾಗಿದೆ. ಕಾಡ್ಗಿಚ್ಚು ಮತ್ತಷ್ಟು ವ್ಯಾಪಿಸಿದ್ದು, ಸಾವು, ನೋವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪಶ್ಚಿಮ ಮಾಯಿ ನಗರದಲ್ಲಿ ಸುಮಾರು 2,200ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಈ ಹಾನಿಯನ್ನು ಸರಿಪಡಿಸಲು ನಮಗೆ ಹಲವು ವರ್ಷಗಳೇ ಬೇಕು ಅಂತ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹವಾಯಿ ದ್ವೀಪದಾದ್ಯಂತ ಸುಮಾರು 6 ಬಿಲಿಯನ್ ಡಾಲರ್ ಮೊತ್ತದ ಹಾನಿ ಸಂಭವಿಸಿದೆ ಅಂತ ಅಂದಾಜಿಸಲಾಗಿದೆ. ಮನುಷ್ಯನ ದುರಾಸೆ, ಅತಿಯಾದ ಆವಿಷ್ಕಾರ, ಪರಿಸರ ಮಾಲಿನ್ಯಕ್ಕೆ ಪ್ರಕೃತಿ ಪದೆ ಪದೇ ಎಚ್ಚರಿಕೆಯ ಪಾಠ ಕಲಿಸುತ್ತೆ. ಹವಾಯಿ ದ್ವೀಪದಲ್ಲಿ ಆಗಿರೋದೋ ಅದೇ. ಹಚ್ಚ ಹಸಿರಿನ ಕಂಗೊಳಿಸುತ್ತಿದ್ದ ಸುಂದರ ತಾಣ ಸ್ಮಶಾನಸದೃಶವಾಗಿ ಬದಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ