newsfirstkannada.com

ಬರಿಗೈಲಿ ಬಂದ ಯುವಕನಿಗೆ ಸಿಕ್ತು ಬರೋಬ್ಬರಿ 94 ಲಕ್ಷ ರೂ.. ಆಮೇಲೇನಾಯ್ತು? ಸ್ಟೋರಿ ಓದಿ!

Share :

15-09-2023

  ಕ್ರೆಡಿಟ್​ ಕಾರ್ಡ್​ ಕೆಲಸ ಮಾಡ್ತಿದ್ದವನಿಗೆ ಹೊಡೆದಿತ್ತು

  ಕೇವಲ ಹತ್ತೇ ಹತ್ತು ಸೆಕೆಂಡ್​​ನಲ್ಲಿ ಆಗಿಬಿಟ್ಟ ಲಕ್ಷಾಧಿಪತಿ

  ₹94 ಲಕ್ಷ ಹಣ ಸಿಕ್ಕ ಆರು ದಿನಕ್ಕೇ ಏನಾಯ್ತು ಗೊತ್ತಾ..?

ಬೆಂಗಳೂರು: ಇದು ಬಯಸದೇ ಬಂದ ಭಾಗ್ಯ ದೌರ್ಬಾಗ್ಯವಾಗಿ ಪರಿಣಮಿಸಿದ ಘಟನೆ. ಹತ್ತೇ ಹತ್ತು ಸೆಕೆಂಡ್​​ನಲ್ಲಿ ಲಕ್ಷಾಧಿಪತಿಯಾಗಿಬಿಟ್ಟಿದ್ದ ಯುವಕ. ಆದ್ರೆ ಬಂದಷ್ಟೇ ವೇಗವಾಗಿ ಅವನ ಅದೃಷ್ಟ ಲಕ್ಷ್ಮಿ ಆತನಿಂದ ದೂರಾಗಿದ್ದಾಳೆ. ಜೊತೆಗೆ ದೂರೊಂದನ್ನ ತಲೆ ಮೇಲೆ ಹೊರಸಿ ಹೋಗಿದ್ದಾಳೆ.

ಈತನ ಹೆಸರು ವರುಣ್​, ಶ್ರೀನಗರದ ನಿವಾಸಿ. ಇವನನ್ನ ಅದೃಷ್ಟವಂತ ಅನ್ಬೇಕೋ ಅಥವಾ ದುರಾದೃಷ್ಟವಂತ ಅನ್ಬೇಕೋ ಗೊತ್ತಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದೇ ಈಗ ತಲೆಮೇಲೆ ಕೇಸ್​ ಒಂದನ್ನ ಹೊತ್ಕೊಂಡು ಕೂತಿದ್ದಾನೆ.

ಅಬ್ಬಬ್ಬಾ.. ಕಂತೆ ಕಂತೆ ಹಣ.. ಸಿಕ್ಕಿದ್ದು ಒಟ್ಟು 94 ಲಕ್ಷ ಹಣ. ಇಷ್ಟೊಂದು ಹಣ ಸಿಕ್ಕಿದ್ದು ಈ ವರುಣ್​ ಬಳಿ.. ಸಾಮಾನ್ಯ ವ್ಯಕ್ತಿಯಂತೆ ಕಾಣೋ ಈತನ ಬಳಿ ಇಷ್ಟೊಂದು ಹಣ ಇತ್ತಾ ಅಂತ ಮೂಗಿನ ಮೇಲೆ ಕೈ ಇಡಬೇಡಿ. ಇದು ಸಿಕ್ಕಿದ್ದು ಇವನಿಂದಲೇ. ಆದ್ರೆ ಈ ಹಣ ಇವನದಲ್ಲ. ಇಲ್ಲೇನೋ ಟ್ವಿಸ್ಟ್​​ ಇದೆ ಅಂತ ಈಗಾಗಲೇ ನೀವು ಗೆಸ್​ ಮಾಡಿರ್ತೀರ ಅದನ್ನ ಡೀಟೇಲಾಗಿ ನೋಡಿ.

ಪ್ರಮೋದ್ ಎಂಬಾತ ಸೈಟ್ ಖರೀದಿಸಲು 94 ಲಕ್ಷ ಕೂಡಿಸಿಟ್ಟಿದ್ದ. ಅದನ್ನ ಎಣಿಸಲು ಸ್ನೇಹಿತನ ಅಂಗಡಿಗೆ ಹೊರಟಿದ್ದ. ಜೊತೆಗೆ ಕೆಲ ದಾಖಲೆಗಳನ್ನೂ ಹೊತ್ಕೊಂಡು ಪ್ರಮೋದ್​ ವಕೀಲರ ಕಚೇರಿ ಕಡೆ ಹೊರಟಿದ್ರು. ಬ್ಯಾಗ್ನಲ್ಲಿ ದಾಖಲೆ ಹಾಗೂ ಬಾಕ್ಸ್​​ನಲ್ಲಿ ಹಣ ತಗೊಂಡು ಹೊರಟಿದ್ರು. ಕಾರ್​ ಬಳಿ ಬಂದು ಡೋರ್​ ಓಪನ್​ ಮಾಡೋಕೆ ಮುಂದಾಗ್ತಾರೆ. ಆಗ ಅಪರಿಚಿತ ಆ್ಯಕ್ಟೀವಾ ಬೈಕ್ ಮೇಲೆ ಬಾಕ್ಸ್​ ಇಡ್ತಾರೆ. ಕಾರ್​ ಒಳಗೆ ಕೂತ್ಮೇಲೆ ಹಣ ಮರೆತು ಅಲ್ಲಿಂತ ಹೊರಟು ಹೋಗ್ತಾರೆ. ಪ್ರಮೋದ್​ನ ಮರೆವು ಇಲ್ಲಿ ವರುಣ್​ಗೆ ಅದೃಷ್ಟವಾಗಿ ಪರಿಣಮಿಸುತ್ತೆ. ಸೆಕೆಂಡ್​ ಗ್ಯಾಪಲ್ಲಿ ಲಕ್ಷಾಧೀಶ್ವರನಾಗ್ತಾನೆ.

ಬಯಸದೇ ಬಂದ ಭಾಗ್ಯ!

ಬೈಕ್ ಬಳಿ ಬಂದು ಬಾಕ್ಸ್​​ ತೆಗೆದು ನೋಡಿದ ವರುಣ್​ಗೆ ಶಾಕ್​ ಆಗಿತ್ತು. ಕ್ರೆಡಿಟ್ ಕಾರ್ಡ್ ಡಿಪಾರ್ಟ್​​ಮೆಂಟ್​​ನಲ್ಲಿ ಕೆಲಸ ಮಾಡೊ ವರುಣ್​​ಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದು ಹಣದ ಸಮೇತ ಸ್ಥಳದಿಂದ ವರುಣ್ ಎಸ್ಕೇಪ್ ಆಗಿದ್ದಾನೆ. ಶ್ರೀನಗರದಲ್ಲಿರುವ ಮನೆಯಲ್ಲಿ ಯಾರಿಗೂ ಕಾಣದಂತೆ ಹಣವನ್ನ ಬಚ್ಚಿಟ್ಟಿದ್ದ. ಎಂದೂ ಕಾಣದ ₹94 ಲಕ್ಷ ಹಣವನ್ನ ಅವತ್ತೇ ಮೊದಲು ನೊಡಿದ್ದ ವರುಣ್​ ಏನು ಮಾಡೋದು ಅಂತ ಗೊತ್ತಿಲ್ದೇ 5 ದಿನ ಕಳೆದಿದ್ದ. ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಗೂ ಪ್ಲಾನ್ ಮಾಡ್ಕೊಂಡಿದ್ದ . ಆದ್ರೆ ಅಷ್ಟರಲ್ಲಿ ಪೊಲೀಸರು ಮನೆಗೆ ಬಂದು ಹಣ ತಗೊಂಡು ಹೋಗಿದ್ದಾರೆ.

ಈ ಕಡೆ ಹಣ ಕಾಣದೇ ಇರೋದ್ರಿಂದ ಗಾಬರಿಯಾಗಿದ್ದ ಪ್ರಮೋದ್​ ಚಂದ್ರಾಲೇಔಟ್​ ಪೊಲೀಸ್​ ಠಾಣೆಯಲ್ಲಿ ಕಳ್ಳತನ ಆರೋಪ ಮಾಡಿ ದೂರು ದಾಖಲಿಸಿದ್ದ. ಅದ್ರಂತೆ ಪೊಲೀಸರು ಸಿಸಿಟಿವಿ ಆಧರಿಸಿ ನೂರು ದಿನಗಳ ಕಾರ್ಯಾಚರಣೆ ಬಳಿಕ ವರುಣ್​ನನ್ನ ಬಂಧಿಸಿದ್ದಾರೆ. ಆತನಿಂದ 94 ಲಕ್ಷ ಹಣವನ್ನೂ ರಿಕವರಿ ಮಾಡಿದ್ದಾರೆ. ಅದೇನೇ ಇರ್ಲಿ ಹಣ ಸಿಕ್ಕಾಗಲೇ ಅದನ್ನ ಪೊಲೀಸರಿಗೆ ತಂದು ಕೊಟ್ಟಿದ್ರೆ ವರುಣ್​​ಗೆ ಕಳ್ಳ ಅನ್ನೋ ಪಟ್ಟ ಬರ್ತಿರ್ಲಿಲ್ಲ. ಬಯಸದೇ ಬಂದ ಭಾಗ್ಯ ಅಂತ ಮನೆಗೆ ತಂದ ಹಣ ವರುಣ್​ ಬಾಳಲ್ಲಿ ಕಪ್ಪು ಚುಕ್ಕೆಯಾಗಿದ್ದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರಿಗೈಲಿ ಬಂದ ಯುವಕನಿಗೆ ಸಿಕ್ತು ಬರೋಬ್ಬರಿ 94 ಲಕ್ಷ ರೂ.. ಆಮೇಲೇನಾಯ್ತು? ಸ್ಟೋರಿ ಓದಿ!

https://newsfirstlive.com/wp-content/uploads/2023/09/94-Lakhs.jpg

Load More