ಒಂದಲ್ಲ, ಎರಡಲ್ಲ, ಒಂಭತ್ತು ಬಾರಿ ಕಚ್ಚಿದ ಸರ್ಪ
ವಿಷದ ಹಾವಿನ ಮುಂದೆ ಸಾವನ್ನೇ ಗೆದ್ದು ಬಂದ ಮಹಾಧೀರನೀತ
ಚಿತ್ತಾಪುರ ತಾಲ್ಲೂಕಿನ ಕಲಕರ್ಟಿ ಗ್ರಾಮದಲ್ಲಿ ನಡೆದ ಘಟನೆ
ಕಲಬುರಗಿ: 9ನೇ ತರಗತಿ ವಿದ್ಯಾರ್ಥಿಗೆ ಸರ್ಪವೊಂದು 9 ಬಾರಿ ಕಚ್ಚಿದ ಘಟನೆ ಚಿತ್ತಾಪುರ ತಾಲ್ಲೂಕಿನ ಹಲಕರ್ಚಿ ಗ್ರಾಮದಲ್ಲಿ ನಡೆದಿದೆ. ಅಚ್ಚರಿಯ ಸಂಗತಿ ಎಂದರೆ ಅಷ್ಟು ಬಾರಿ ಹಾವಿನಿಂದ ಕಚ್ಚಿಸಿಕೊಂಡರು ಬಾಲಕ ಸಾವನ್ನೇ ಗೆದ್ದಿದ್ದಾನೆ.
ಪ್ರಜ್ವಲ್ ಸರ್ಪದಿಂದ ಕಚ್ಚಿಸಿಕೊಂಡು ಅಚ್ಚರಿಗೆ ಕಾರಣನಾದ ಬಾಲಕ. ಈತ ಚಿತ್ತಾಪುರ ತಾಲ್ಲೂಕಿನ ಕಲಕರ್ಟಿ ಗ್ರಾಮದವನಾಗಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಜುಲೈ 3 ರಂದು ಮೊದಲ ಬಾರಿ ಪ್ರಜ್ವಲ್ ಗೆ ಗೋಧಿ ಬಣ್ಣದ ಹಾವು ಕಚ್ಚಿದೆ. ಹಲಕರ್ಟಿ ಗ್ರಾಮದಲ್ಲಿ ಮನೆ ಹಿಂಭಾಗ ಮೂತ್ರ ವಿಸರ್ಜನೆಗೆ ತೆರಳಿದಾಗ ಸರ್ಪ ಕಡಿದಿದೆ. ಸರ್ಪದ ಬಾಲದ ಮೇಲೆ ತುಳಿದಿದ್ದ ಕಾರಣ ಪ್ರಥಮ ಬಾರಿಗೆ ಹಾವು ಪ್ರಜ್ವಲ್ಗೆ ಕಚ್ಚಿದೆ. ತಕ್ಷಣ ಆತನನ್ನು ವಾಡಿ ಆಸ್ಪತ್ರೆ ಕರೆದೊಯ್ದು ಪೋಷಕರು ಆತನಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಆಟವಾಡುತ್ತಿದ್ದಾಗ ಕಚ್ಚಿದ ಸರ್ಪ
ಚಿಕಿತ್ಸೆ ಪಡೆದ ಮೂರು ದಿನ ಬಳಿಕ ಅಂದ್ರೆ ಜುಲೈ 6 ರಂದು ಮತ್ತೆ ಪ್ರಜ್ವಲ್ಗೆ ಹಾವು ಕಚ್ಚಿದೆ. ಮನೆ ಹೊರಗಡೆ ಆಟ ಆಡುತ್ತಿದ್ದಾಗ ಹಾವು ಕಡಿತಕ್ಕೊಳಗಾಗಿದ್ದಾನೆ. ಇಷ್ಟಾದ ಬಳಿಕ ಮಗದೊಮ್ಮೆ ಪ್ರಜ್ವಲ್ಗೆ ಜುಲೈ 12, 22 ರಂದು ಸರ್ಪ ಕಚ್ಚಿದೆ. ಇಷ್ಟಾದ ಬಳಿಕ ಆಗಸ್ಟ್ 4, ಆಗಸ್ಟ್ 27 ರಂದು ಮನೆಯಲ್ಲಿ ಮಲಗಿದಾಗ ಹಾವು ಕಚ್ಚಿದೆ. ಹೀಗೆ ಎರಡು ತಿಂಗಳ ಅಂತರದಲ್ಲಿ 9 ಬಾರಿ ವಿಷ ಸರ್ಪದ ಕಡಿತಕ್ಕೆ ಪ್ರಜ್ವಲ್ ಒಳಗಾಗಿದ್ದಾನೆ. ಹೀಗೆ ಪದೇ ಪದೇ ಹಾವು ಕಡಿದರೂ ಆತ ಮಾತ್ರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗೋಧಿ ಬಣ್ಣದ ಸರ್ಪ
ಇನ್ನುಆತನ ಕುಟುಂಬಸ್ಥರು ಹಾವಿನ ಕಾಟದಿಂದ ಬೇಸತ್ತಿದ್ದಾರೆ. ಕೊನೆಗೆ ದೈವದ ಮೊರೆ ಹೋಗಿ ತಾಯಮ್ಮ ದೇವಿ ದೇವಸ್ಥಾನ ಕಟ್ಟಿಸಲು ಮುಂದಾಗುತ್ತಾರೆ. ನಾಗರ ಪಂಚಮಿ ಹಬ್ಬದಂದು ಜಮೀನಿನಲ್ಲಿ ತಾಯಮ್ಮ ದೇವಿ ದೇವಸ್ಥಾನ ಕಟ್ಟುತ್ತಾರೆ. ಇಷ್ಟಾದರೂ ಗೋಧಿ ಬಣ್ಣದ ಸರ್ಪ ಮಾತ್ರ ಪ್ರಜ್ವಲ್ ಮತ್ತು ಆತನ ಕುಟುಂಬವನ್ನುಬೆನ್ನು ಬಿಡದೆ ಕಾಡಿದೆ. ಸದ್ಯ ಪ್ರಜ್ವಲ್ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ