newsfirstkannada.com

BBK11: ಬರ್ತಿದೆ ಬಿಗ್​ ರಿಯಾಲಿಟಿ ಶೋ; ಈ ಬಾರಿಯ ಬಿಗ್​ಬಾಸ್​ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?

Share :

Published July 19, 2024 at 6:26am

    ಸೀಸನ್​ 10ರ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್​ 11ರ ಹೊಸ ಅಧ್ಯಾಯ

    ಆಗಸ್ಟ್​ ಶುರುವಾಗುತ್ತಿದ್ದಂತೆ ವೀಕ್ಷಕರಲ್ಲಿ ಶುರುವಾಯ್ತು ಬಿಗ್​ಬಾಸ್​ ಫೀವರ್

    ಈ ಬಾರಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದೆಯಂತೆ ಬಿಗ್​ಬಾಸ್

ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಅಂತಾನೇ ಬಿರುದು ಪಡೆದಿರೋ ಶೋ ಬಿಗ್​ಬಾಸ್​. ದೇಶದ ನಾನಾ ಭಾಷೆಗಳಲ್ಲಿ ಬಿಗ್​ಬಾಸ್​ ಶೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ಸೀಸನ್​ 10ರ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಸೀಸನ್​ 11ಗೆ ಹೊಸ ರೀತಿಯಲ್ಲಿ ತಂಡ ಪ್ಲ್ಯಾನ್​ ಮಾಡ್ತಿದಿಯಂತೆ. ಸಾಕಷ್ಟು ವಿಶೇಷತೆಗಳನ್ನ ಹೊತ್ತು ತರೋದಕ್ಕೆ ಹುಮ್ಮಸ್ಸಿನಿಂದ ಸಜ್ಜಾಗ್ತಿದೆ ಸೀಸನ್​ ಹನ್ನೊಂದು.

ಇದನ್ನೂ ಓದಿ: ರೀಲ್ಸ್​ ಹುಚ್ಚು.. ವಿಡಿಯೋ ಮಾಡಲು ಹೋಗಿ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು

ಇದನ್ನೂ ಓದಿ: ವೀಕ್ಷಕರಿಗೆ ಗುಡ್​ನ್ಯೂಸ್​​.. ​ಬಿಗ್ ಬಾಸ್ ಕನ್ನಡ ಸೀಸನ್ 11 ಶುರು ಯಾವಾಗ?

ಆಗಸ್ಟ್​ ಶುರುವಾಗುತ್ತಿದ್ದ ಹಾಗೇ ಬಿಗ್​ಬಾಸ್​ ಫೀವರ್​ ಜೋರಾಗುತ್ತೆ. ಇದಕ್ಕೆ ಕಾರಣ ಪ್ರತಿ ವರ್ಷ ಬಿಗ್​ಬಾಸ್​ ಸೀಸನ್​ 11 ಅಕ್ಟೋಬರ್​ ಮೊದಲ ವಾರದಲ್ಲಿ ಲಾಂಚ್​ ಆಗುತ್ತೆ. ಹೀಗಾಗಿ ಒಂದೆರಡು ತಿಂಗಳು ಮುಂಚೆಯಿಂದನೇ ಶೋ ಬಗ್ಗೆ ಕುತೂಹಲದ ಕಣ್ಣು ಅರಳೋದು ಸಹಜ. ಈ ಬಾರಿ ಕೂಡ ಗುಸುಗುಸು ಶುರುವಾಗಿದೆ. ಮೂಲಗಳ ಪ್ರಕಾರ ಬಿಗ್​ಬಾಸ್​ಗೆ ತಯಾರಿ ನಡಿತಿರೋದು ಸತ್ಯ. ಗಿಚ್ಚಿಗಿಲಿಗಿಲಿ ಸೀಸನ್​ 3 ಕೂಡ ಶುರುವಾಗಿ ಅದಾಗಲೇ ನಾಲ್ಕು ತಿಂಗಳು ಕಳೆದಿವೆ. ಸದ್ಯದಲ್ಲೇ ಗ್ರ್ಯಾಂಡ್​ ಫಿನಾಲೆಗೆ ಸಜ್ಜಾಗ್ತಿದಿಯಂತೆ. ಗಿಚ್ಚಿಗಿಲಿಗಿಲಿ ಮುಕ್ತಾಯದ ನಂತರ ಬಿಗ್​ಬಾಸ್​ ಶುರುವಾಗಲಿದೆ. ಕಳೆದ ಬಾರಿ ಇನೋವೆಟಿವ್​ ಫಿಲ್ಮ್​ ಸಿಟಿಯಿಂದ ಬಿಗ್​ಬಾಸ್​ ಮನೆಯನ್ನು ದೊಡ್ಡ ಆಲದ ಮರದ ಹತ್ತಿರ ಶಿಫ್ಟ್​ ಮಾಡಲಾಗಿತ್ತು.

ಸೀಸನ್​ 10 ಯಾವ ಮಟ್ಟಿಗೆ ಯಶಸ್ಸನ್ನ ಕಂಡಿತು, ಎಷ್ಟು ವಿವಾದಗಳನ್ನ ಮೈ ಮೇಲೆ ಎಳಿದುಕೊಂಡಿತು ಅನ್ನೋದು ಈಗ ಇತಿಹಾಸ. ಇಂದಿಗೂ ಅದೇ ವಿಚಾರಗಳು ಚರ್ಚೆ ಆಗ್ತಾನೆ ಇರ್ತಾವೆ. ಈಗ ಸೀಸನ್​ 11ರ ಹೊಸ ಅಧ್ಯಾಯ ಕೂಡ ಅದೇ ಮನೆಯಲ್ಲಿ ಶುರುವಾಗಲಿದೆಯಂತೆ. ಹಲವು ಬದಲಾವಣೆಗಳನ್ನು ಮಾಡಿಕೊಳ್ಳಲಿದೆಯಂತೆ ಬಿಗ್​ಬಾಸ್​ ತಂಡ. ಈಗಾಗಲೇ ಬಿಗ್​ಬಾಸ್​ ಸಖತ್​ ತಯಾರಿ ಆರಂಭಿಸಿದ್ದು, ಸ್ಪರ್ಧಿಗಳ ಲಿಸ್ಟ್​  ರೆಡಿ​ ಆಗ್ತಿದೆಯಂತೆ. ಈ ಬಾರಿಯೂ ಕಿಚ್ಚ ಸುದೀಪ್​ ಅವರ ಹೊಸ್ಟಿಂಗ್​​ ಕೂಡ ಮುಂದುವರೆಯಲಿದೆ. ಕಿಚ್ಚನ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರೋದಕ್ಕೆ ರೆಡಿಯಾಗ್ತಿದ್ದು, ಸಿನಿಮಾ ಶೂಟಿಂಗ್​ನಿಂದ ಕೊಂಚ ರಿಲ್ಯಾಕ್ಸ್ ಆದ ತಕ್ಷಣ ಕಿಚ್ಚನ ಜೊತೆ ಬಿಗ್​ ಬಾಸ್​ ಕತೆ ವೀಕ್ಷಕರ ಮುಂದೆ ಬರಲಿದೆಯಂತೆ. ಒಟ್ಟಿನಲ್ಲಿ ಬಿಗ್​ಬಾಸ್​ ಬಿಗ್​ ಬ್ಯಾಂಗ್​ ಮಾಡೋದ್ರಲ್ಲಂತೂ ಡೌಟ್​ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬರ್ತಿದೆ ಬಿಗ್​ ರಿಯಾಲಿಟಿ ಶೋ; ಈ ಬಾರಿಯ ಬಿಗ್​ಬಾಸ್​ನಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ?

https://newsfirstlive.com/wp-content/uploads/2023/10/bigg-boss-33.jpg

Load More