newsfirstkannada.com

ಮಾಡ್ರನ್ ಕ್ರಿಕೆಟ್​ನಲ್ಲಿ ಸೂರ್ಯ ಯಾಕೆ ಡೇಂಜರಸ್ ಗೊತ್ತಾ? ದಂಡಂ ದಶಗುಣಂ ಕತೆ..!

Share :

Published July 26, 2024 at 8:47am

    ಸೂರ್ಯಕುಮಾರ್​​ ಅಂಗಳಕ್ಕಿಳಿದ್ರೆ ರನ್​​​​​​​ ಸುನಾಮಿ

    ದಂಡಂ ದಶಗುಣಂ ಆಟಕ್ಕೆ ಎಲ್ಲರೂ ಕ್ಲೀನ್​​​ಬೋಲ್ಡ್​​​..!

    ನೀರು ಕುಡಿದಷ್ಟೇ ಸಲೀಸಾಗಿ ಬಾರಿಸ್ತಾರೆ ಬೌಂಡರಿ..!

ಟಿ20 ಕ್ರಿಕೆಟ್​​ ಅಂದ್ರೆನೇ ಹೊಡಿಬಡಿ ಆಟ. ಇಲ್ಲೇನಿದ್ರೂ ಬ್ಯಾಟ್ ಸದ್ದು ಮಾಡಿದ್ರೇನೆ ಕಿಮ್ಮತ್ತು. ಆ ಗತ್ತು ಇರೋ ಆಟಗಾರ ಅಂದ್ರೆ ಸೂರ್ಯಕುಮಾರ್ ಯಾದವ್​​​. ಈ ಡಿಸ್ಟ್ರಕ್ಟಿವ್ ಬ್ಯಾಟರ್ ಆನ್​​ ಫೀಲ್ಡ್​ನಲ್ಲಿ ಎಬ್ಬಿಸ್ತಿರೋ ಹಲ್​​ಚಲ್​​​​ ಜೋರಾಗಿರುತ್ತೆ.

ಸೂರ್ಯ ನೋಡೋಕೆ ಮಾತ್ರ ಸೈಲೆಂಟ್​​. ಆದ್ರೆ ಆಟ ಮಾತ್ರ ಸಿಕ್ಕಾಪಟ್ಟೆ ವೈಲೆಂಟ್​. ದಂಡಂ ದಶಗುಣಂ ಆಟಕ್ಕೆ ಎತ್ತಿದ ಕೈ. ಮೈದಾನಕ್ಕೆ ಕಾಲಿಟ್ಟರೆ ಸಾಕು ರನ್ ಸುನಾಮಿ ಸೃಷ್ಟಿಸ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿಕೊಟ್ಟ ಮೂರೇ ವರ್ಷದಲ್ಲಿ ಟಿ20 ಕ್ರಿಕೆಟ್​​​​​ ಲೋಕವನ್ನ ಕಬ್ಜಾ ಮಾಡಿ, ಅಧಿಪತಿಯಾಗಿ ಮೆರೆದಾಡ್ತಿದ್ದಾರೆ. ಮೋಸ್ಟ್​ ಡೇಂಜರಸ್​ ಬ್ಯಾಟರ್ ಅನ್ನೋ ಹೆಗ್ಗಳಿಕೆ ಸಂಪಾದಿಸಿದ್ದಾರೆ.

ಮಾಡ್ರನ್​ ಕ್ರಿಕೆಟ್​ನ ವಿಧ್ವಂಸಕಾರಿ ಬ್ಯಾಟ್ಸ್​​ಮನ್​
ಟಿ20 ಕ್ರಿಕೆಟ್​ನಲ್ಲಿ ಸೂರ್ಯನ ಹೆಸರು ಹೇಳಿದ್ರೆ ಸಾಕು, ಬೌಲರ್​ಗಳು ಬೆಚ್ಚಿ ಬೀಳ್ತಾರೆ. ಆ ಮಟ್ಟಿಗೆ ವಿಧ್ವಂಸಕಾರಿ ಆಟದಿಂದ ಭಯ ಹುಟ್ಟಿಸಿದ್ದಾರೆ. ಇವರ ಬ್ಯಾಟ್​ನಿಂದ ಸಿಡಿಯುವ ಸಿಕ್ಸರ್​ಗಳಂತೂ ನಿಜಕ್ಕೂ ನಂಬಲು ಅಸಾಧ್ಯ. ಹಾಗೇಯೆ ಬೌಂಡರಿಗಳನ್ನ ನೀರು ಕುಡಿದಷ್ಟೇ ಸುಲಭವಾಗಿ ಬಾರಿಸುವ ಪಂಟರ್​​ ಕೂಡ ಹೌದು. ಅದ್ಯಾವ ಮಟ್ಟಿಗೆ ಅಂದರೆ ಬೌಂಡರಿ ಗಳಿಸೋದ್ರಲ್ಲಿ ಸೂರ್ಯ ಮುಂದೆ ಇನ್ನೊಬ್ಬ ಆಟಗಾರನಿಲ್ಲ.

ಇದನ್ನೂ ಓದಿ:ಅರ್ಧ ಸುಟ್ಟ ಪೇಪರ್ ತುಂಡು ನೀಡಿತು ಸುಳಿವು.. NEET ಅಕ್ರಮದ ರಹಸ್ಯ ಬಯಲು ಮಾಡಿದ ಸಿಬಿಐ..!

ಟಿ20 ಕ್ರಿಕೆಟ್​​​​ನಲ್ಲಿ ಸೂರ್ಯ ಬೌಂಡರಿ ಸ್ಪೆಷಲಿಸ್ಟ್​ ಅಂದರೂ ತಪ್ಪಲ್ಲ. ಯಾಕಂದ್ರೆ ನಿರ್ದಯವಾಗಿ ಬೌಲರ್​ಗಳನ್ನ ದಂಡಿಸುವ ಸ್ಕೈ, ಪ್ರತಿ ಎಸೆತಗಳನ್ನ ಬೌಂಡರಿ ಗಳಿಸಲು ಟಾರ್ಗೆಟ್ ಮಾಡ್ತಾರೆ. ಬೌಲರ್ಸ್​​ಗೆ ಸೆಟಲ್​ ಆಗಲು ಟೈಮ್ ಕೊಡೋದೇ ಇಲ್ಲ. ಬೌಂಡರಿಗಳ ಸುರಿಮಳೆ ಸುರಿಸ್ತಾರೆ. ಈ ವಿಚಾರದಲ್ಲಿ ಡಿಸ್ಟ್ರಕ್ಟಿವ್​ ಬ್ಯಾಟರ್​​ನನ್ನ ಮೀರಿಸೋರೇ ಇಲ್ಲ.

ಬೌಂಡರಿ ಕಿಂಗ್​​..!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ 65 ಇನ್ನಿಂಗ್ಸ್ ಆಡಿರೋ ಸೂರ್ಯ ಕಮ್ಮಿ ಎಸೆತದಲ್ಲಿ ಬೌಂಡ್ರಿ ಗಳಿಸೋದ್ರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2340 ರನ್ ಗಳಿಸಿರೋ ಅವರು ಪ್ರತಿ 4.1 ಬಾಲ್​​ಗೆ ಬೌಂಡರಿ ಗಳಿಸಿದ್ದಾರೆ. 47 ಇನ್ನಿಂಗ್ಸ್​ಗಳಿಂದ 1141 ರನ್ ಗಳಿಸಿದ ಫಿನ್ ಅಲೇನ್ ಕೂಡ ಸರಾಸರಿ 4.1 ಬಾಲ್​ಗೆ ಬೌಂಡರಿ ಸಿಡಿಸಿದ್ದಾರೆ. ವೆಸ್ಟ್​ ಇಂಡೀಸ್​​ನ ಆಂಡ್ರೆ ರಸೆಲ್ 71 ಇನ್ನಿಂಗ್ಸ್​​​​​ ಆಟವಾಡಿ 1033 ರನ್ ಬಾರಿಸಿದ್ದು, ಪ್ರತಿ 4.3 ಎಸೆತಕ್ಕೆ ಬೌಂಡರಿ ಗಳಿಸಿದ್ದಾರೆ. ಎವಿನ್ ಲೆವೆಸ್​​ 52 ಇನ್ನಿಂಗ್ಸ್​ಗಳಿಂದ 1465 ರನ್ ಗಳಿಸಿದ್ದು 4.4 ಎಸೆತಕ್ಕೊಂದು ಬೌಂಡರಿ ಬಾರಿಸಿದ್ದಾರೆ. ಕಾಲಿನ್​ ಮುನ್ರೋ ​​62 ಇನ್ನಿಂಗ್ಸ್ ಆಡಿದ್ದು, 1724 ರನ್ ಗಳಿಸಿದ್ದಾರೆ. ಪ್ರತಿ 4.6 ಎಸೆತಕ್ಕೊಂದು ಬೌಂಡರಿ ಸಿಡಿಸಿದ್ದಾರೆ.

175.44ರ ಭಯಂಕರ ಸ್ಟ್ರೈಕ್​ರೇಟ್​​​​..!
ಸೂರ್ಯ ಟಿ20 ಕ್ರಿಕೆಟ್​ನ ಬೆಸ್ಟ್​​ ಸ್ಟ್ರೈಕ್​ರೇಟ್​​​​ ಬ್ಯಾಟ್ಸ್​​ಮನ್​​. ಇದೇ ವಿಚಾರಕ್ಕೆ ಸ್ಕೈ ಹೆಚ್ಚು ಪ್ರಖ್ಯಾತಿ ಗಳಿಸಿದ್ದು, 167.74ರ ಭಯಾನಕ ಸ್ಟ್ರೈಕ್​​ರೇಟ್ ಕಾಯ್ದುಕೊಂಡಿದ್ದಾರೆ. ಇದು ಅಂತಾರಾಷ್ಟ್ರೀಯ ಟಿ20 ಇತಿಹಾಸದಲ್ಲಿ 3ನೇ ಗರಿಷ್ಠ ಸ್ಟ್ರೈಕ್​ರೇಟ್ ಆಗಿದೆ. ಬಿಲಾಲ್​​​ ಜಲ್ಮಿ 176.01 ಹಾಗೂ ಕೆಜಿ ಸ್ಟ್ಯಾಂಗೋ 175.44 ಹೊಂದಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಸದ್ಯ ಅತ್ಯಾದ್ಭುತ ಫಾರ್ಮ್​ನಲ್ಲಿರೋ ಸೂರ್ಯ, ಇವರಿಬ್ಬರನ್ನ ಹಿಂದಿಕ್ಕಿ, ಸ್ಕೈಕ್​ರೇಟ್​​​​ ಕಾ ಕಿಂಗ್ ಅನ್ನಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

ನಿಬ್ಬೆರಗಾಗಿಸೋ ಸ್ಟ್ರೈಕ್​​​ರೇಟ್​ ಹೊಂದಿರೋ ಸೂರ್ಯಕುಮಾರ್, ಬೌಂಡರಿ ಗಳಿಸೋದ್ರಲ್ಲಿ ಎಲ್ಲರನ್ನ ಚಕಿತಗೊಳಿಸಿದ್ದಾರೆ. ಆಡಿದ 65 ಇನ್ನಿಂಗ್ಸ್​ಗಳಲ್ಲೇ ಈಗಾಗ್ಲೇ 207 ಬೌಂಡರಿ ಸಿಡಿಸಿದ್ದಾರೆ. ಆ ಮೂಲಕ ತಾನೋರ್ವ ಡೇಂಜರಸ್​ ಬ್ಯಾಟರ್ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಅವರ ವೀರಾವೇಶ, ಸಿಕ್ಸರ್​​-ಬೌಂಡರಿಗಳ ಮೊರೆತ ಲಂಕಾ ಪ್ರವಾಸದಲ್ಲೂ ಮುಂದುವರೆಯೋದು ಪಕ್ಕಾ.

ಇದನ್ನೂ ಓದಿ:ಒಬ್ಬಂಟಿಯಾಗಿ ಓಡಾಡೋ ಹೆಣ್ಮಕ್ಕಳೇ ಹುಷಾರ್.. ಬೆಂಗಳೂರಲ್ಲಿ ಓರ್ವ ಯುವತಿಗೆ ಏನಾಯ್ತು ಅಂದರೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಾಡ್ರನ್ ಕ್ರಿಕೆಟ್​ನಲ್ಲಿ ಸೂರ್ಯ ಯಾಕೆ ಡೇಂಜರಸ್ ಗೊತ್ತಾ? ದಂಡಂ ದಶಗುಣಂ ಕತೆ..!

https://newsfirstlive.com/wp-content/uploads/2024/06/Suryakumar-Yadav1.jpg

Load More