newsfirstkannada.com

23 ಎಸೆತದಲ್ಲಿ 20 ರನ್​​.. ಕೊನೆ 10 ಬಾಲ್​ನಲ್ಲಿ ಪಂತ್ ಬೆಂಕಿ, ಬಿರುಗಾಳಿ..!

Share :

Published July 28, 2024 at 10:02am

    ಸಾಲಿಡ್ ಓಪನಿಂಗ್​ ನೀಡಿದ ಜೈಸ್ವಾಲ್​​​​​​​-ಶುಭ್​ಮನ್

    ಸೂರ್ಯನ ಆರ್ಭಟಕ್ಕೆ ಲಂಕಾ ಪಡೆ ತತ್ತರಿಸಿ ಹೋಯ್ತು

    ಲಂಕಾ ವಿರುದ್ಧ ಭಾರತ ತಂಡಕ್ಕೆ 43 ರನ್​ಗಳ ಜಯ

ಪಲ್ಲೆಕಲೆಯಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು, ಪವರ್ ಫುಲ್ ಬ್ಯಾಟಿಂಗ್ ಪರ್ಫಾಮೆನ್ಸ್ ನೀಡಿದ್ರು. ಟಾಪ್ ಆರ್ಡರ್​ ಟಾಪ್​ ಕ್ಲಾಸ್ ಇನ್ನಿಂಗ್ಸ್​ ಕಟ್ಟಿದ್ರೆ. ಮಿಡಲ್ ಹಾರ್ಡರ್​ನಲ್ಲಿ ಪಂತ್, ಸಮಯೋಚಿತನ ಇನ್ನಿಂಗ್ಸ್​ ಕಟ್ಟಿ ಗಮನ ಸೆಳೆದರು. ಅದ್ರಲ್ಲೂ ಕ್ಯಾಪ್ಟನ್ ಸೂರ್ಯನ ಸ್ಫೋಟಕ ಬ್ಯಾಟಿಂಗ್​​​ಗೆ ಲಂಕಾ ಬೌಲರ್​ಗಳ ಆಕ್ಷರಶಃ ನಲುಗಿ ಹೋದರು.

ಟಾಸ್​ ಸೋತ ಟೀಮ್ ಇಂಡಿಯಾಗೆ ಲಂಕಾ ಬ್ಯಾಟಿಂಗ್​ಗೆ ಆಹ್ವಾನಿಸಿತು. ಇದರಂತೆ ಟೀಮ್ ಇಂಡಿಯಾ ಪರ ಬ್ಯಾಟಿಂಗ್ ಆರಂಭಿಸಿದ ಜೈಸ್ವಾಲ್, ಶುಭ್​ಮನ್​ ಗಿಲ್, ಮೊದಲ ಎಸೆತದಿಂದಲೇ ಹೊಡಿಬಡಿ ಆಟಕ್ಕೆ ಕೈಹಾಕಿದರು. ಬೌಂಡರಿಯೊಂದಿಗೆ ಅಕೌಂಟ್ ಓಪನ್ ಮಾಡಿದ ಜೈಸ್ವಾಲ್, ಲಂಕಾ ಬೌಲರ್​ಗಳನ್ನ ಮನ ಬಂದಂತೆ ದಂಡಿಸಿದ್ರು.

ಇದನ್ನೂ ಓದಿ:ಬೂಮ್ರಾಗೆ ಬಿಗ್ ಶಾಕ್.. ಟೆಸ್ಟ್​ ತಂಡದ ಉಪನಾಯಕನ ಪಟ್ಟದಿಂದ ಕೊಕ್..!

ಜೈಸ್ವಾಲ್ ಹೊಡಿಬಡಿ ಆಟದಿಂದ ಫ್ಯಾನ್ಸ್​ಗೆ ಸಖತ್​ ಎಂಟರ್​​​ಟೈನ್ಮೆಂಟ್ ನೀಡಿದ್ರೆ, ಮತ್ತೊಂದು ತುದಿಯಲ್ಲಿ ಶುಭ್​ಮನ್, ಕ್ಲಾಸ್ ಬ್ಯಾಟಿಂಗ್​ನೊಂದಿಗೆ ಲಂಕಾ ಬೌಲಿಂಗ್ ದಾಳಿಯನ್ನ ಉಡೀಸ್ ಮಾಡಿದ್ರು. ನಾನಾ.. ನೀನಾ ಎಂಬಂತೆ ರನ್ ಗಳಿಸಿದ ಈ ಜೋಡಿ, ಪವರ್​​​​​​​​​​​​​​​​​​​​​​​​​​​ ಪ್ಲೇನಲ್ಲೇ ಸಿಡಿಲಬ್ಬರದ 74 ರನ್ ಸಿಡಿಸಿ ಸಾಲಿಡ್ ಓಪನಿಂಗ್ ನೀಡಿದ್ರು.

ಗಿಲ್ 34 ರನ್​​.. ಜೈಸ್ವಾಲ್ 40ಕ್ಕೆ ಔಟ್..!
ಪವರ್​ ಪ್ಲೇನಲ್ಲಿ ಪವರ್ ಫುಲ್ ಆಟವಾಡಿದ ಈ ಜೋಡಿ, ಬ್ಯಾಕ್ ಟು ಬ್ಯಾಕ್​ ವಿಕೆಟ್ ಒಪ್ಪಿಸಿದ್ರು. 16 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​ ಒಳಗೊಂಡ 34 ರನ್ ಸಿಡಿಸಿದ್ದ ಶುಭ್​ಮನ್, ಪವರ್ ಪ್ಲೇನ ಕೊನೆ ಎಸೆತದಲ್ಲಿ ಬಾರೀ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿ ನಿರ್ಗಮಿಸಿದರು. ಗಿಲ್ ವಿಕೆಟ್ ಪತನದ ಬೆನ್ನಲ್ಲೇ 21 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ ಒಳಗೊಂಡ 40 ರನ್​ ಸಿಡಿಸಿದ್ದ ಯಶಸ್ವಿ ಜೈಸ್ವಾಲ್, ಹಸರಂಗ ಗೂಗ್ಲಿಗೆ ಜಡ್ಜ್​​ ಮಾಡುವಲ್ಲಿ ವಿಫಲರಾಗಿ ಸ್ಟಂಪ್​ ಔಟ್​ ಆಗಿ ನಿರಾಸೆ ಅನುಭವಿಸಿದ್ರು.

ಇದನ್ನೂ ಓದಿ:ಸ್ಟಾರ್​ ಬೌಲರ್ಸ್ ನಾಚುವಂತೆ ಬೌಲಿಂಗ್.. ಕೇವಲ 14 ಬಾಲ್​​ನಲ್ಲಿ ಲಂಕಾ ಪಡೆಯ ಬೆನ್ನೆಲುಬು ಮುರಿದ ಪರಾಗ್..!

ಸೂರ್ಯಗೆ ಅರ್ಧಶತಕದ ಸಂಭ್ರಮ
ಗಿಲ್, ಯಶಸ್ವಿ ಜೈಸ್ವಾಲ್ ವಿಕೆಟ್ ಪತನದ ಬಳಿಕ ನಡೆದಿದ್ದು ಸೂರ್ಯನ ಆಟ. ಸ್ಫೋಟಕ ಆಟವಾಡಿದ ಸೂರ್ಯುಕುಮಾರ್, ಪಂತ್​ ಜೊತೆ 3ನೇ ವಿಕೆಟ್​ಗೆ 76 ರನ್​ಗಳ ಜೊತೆಯಾಟವಾಡಿದರು. 22 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಸೂರ್ಯಕುಮಾರ್, 26 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​ ಒಳಗೊಂಡ 58 ರನ್​ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.

ಪಂತ್​ 23 ಎಸೆತಕ್ಕೆ 20 ರನ್​.. ಕೊನೆ 10 ಎಸೆತಕ್ಕೆ 29 ರನ್​..!
ಸೂರ್ಯ ಔಟಾಗಿದ್ದೇ ಲೋವರ್ ಆರ್ಡರ್ ಬ್ಯಾಟರ್​ಗಳ ಪರೇಡ್ ಶುರುವಾಯ್ತು. ಈ ವೇಳೆ ಬಿಗ್ ಟಾರ್ಗೆಟ್ ಸೆಟ್ ಮಾಡುವ ಹೊಣೆ ಹೇಗಲೇರಿಸಿಕೊಂಡ ರಿಷಭ್ ಪಂತ್​, ಸ್ಫೋಟಕ ಆಟಕ್ಕೆ ಕೈಹಾಕಿದರು. ಮೊದಲ 23 ಎಸೆತಗಳಲ್ಲಿ ಜಸ್ಟ್​ 20 ರನ್ ಗಳಿಸಿದ್ದ ಪಂತ್, ಕೊನೆ 10 ಎಸೆತಗಳಲ್ಲಿ 29 ರನ್ ಸಿಡಿಸಿದರು. ಅಂತಿಮವಾಗಿ 33 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಒಳಗೊಂಡ 49 ರನ್ ಸಿಡಿಸಿ ಔಟಾದರು.

ಪತಿರಣ ಪವರ್..
ಮೊದಲ ಓವರ್​ 13 ರನ್ ಚಚ್ಚಿಸಿಕೊಂಡಿದ್ದ ಪತಿರಣ, ತಾನೆಸೆದ ಕೊನೆ 3 ಓವರ್​​ಗಳಲ್ಲಿ ಅದ್ಬುತ ದಾಳಿ ಸಂಘಟಿಸಿದರು. ಪರಿಣಾಮ ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್ ವಿಕೆಟ್ ಬೇಟೆಯಾಡಿದರು. 4 ಓವರ್​ಗಳ ಕೋಟಾದಲ್ಲಿ 40 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಇನ್ನು ರಿಂಕು ಆಟ 1 ರನ್​​, ಅಕ್ಷರ್ 10 ರನ್ ಪರಿಣಾಮ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್​ಗಳ ಸ್ಪರ್ಧಾತ್ಮ ರನ್ ಕಲೆಹಾಕಿತು.

ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

23 ಎಸೆತದಲ್ಲಿ 20 ರನ್​​.. ಕೊನೆ 10 ಬಾಲ್​ನಲ್ಲಿ ಪಂತ್ ಬೆಂಕಿ, ಬಿರುಗಾಳಿ..!

https://newsfirstlive.com/wp-content/uploads/2024/07/PANT.jpg

Load More