newsfirstkannada.com

ನಿವೃತ್ತಿಯಿಂದ ಹಿಂದೆ ಸರಿದ ಕಾರ್ತಿಕ್; ‘ರಾಯಲ್ಸ್​’ ತಂಡ ಸೇರಿದ ಫಿನಿಶರ್.. ಕೊಟ್ರಲ್ಲ ಸಿಹಿ ಸುದ್ದಿ..!

Share :

Published August 6, 2024 at 2:41pm

Update August 6, 2024 at 2:55pm

    ಅಭಿಮಾನಿಗಳಿಗೆ ಗುಡ್​ನ್ಯೂಸ್, ಮತ್ತೆ ಬ್ಯಾಟ್ ಬೀಸಲಿದ್ದಾರೆ DK

    ದಿನೇಶ್ ಕಾರ್ತಿಕ್ ಯಾವ ಟೂರ್ನಿಯಲ್ಲಿ ಕ್ರಿಕೆಟ್ ಆಡಲಿದ್ದಾರೆ..?

    ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿರುವ ಕಾರ್ತಿಕ್

ದಿನೇಶ್ ಕಾರ್ತಿಕ್ ಕ್ರಿಕೆಟ್ ನಿವೃತ್ತಿಯಿಂದ ಹೊರ ಬರುತ್ತಿದ್ದು, ಮತ್ತೆ ಟಿ-20 ಪಂದ್ಯಗಳನ್ನು ಆಡಲು ನಿರ್ಧರಿಸಿದ್ದಾರೆ. 2024ರ ಐಪಿಎಲ್ ಟೂರ್ನಿಯು ನನ್ನ ಕ್ರಿಕೆಟ್ ಬದುಕಿನ ಕೊನೆಯ ಪಂದ್ಯಾವಳಿ ಎಂದು ದಿನೇಶ್ ಕಾರ್ತಿಕ್ ಘೋಷಣೆ ಮಾಡಿದ್ದರು.

ಅಂತೆಯೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಸೋತ ಬಳಿಕ ಆರ್​ಸಿಬಿಯಿಂದ ಕಾರ್ತಿಕ್​​ಗೆ ಬೀಳ್ಕೊಡುಗೆ ನೀಡಲಾಯಿತು. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನಿವೃತ್ತಿ ಬಗ್ಗೆ ಘೋಷಣೆ ಕೂಡ ಮಾಡಿದ್ದರು. ನಿವೃತ್ತಿ ಘೋಷಣೆ ಮಾಡಿದ ಕೆಲವೇ ತಿಂಗಳಲ್ಲಿ ಕಾರ್ತಿಕ್ ಮತ್ತೊಂದು ಬಿಗ್ ಅಪ್​ಡೇಟ್ಸ್​ ನೀಡಿದ್ದಾರೆ. ತಾವು ಮತ್ತೊಮ್ಮೆ ಪ್ಯಾಡ್ ಕಟ್ಟಿ, ಕೀಪಿಂಗ್ ಗ್ಲೌಸ್ ಹಿಡಿದು ಮೈದಾನಕ್ಕೆ ಇಳಿಯುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮ್ಯಾಕ್ಸ್​ವೆಲ್ ಒಬ್ಬರೇ ಅಲ್ಲ.. ಒಟ್ಟು 6 ವಿದೇಶಿ ಆಟಗಾರರಿಗೆ ಆರ್​ಸಿಬಿಯಿಂದ ಗೇಟ್​ಪಾಸ್..!

ವರದಿಗಳ ಪ್ರಕಾರ.. ದಿನೇಶ್ ಕಾರ್ತಿಕ್ ಮುಂಬರುವ SA20 ಕ್ರಿಕೆಟ್​ನಲ್ಲಿ ಬ್ಯಾಟ್​ ಬೀಸಲಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ದಿನೇಶ್ ಕಾರ್ತಿಕ್ ರಾಜಸ್ಥಾನ್ ರಾಯಲ್ಸ್​ನ ಸಹೋದರ ತಂಡ ಪಾರಲ್ ರಾಯಲ್ಸ್​ ಪರ ದಿನೇಶ್ ಕಾರ್ತಿಕ್ ಆಡಲಿದ್ದಾರೆ. ಜನವರಿ 9 ರಿಂದ SA20 ಟೂರ್ನಿ ಶುರುವಾಗಲಿದೆ.

ಈ ಮೂಲಕ SA20 ಟೂರ್ನಿಯಲ್ಲಿ ಆಡುತ್ತಿರುವ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕಾರ್ತಿಕ್ ಪಾತ್ರರಾಗಲಿದ್ದಾರೆ. ಅಂದ್ಹಾಗೆ ದಿನೇಶ್ ಕಾರ್ತಿಕ್, ಭಾರತದಲ್ಲಿ ನಡೆಯಲಿರುವ ಎಲ್ಲಾ ಮಾದರಿಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ವಿದೇಶಿ ಕ್ರಿಕೆಟ್ ಲೀಗ್​ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದ್ದಾರೆ. ಕಾರ್ತಿಕ್​​​ರಂತೆ ಟೀಂ ಇಂಡಿಯಾದ ಅನೇಕ ಮಾಜಿ ಆಟಗಾರರು ಇದೀಗ ವಿದೇಶಿ ಕ್ರಿಕೆಟ್​ ಲೀಗ್​​ನಲ್ಲಿ ಆಡುತ್ತಿದ್ದಾರೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು; ಮನೆಬಿಟ್ಟು ಹೋದ ಅಪ್ಪ ಇನ್ನೂ ಬರಲೇ ಇಲ್ಲ..

ಅಂಬಟಿ ರಾಯುಡು, ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಆಡುತ್ತಿದ್ದರೆ, ರಾಬಿನ್ ಉತ್ತಪ್ಪ, ಯುಸುಫ್ ಪಠಾಣ್ ದುಬೈ ಕ್ಯಾಪಿಟಲ್ಸ್ ಪರ ILT20 ಕ್ರಿಕೆಟ್ ಪಂದ್ಯ ಆಡ್ತಿದ್ದಾರೆ. ಇನ್ನು ಸುರೇಶ್ ರೈನಾ ಅಬುದುಬೈನ T10 ಟೂರ್ನಿಯಲ್ಲಿ ಆಡ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ನಿವೃತ್ತಿಯಿಂದ ಹಿಂದೆ ಸರಿದ ಕಾರ್ತಿಕ್; ‘ರಾಯಲ್ಸ್​’ ತಂಡ ಸೇರಿದ ಫಿನಿಶರ್.. ಕೊಟ್ರಲ್ಲ ಸಿಹಿ ಸುದ್ದಿ..!

https://newsfirstlive.com/wp-content/uploads/2024/08/DINESH-KARTHIK.jpg

Load More