newsfirstkannada.com

ಟೀಮ್​ ಇಂಡಿಯಾ ಮೂವರು ಸ್ಟಾರ್​ ಆಟಗಾರರಿಗೆ ಬಿಗ್​ ಶಾಕ್​​.. 3ನೇ ಏಕದಿನ ಪಂದ್ಯದಿಂದ ಔಟ್​​!

Share :

Published August 6, 2024 at 4:26pm

    2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸೋಲು

    ಭಾರತ ತಂಡದ ಸೋಲಿಗೆ ಈ ಮೂವರು ಬ್ಯಾಟರ್ಸ್​ ಕಾರಣ..!

    3ನೇ ಏಕದಿನ ಪಂದ್ಯದಿಂದ ಈ ಮೂವರಿಗೆ ಗೇಟ್​ಪಾಸ್​ ಸಾಧ್ಯತೆ

ಇತ್ತೀಚೆಗೆ ನಡೆದ ಶ್ರೀಲಂಕಾ, ಟೀಮ್​ ಇಂಡಿಯಾ ನಡುವಿನ ಮೊದಲ ಏಕದಿನ ಪಂದ್ಯ ಟೈ ಆಗಿತ್ತು. ಇದಾದ ಬೆನ್ನಲ್ಲೇ 2ನೇ ಏಕದಿನ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದ್ದು, ಮುಖ್ಯ ಕೋಚ್​​ ಗಂಭೀರ್​ಗೆ ಭಾರೀ ಮುಖಭಂಗ ಆಗಿದೆ. ಟೀಮ್​ ಇಂಡಿಯಾ ಮಿಡಲ್​ ಆರ್ಡರ್​ ಬ್ಯಾಟಿಂಗ್​ನಲ್ಲಿ ಸಂಪೂರ್ಣ ವೈಫಲ್ಯವಾಗಿದ್ದು, ಈ ಮೂವರು ಆಟಗಾರರು ಗಂಭೀರ್​ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು, ಟೀಮ್​ ಇಂಡಿಯಾ ಮುಖ್ಯ ಕೋಚ್​​ ಗಂಭೀರ್​ಗೆ ಏಕದಿನ ಸರಣಿಯಲ್ಲಿ ಭಾರೀ ಮುಖಭಂಗ ಆಗಿದೆ. ಈ ಸರಣಿ ಸೋಲಿನಿಂದ ಪಾರಾಗಲು ಗೌತಮ್​ ಗಂಭೀರ್​ ಭಾರತ ತಂಡದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಭಾರೀ ಬದಲಾವಣೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲ ಪಂದ್ಯಕ್ಕೆ ಹೋಲಿಸಿದ್ರೆ 2ನೇ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸ್ಥಾನದಲ್ಲಿ ಬದಲಾವಣೆಯಾಗಿತ್ತು. ಶಿವಂ ದುಬೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರು. ಆದರೆ, 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ದುಬೆಗೆ ಖಾತೆ ಕೂಡ ತೆರೆಯಲಿಲ್ಲ. ಇನ್ನೊಂದೆಡೆ ಕೆ.ಎಲ್​ ರಾಹುಲ್​ ಕೂಡ ಸೊನ್ನೆ ಸುತ್ತಿದರು. ಗಂಭೀರ್ ಶಿಷ್ಯ ಎಂದೇ ಖ್ಯಾತಿಯಾಗಿರೋ ಶ್ರೇಯಸ್​ ಅಯ್ಯರ್​ ಸಹ ಕೇವಲ 7 ರನ್​ಗೆ ವಿಕೆಟ್​ ಒಪ್ಪಿಸಿದ್ರು.

ಸದ್ಯ ಈ ಮೂವರು ಬ್ಯಾಟರ್ಸ್ ಗಂಭೀರ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗಾಗಿ ಸೋಲಿನಿಂದ ಬಚಾವ್​ ಆಗಲು ಗಂಭೀರ್​ ಈ ಮೂವರನ್ನು ಪ್ಲೇಯಿಂಗ್‌ ಎಲೆವೆನ್​​ನಿಂದ ಹೊರಗಿಡೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ಭಾರತದ ಸೋಲಿಗೆ ಈ ಆಟಗಾರರೇ ಕಾರಣ’- ಅಸಮಾಧಾನ ಹೊರಹಾಕಿದ ಟೀಮ್​ ಇಂಡಿಯಾ ಕೋಚ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಮ್​ ಇಂಡಿಯಾ ಮೂವರು ಸ್ಟಾರ್​ ಆಟಗಾರರಿಗೆ ಬಿಗ್​ ಶಾಕ್​​.. 3ನೇ ಏಕದಿನ ಪಂದ್ಯದಿಂದ ಔಟ್​​!

https://newsfirstlive.com/wp-content/uploads/2024/05/Team-India_m.jpg

Load More