newsfirstkannada.com

ವಿನೇಶ್ ಫೋಗಟ್ ವಿವಾದಕ್ಕೆ ಹೊಸ ಟ್ವಿಸ್ಟ್; ನಿವೃತ್ತಿ ಘೋಷಣೆ ನಂತರವೂ ಪದಕದ ಭರವಸೆ ಮತ್ತೆ ಚಿಗುರಿದೆ..!

Share :

Published August 8, 2024 at 1:04pm

Update August 8, 2024 at 1:09pm

    ವಿನೇಶ್ ಅನರ್ಹ ವಿವಾದ CAS ಮೆಟ್ಟಿಲೇರಿದ್ದು, ಶೀಘ್ರದಲ್ಲೇ ತೀರ್ಪು

    ನಿನ್ನೆ ರಾತ್ರಿಯೇ ಮೇಲ್ಮನವಿ ಸಲ್ಲಿಸಿರುವ ಕುಸ್ತಿಪಟು ವಿನೇಶ್ ಫೋಗಟ್

    CAS ಅಂದರೆ ಏನು..? ಅದು ಯಾಕಾಗಿ ರಚನೆಗೊಂಡಿದೆ..?

ಭಾರತೀಯ ಹೆಮ್ಮೆಯ ಪುತ್ರಿ ವಿನೇಶ್ ಫೋಗಟ್ ಅವರ ಅನರ್ಹ ವಿಚಾರವು ಕೋರ್ಟ್ ಮೆಟ್ಟಿಲೇರಿದೆ. ಪ್ಯಾರಿಸ್ ಒಲಿಂಪಿಕ್ಸ್​​ನ 50 ಕೆಜಿ ವಿಭಾಗದ ಮಹಿಳೆಯ ಕುಸ್ತಿಯ ಫೈನಲ್​​ನಿಂದ ಫೋಗಟ್ ಅವರನ್ನು ಅನರ್ಹಗೊಳಿಸಿರುವ ವಿವಾದಕ್ಕೆ ಸಂಬಂಧಿಸಿ ಸಿಎಎಸ್​ (Court of Arbitration for Sports) ಶೀಘ್ರದಲ್ಲೇ ತೀರ್ಪು ನೀಡಲಿದೆ.

ಅನರ್ಹ ಮಾಡಿರೋದನ್ನು ಪ್ರಶ್ನಿಸಿ ನಿನ್ನೆ ರಾತ್ರಿ ಮೇಲ್ಮನವಿ ಸಲ್ಲಿಸಲಾಗಿದೆ. ಮೊದಲು ಫೈನಲ್‌ನಲ್ಲಿ ಆಡಲು ಅವಕಾಶ ನೀಡುವಂತೆ ಕೋರಿ ಸಿಎಎಸ್​ಗೆ ಮನವಿ ಮಾಡಿಕೊಂಡಿದ್ದರು. ನಂತರ ಮನವಿಯನ್ನು ಬದಲಾಯಿಸಿ ಜಂಟಿಯಾಗಿ ಬೆಳ್ಳಿ ಪದಕ ನೀಡುವಂತೆ ಮೇಲ್ಮನವಿ ಸಲ್ಲಿದ್ದಾರೆ. ಈ ಮೇಲ್ಮನವಿಯ ತೀರ್ಪು ಇಂದೇ ಬರಲಿದೆ. ಹೀಗಾಗಿ ವಿನೇಶ್ ನಿವೃತ್ತಿ ಘೋಷಣೆಯ ನಂತರವೂ ಪದಕದ ಭರವಸೆ ಹಾಗೆಯೇ ಉಳಿದಿದೆ.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ವಿನೇಶ್ ಫೋಗಟ್ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಅದ್ಭುತ ಪ್ರದರ್ಶನ ನೀಡಿ ಸತತ ಮೂರು ಪಂದ್ಯಗಳನ್ನು ಗೆದ್ದರು. ಆದರೆ ಫೈನಲ್ ಪಂದ್ಯದಲ್ಲಿ ವಿನೇಶ್ ಪೋಗಟ್ ಅವರು 100 ಗ್ರಾಂ ತೂಕ ಹೆಚ್ಚಿದ್ದ ಕಾರಣ ಅವರನ್ನು ಟೂರ್ನಿಯಿಂದ ಅನರ್ಹ ಮಾಡಲಾಗಿದೆ. ಅನರ್ಹ ಬೆನ್ನಲ್ಲೇ ಅವರು ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿವೃತ್ತಿಯಾಗುವ ಮುನ್ನ ವಿನೇಶ್ ತನ್ನ ಅನರ್ಹತೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಚಿನ್ನ ಗೆಲ್ಲುವ ಬಗ್ಗೆ ನೀರಜ್ ಚೋಪ್ರಾ ಹೇಳಿದ್ದೇನು..? ಇಂದು ದೊಡ್ಡ ನಿರೀಕ್ಷೆಯಲ್ಲಿ ಭಾರತ..

ಏನಿದು CAS..?
1984ರಲ್ಲಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (CAS) ಸ್ಥಾಪನೆಗೊಂಡಿದೆ. ಕ್ರೀಡೆಗೆ ಸಂಬಂಧಿಸಿದ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಕಾನೂನಾತ್ಮಕವಾಗಿ ಬಗೆಹರಿಸುತ್ತದೆ. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ನ್ಯೂಯಾರ್ಕ್ ಹಾಗೂ ಸಿಡ್ನಿಯಲ್ಲಿ ಬ್ರ್ಯಾಂಚ್ ಹೊಂದಿದೆ. ಒಲಿಂಪಿಕ್ಸ್ ಆಯೋಜನೆಗೊಳ್ಳುವ ಆತಿಥೇಯ ನಗರಗಳಲ್ಲೂ ತಾತ್ಕಾಲಿಕ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. CAS ಯಾವುದೇ ಕ್ರೀಡಾ ಸಂಸ್ಥೆಗೆ ಒಳಪಟ್ಟಿಲ್ಲ, ಇದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ICAS)ನ ಆಡಳಿತಾತ್ಮಕ ಮತ್ತು ಹಣಕಾಸು ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನೇಶ್ ಫೋಗಟ್ ವಿವಾದಕ್ಕೆ ಹೊಸ ಟ್ವಿಸ್ಟ್; ನಿವೃತ್ತಿ ಘೋಷಣೆ ನಂತರವೂ ಪದಕದ ಭರವಸೆ ಮತ್ತೆ ಚಿಗುರಿದೆ..!

https://newsfirstlive.com/wp-content/uploads/2024/08/VINESH-POGHAT-1-1.jpg

Load More