newsfirstkannada.com

ಮೂಗಿನಿಂದ ರಕ್ತ ಬರುತ್ತಲೇ ಇತ್ತು.. ಆದರೂ ಛಲ ಬಿಡಲಿಲ್ಲ.. ಭಾರತಕ್ಕೆ ಪದಕ ತಂದ್ಕೊಟ್ಟ ಅಮನ್ ಯಾರು

Share :

Published August 10, 2024 at 7:21am

Update August 10, 2024 at 7:29am

    ಭಾರತಕ್ಕೆ ಒಲಿದ ಮತ್ತೊಂದು ಪದಕದ ಬೇಟೆಯ ಜರ್ನಿ ಸುಲಭ ಇರಲಿಲ್ಲ

    ಕಂಚಿನ ಪದಕ್ಕಾಗಿ ನಡೆದ ಪಂದ್ಯದಲ್ಲಿ 13-5 ಸೆಟ್​ಗಳಿಂದ ಗೆದ್ದ ಅಮನ್

    ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಒಟ್ಟು 6 ಮೆಡಲ್ ಬಂದಿವೆ

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದೆ. 57 ಕೆಜಿಯ ಫ್ರೀ ಸ್ಟೈಲ್ ವಿಭಾಗದಲ್ಲಿ ಕುಸ್ತಿಪಟು ಅಮನ್ ಸೆಹ್ರಾವತ್ ಕಂಚಿನ ಪದಕ ಗೆದ್ದಿದ್ದಾರೆ. ಇದು ಒಲಿಂಪಿಕ್ಸ್​​ನಲ್ಲಿ ಗೆದ್ದ ಅವರ ಮೊದಲ ಪದಕವಾಗಿದೆ.

ಈ ಮೂಲಕ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಒಟ್ಟು 6 ಮೆಡಲ್ ಬಂದಂತಾಗಿದೆ. ಅಮನ್ ಅವರು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪೊರ್ಟೊ ರಿಕೋದ (Puerto Rico) ಡೆರಿಯನ್ ಟೊಯಿ ಕ್ರುಜ್ (Darian Toi Cruz) ಅವರನ್ನು 13-5 ಸೆಟ್​ಗಳಿಂದ ಸೋಲಿಸಿದರು. ಇದರೊಂದಿಗೆ ಒಲಿಂಪಿಕ್ಸ್​ನಲ್ಲಿ ದೇಶಕ್ಕಾಗಿ ಪದಕ ಗೆದ್ದ ಏಳನೇ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಇವರಿಬ್ಬರಿಗೆ ಸಂಬಂಧಿಸಿದ ಮತ್ತೊಂದು ವಿಚಾರ ನಿಮ್ಗೆ ಗೊತ್ತಾ?

ಹೇಗಿತ್ತು ಪದಕದ ಬೇಟೆ..?
ಅಂದ್ಹಾಗೆ ಅಮಾನ್ ಪದಕ ಗೆಲ್ಲುವ ಹಾದಿ ಸುಲಭವಾಗಿರಲಿಲ್ಲ. ವಾಸ್ತವವಾಗಿ ಕಂಚಿನ ಪದಕ ಗೆಲ್ಲುವ ವೇಳೆ ಅಮನ್ ಗಾಯಗೊಂಡರು. ಪಂದ್ಯದ ವೇಳೆ ಅವರ ಮೂಗಿನಿಂದ ರಕ್ತ ಬರುತ್ತಿತ್ತು. ಆದರೂ ಧೈರ್ಯಗೆಡದ ಅಮನ್ ಸೋರುತ್ತಿದ್ದ ರಕ್ತದ ನಡುವೆಯೇ ಸೆಣಸಾಡಿದರು. ಒಂದೇ ಸಮನೆ ರಕ್ತ ಬರುತ್ತಿದ್ದರೂ ರೆಫರಿಯಿಂದ ವಿಶ್ರಾಂತಿಗೆ ಸಮಯ ಕೇಳಲಿಲ್ಲ. ಇನ್ನು ಎದುರಾಳಿ ಡೇರಿಯನ್ ಟೊಯಿ ಕ್ರೂಜ್ ಪಂದ್ಯದ ವೇಳೆ ಅಮಾನ್ ಎದುರು ಬೇಗ ಸುಸ್ತಾದರು. ಗಾಯವನ್ನು ಉಲ್ಲೇಖಿಸಿ ಎರಡು ಬಾರಿ ವಿರಾಮ ತೆಗೆದುಕೊಂಡರು.

ಸುಲಭ ಇರಲಿಲ್ಲ ಜರ್ನಿ..
ಇನ್ನು ಒಲಿಂಪಿಕ್ಸ್​ನಲ್ಲಿ ಅಮನ್ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. 21 ವರ್ಷದ ಅಮನ್ ಹರಿಯಾಣದ ಬಜ್ಜರ್​ನಿಂದ ಬಂದವರು. 10 ವರ್ಷ ಇದ್ದಾಗ ಅವರ ತಂದೆ 2013ರಲ್ಲಿ ಹೃದಯಾಘಾತಕ್ಕೆ ನಿಧನರಾದರು. ತಂದೆ ಸಾವನ್ನಪ್ಪಿ ಒಂದು ವರ್ಷ ಕಳೆಯುವಷ್ಟರಲ್ಲಿ ತಾಯಿ ಕೂಡ ನಿಧನರಾದರು. ಗೃಹಿಣಿಯಾಗಿದ್ದ ಅಮನ್ ತಾಯಿ ಕಮಲೇಶ್ 2014ರಲ್ಲಿ ತೀರಿಕೊಂಡರು. ತಂದೆ-ತಾಯಿಯನ್ನು ಕಳೆದುಕೊಂಡ ಅಮನ್​ ಸಹಾಯಕ್ಕೆ ಬಂದಿದ್ದು ಅಜ್ಜ. ಮೊಮ್ಮಗ ಕುಸ್ತಿಯಲ್ಲಿ ಹೋರಾಡಿ ಗೆಲ್ಲುವಂತೆ ಸಹಾಯ ಮಾಡಿದ್ದ ಅವರ ಅಜ್ಜ ಎಂದು ತಿಳಿದುಬಂದಿದೆ.

ಅಮನ್ ಅವರು ರವಿ ದಹಿಯಾ ನನ್ನ ಆರಾಧ್ಯ ದೈವ ಎಂದು ಪರಿಗಣಿಸಿ ಬೆವರು ಸುರಿಸಿದ್ದರು. ಟೋಕಿಯೋ ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಅವರನ್ನು ಸೋಲಿಸುವ ಮೂಲಕ ಅಮನ್ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಅನ್ನೋದು ಕೂಡ ವಿಶೇಷ.

ಇದನ್ನೂ ಓದಿ:ನೀರಜ್ ಚೋಪ್ರಾ ಎದುರು ಎಲ್ಲವೂ ವಿಫಲ.. ಯಾವ ಭಾರತೀಯ ಕ್ರೀಡಾಪಟುಗಳು ಮಾಡಿರಲಿಲ್ಲ ಈ ಸಾಧನೆ!

ಅಮನ್ ಸೆಮಿಫೈನಲ್​ನಲ್ಲಿ ಸೋಲು
ಅಮನ್ ಸೆಮಿಫೈನಲ್​ನಲ್ಲಿ ಜಪಾನ್ ರೇ ಹಿಗುಚಿ ವಿರುದ್ಧ 0-10 ಅಂತರದಿಂದ ಸೋಲನ್ನು ಅನುಭವಿಸಿದರು. ಸೆಮಿಫೈನಲ್​​​ನಲ್ಲಿ ಮೊದಲ ಶ್ರೇಯಾಂಕದ ಜಪಾನ್​ನ ಕುಸ್ತಿಪಟು ವಿರುದ್ಧ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಈ ಪಂದ್ಯವು ಕೇವಲ 2 ನಿಮಿಷದ 14 ಸೆಕೆಂಡ್​ಗಳಲ್ಲಿ ನಡೆಯಿತು.

ಕುಸ್ತಿಯಲ್ಲಿ ಅಮನ್ ಪಯಣ
ಅಮನ್ 2021ರಲ್ಲಿ ಮೊದಲ ರಾಷ್ಟ್ರೀಯ ಚಾಂಪಿಯನ್​ಶಿಪ್ ಪ್ರಶಸ್ತಿ ಗೆದ್ದರು. 2022ರಲ್ಲಿ ನಡೆದ ಏಷ್ಯನ್ ಗೇಮ್ಸ್​​ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಅಮನ್ 2023ರ ಏಷ್ಯನ್ ಕುಸ್ತಿ ಚಾಂಪಿಯನ್​ಶಿಪ್​​ನಲ್ಲಿ ಚಿನ್ನದ ಪದಕ ಗೆದ್ದರು. ನಂತರ 2024ರಲ್ಲಿ ಜಾಗ್ರೇಬ್ ಓಪನ್ ವ್ರೆಸ್ಲಿಂಗ್​ ಟೂರ್ನಮೆಂಟ್​ನಲ್ಲಿ ಚಿನ್ನದ ಪದಕ ಗೆದ್ದರು. ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ದೇಶದ ಏಕೈಕ ಪುರುಷ ಕಸ್ತಿಪಟು ಅಮನ್.

ಇದನ್ನೂ ಓದಿ:ಆಘಾತಕಾರಿ ಸುದ್ದಿ.. ಸುನಿತಾ ವಿಲಿಯಮ್ಸ್ ಭೂಮಿಗೆ ಈ ವರ್ಷ ಬರಲ್ಲ.. ಮತ್ತೊಂದು ಅಪ್​​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂಗಿನಿಂದ ರಕ್ತ ಬರುತ್ತಲೇ ಇತ್ತು.. ಆದರೂ ಛಲ ಬಿಡಲಿಲ್ಲ.. ಭಾರತಕ್ಕೆ ಪದಕ ತಂದ್ಕೊಟ್ಟ ಅಮನ್ ಯಾರು

https://newsfirstlive.com/wp-content/uploads/2024/08/Aman-Sehrawat.jpg

Load More