ನೀಲಿ ಚಿತ್ರ ನೋಡಿ ಉತ್ತೇಜನಗೊಂಡು ಅತ್ಯಾಚಾರ ಮಾಡಿದ್ನಾ ನೀಚ
ಬಂಧಿತ ಆರೋಪಿ ಸಂಜಯ್ ರಾಯ್ ಮೊಬೈಲ್ನಲ್ಲಿ ಸಿಕ್ಕಿದ್ದೇನು?
ಬ್ಲ್ಯೂಟೂಥ್, ಸಿಸಿಟಿವಿ ಫೂಟೇಜ್ ಒದಗಿಸಿದ ಅಸಲಿ ಸಾಕ್ಷಿಗಳೇನು?
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕೊಲೆಗಾರ ನಿರಂತರ ವಿಚಾರಣೆ ಹಲವು ಸತ್ಯಗಳನ್ನು ಬಯಲಿಗೆ ಎಳೆಯುತ್ತಿವೆ. ಈಗ ಪೊಲೀಸ್ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ಆರೋಪಿ ಸಂಜಯ್ ರಾಯ್ಗೆ ನೀಲಿ ಚಿತ್ರಗಳನ್ನು ನೋಡುವ ಗೀಳು ಇತ್ತು. ಅಂದು ಅತ್ಯಾಚಾರ ಮಾಡುವ ಮೊದಲು ಕೂಡ ಅವನು ನೀಲಿ ಚಿತ್ರಗಳನ್ನು ನೋಡಿಕೊಂಡು ಬಂದಿದ್ದ. ಪೋರ್ನ್ ಚಿತ್ರಗಳನ್ನು ನೋಡಿ, ಉತ್ತೇಜಿತನಾಗಿದ್ದ ಪರಮಪಾಪಿ ಏಕಾಂಗಿಯಾಗಿ ಸಿಕ್ಕ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರಗೈದು ಹತ್ಯೆ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ: ವೈದ್ಯೆ ರೇಪ್ & ಮರ್ಡರ್ ಕೇಸ್ಗೆ ಹೊಸ ಟ್ವಿಸ್ಟ್.. ಹಂತಕನ ಹಿಡಿದುಕೊಟ್ಟಿದ್ದೇ ಆ ವಸ್ತು! ಕೊಲೆ ರಹಸ್ಯ ಬಯಲು
ಮೂಲತಃ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಸಂಜಯ್ ರಾಯ್ಗೆ ಅತ್ಯಾಚಾರ ನಡೆದ ಆ ಆಸ್ಪತ್ರೆಯಲ್ಲಿ ಫ್ರೀ ಎಕ್ಸಿಟ್ ಮತ್ತು ಫ್ರೀ ಎಂಟ್ರಿಯಿತ್ತು. ಮೊದಲಿಂದಲೂ ಆಸ್ಪತ್ರೆಯೊಂದಿಗೆ ಗುರುತಿಸಿಕೊಂಡಿದ್ದ ಸಂಜಯ್ನನ್ನು ಅಲ್ಲಿ ಯಾರು ಪ್ರಶ್ನಿಸುತ್ತಿರಲಿಲ್ಲ. ಇದರಿಂದಾಗಿಯೇ ಅಂದು ಬೆಳಗ್ಗೆ 4ರ ಸುಮಾರಿಗೆ ಆಸ್ಪತ್ರೆಯ ಒಳಕ್ಕೆ ಹೋಗಿದ್ದ ಸಂಜಯ್ ಸಿಸಿಟಿವಿ ಫೂಟೇಜ್ನಲ್ಲಿ ಕಾಣಿಸಿಕೊಂಡಿದ್ದ.
ಅವನ ಮೇಲೆ ಮೊದಲ ಸಂಶಯ ಮೂಡಿಸಿದ್ದೇ ಆ ಒಂದು ಫೂಟೇಜ್, ಆಸ್ಪತ್ರೆಯ ಒಳಗೆ ಹೋಗುವಾಗ ಅವನ ಕಿವಿಯಲ್ಲಿದ್ದ ಬ್ಲ್ಯೂಟೂಥ್, ವಾಪಸ್ ಬರುವಾಗ ಕಾಣಿಸಿರಲಿಲ್ಲ. ಅದು ಅಲ್ಲದೇ, ಕೊಲೆಯಾಗಿ ಬಿದ್ದಿದ್ದ ವೈದ್ಯೆಯ ಪಕ್ಕದಲ್ಲಿಯೂ ಕೂಡ ಬ್ಲ್ಯೂಟೂಥ್ ಒಂದು ಸಿಕ್ಕಿತ್ತು. ಈ ಎಲ್ಲಾ ಸಾಕ್ಷಿಗಳನ್ನು ತಾಳೆ ಹಾಕಿ ನೋಡಿದಾಗ ಈ ನೀಚ ಕೆಲಸ ಮಾಡಿದ್ದು ಸಂಜಯ್ ರಾಯ್ನೇ ಎಂದು ಪೊಲೀಸರಿಗೆ ದೃಢವಾಗಿದೆ. ಕೂಡಲೇ ಅವನನ್ನು ವಶಕ್ಕೆ ಪಡೆದ ಪೊಲೀಸರು ಅವನ ಮೊಬೈಲ್ ಚೆಕ್ ಮಾಡಿದಾಗ ಅಲ್ಲಿಯೂ ಕೂಡ ನೀಲಿ ಚಿತ್ರಗಳು ಗ್ಯಾಲರಿಯಲ್ಲಿದ್ದದ್ದು ಕಂಡು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ